ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧಂಬರ್ಧ ತಿಂದು ಆಹಾರ ಡೆಲಿವರಿ ಮಾಡ್ತಿದ್ದ ಝೊಮಾಟೊ ನೌಕರ ಅಮಾನತು

|
Google Oneindia Kannada News

ಚೆನ್ನೈ, ಡಿಸೆಂಬರ್ 12: ಡೆಲಿವರಿ ಮಾಡಬೇಕಾಗಿದ್ದ ಆಹಾರವನ್ನು ರಸ್ತೆ ಮಧ್ಯೆದಲ್ಲೇ ಅರ್ಧಂಬರ್ಧ ತಿಂದು ಕೊನೆಗೆ ಗ್ರಾಹಕರಿಗೆ ಡೆಲಿವರಿ ಮಾಡುತ್ತಿದ್ದ ನೌಕರನನ್ನು ಝೊಮಾಟೊ ಸಂಸ್ಥೆ ಅಮಾನತು ಮಾಡಿದೆ.

ರಸ್ತೆ ಮಧ್ಯದಲ್ಲೇ ನಿಂತು ಬೈಕ್‌ಮೇಲೆ ಕುಳಿತು ಡೆಲಿವರಿ ಮಾಡಬೇಕಾಗಿದ್ದ ಕವರ್‌ಗಳನ್ನು ತೆಗೆದು ಅದರಿಂದ ಸ್ವಲ್ಪಸ್ವಲ್ಪವೇ ಆಹಾರವನ್ನು ತಿಂದು ಬಳಿಕ ಹಾಗೆಯೇ ಪ್ಯಾಕ್ ಮಾಡಿಕೊಂಡು ಹೋಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಎಚ್ಚೆತ್ತುಕೊಂಡ ಸಂಸ್ಥೆ ಆತನನ್ನು ಕೆಲಸದಿಂದ ಅಮಾನತು ಮಾಡಿದ್ದು, ಇದೀಗ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದೆ.

ತಮಿಳುನಾಡಿನ ಮಧುರೈನಲ್ಲಿ ಝೊಮಾಟೊ ಪ್ರತಿನಿಧಿಯೊಬ್ಬ ಗ್ರಾಹಕರಿಗೆ ವಿತರಣೆ ಮಾಡಲು ಕೊಂಡೊಯ್ಯುತ್ತಿದ್ದ ಆಹಾರ ಪೊಟ್ಟಣಗಳನ್ನು ತೆಗೆದು ಸೇವಿಸುತ್ತಿದ್ದ, ಬಳಿಕ ಹಾಗೆಯೇ ಅದನ್ನು ನೀಟಾಗಿ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಇದು ವಾಟ್ಸಪ್, ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Zomato responds after worker caught on camera eating food from delivery parcel

ಕೆಲವರು ಆತ ಹೊಟ್ಟೆ ಪಾಡಿಗಾಗಿ ಏನೋ ಮಾಡಿದ್ದಾನೆ ಅದಕ್ಕೆ ಇಷ್ಟು ದೊಡ್ಡ ಶಿಕ್ಷೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ ಇನ್ನು ಕೆಲವರು ಆತನ ಹಸಿವಾದರೆ ಅಷ್ಟು ತಿನ್ನಬಹುದಿತ್ತು ಆದರೆ ಎಂಜಲನ್ನು ಹಾಗೆಯೇ ಪ್ಯಾಕ್ ಮಾಡಿ ಗ್ರಾಹಕರಿಗೆ ಮೋಸ ಮಾಡಿದ್ದು ತಪ್ಪು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

English summary
Restaurant search and food delivery startup Zomato has promised to introduce precautionary measures against 'food tampering' after one of its delivery men was captured on camera eating from what looks like a customer’s food parcel on way to delivery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X