ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ಗೆಲುವಿಗೆ ನಾಲಗೆ ಕತ್ತರಿಸಿಕೊಂಡು ಹರಕೆ ತೀರಿಸಿದ ಮಹಿಳೆ

|
Google Oneindia Kannada News

ಚೆನ್ನೈ, ಮೇ 3: ಡಿಎಂಕೆ ಗೆಲುವು ಸಾಧಿಸಿದ್ದಕ್ಕೆ ಮಹಿಳೆಯೊಬ್ಬರು ತಮ್ಮ ನಾಲಗೆ ಕತ್ತರಿಸಿಕೊಂಡು ಹರಕೆ ತೀರಿಸಿರುವ ಸಂಗತಿ ತಮಿಳುನಾಡಿನಲ್ಲಿ ಸೋಮವಾರ ನಡೆದಿದೆ.

ಈ ಮುನ್ನ, ತಮಿಳುನಾಡಿನಲ್ಲಿ ಡಿಎಂಕೆ ಗೆದ್ದರೆ ದೇವಿಗೆ ತಮ್ಮ ನಾಲಗೆ ಕತ್ತರಿಸಿ ಅರ್ಪಿಸುವುದಾಗಿ 32 ವರ್ಷದ ವನಿತಾ ಎಂಬುವರು ಹರಕೆ ಕಟ್ಟಿಕೊಂಡಿದ್ದರು. ಭಾನುವಾರ ಚುನಾವಣಾ ಫಲಿತಾಂಶ ಹೊರಬಂದಿದ್ದು, ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಸೋಮವಾರ ಬೆಳಿಗ್ಗೆ ವನಿತಾ ಮುತ್ತಾಲಯಮ್ಮನ ದೇವಸ್ಥಾನಕ್ಕೆ ಹೋಗಿ ನಾಲಗೆ ಕತ್ತರಿಸಿಕೊಂಡು ದೇವಿಗೆ ಅರ್ಪಿಸಲು ಮುಂದಾಗಿದ್ದಾರೆ. ಆದರೆ ಕೊರೊನಾ ಕಾರಣವಾಗಿ ದೇವಸ್ಥಾನ ಮುಚ್ಚಿದ್ದರಿಂದ ಗೇಟ್ ಬಳಿಯೇ ನಾಲಗೆ ಹಾಕಿ ಅಲ್ಲಿಯೇ ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ; ಪಕ್ಷವಾರು ಮತಗಳ ಲೆಕ್ಕ ತಮಿಳುನಾಡು ವಿಧಾನಸಭೆ ಚುನಾವಣೆ; ಪಕ್ಷವಾರು ಮತಗಳ ಲೆಕ್ಕ

ದಶಕಗಳ ನಂತರ ಡಿಎಂಕೆ ಅಧಿಕಾರಕ್ಕೆ ಬಂದಿದೆ. ಹತ್ತು ವರ್ಷಗಳಿಂದ ವಿರೋಧ ಪಕ್ಷವಾಗಿದ್ದ ಡಿಎಂಕೆ ಈಗ ಆಡಳಿತ ಚುಕ್ಕಾಣಿ ಹಿಡಿಯಲಿದೆ. 234 ಕ್ಷೇತ್ರಗಳ ಪೈಕಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳಲ್ಲಿ ಜಯಗಳಿಸಿದೆ. ಡಿಎಂಕೆ ಪಕ್ಷ ಏಕಾಂಗಿಯಾಗಿ 133 ಸ್ಥಾನಗಳಲ್ಲಿ ಜಯಗಳಿಸಿದೆ.

Woman Cuts Off Her Tongue And Offered To Diety As DMK Wins In Tamil Nadu

ಪಕ್ಷದ ಮುಖ್ಯಸ್ಥ ಎಂ. ಕೆ. ಸ್ಟಾಲಿನ್ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು 20 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 4ರಲ್ಲಿ ಗೆಲುವು ಸಾಧಿಸಿದೆ.

English summary
A Woman in Tamil Nadu cut off her tongue and offered it to deity in order to keep her promise after DMK won in tamil nadu,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X