ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲ ಸಿನಿಮಾ ಲೈಬ್ರರಿ ಸೇವೆ ನೀಡುವ ವೆಬ್ ಸೈಟ್ ಸೇವೆಗೆ ನಿರ್ಬಂಧ

ಅಂತರ್ಜಾಲದ ಸಿನಿಮಾ ಭಂಡಾರ ಸೇವೆ ನೀಡುವ ವೆಬ್ ಸೈಟ್ ಗಳ ಸೇವೆಗೆ ನಿರ್ಬಂಧ ವಿಧಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ. ದೇಶದ ಸುಮಾರು 2,600 ಅಂತರ್ಜಾಲ ಸೇವಾ ಕಂಪನಿಗಳಿಗೆ ಸೂಚನೆ ನೀಡಿದ ನ್ಯಾಯಾಲಯ.

|
Google Oneindia Kannada News

ಚೆನ್ನೈ, ಆಗಸ್ಟ್ 11: ಅಂತರ್ಜಾಲದಲ್ಲಿ ಸಿನಿಮಾ ಕೋಶ, ಭಂಡಾರದಂತಹ ಸೇವೆ ನೀಡುವ ವೆಬ್ ಸೈಟ್ ಗಳಿಗೆ ಕಡಿವಾಣ ಹಾಕುವಂತೆ ಮದ್ರಾಸ್ ಹೈಕೋರ್ಟ್ ಸುಮಾರು ಭಾರತದಲ್ಲಿ ಅಂತರ್ಜಾಲ ಸೇವೆ ನೀಡುತ್ತಿರುವ ಸುಮಾರು 2,650 ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಶಾರೂಖ್ ಚಿತ್ರ ನೋಡಿ ಪ್ರೇಕ್ಷಕ ಸುಷ್ಮಾಜಿಗೆ ಟ್ವೀಟ್ ಮಾಡಿದ್ದು ಹೀಗೆ!ಶಾರೂಖ್ ಚಿತ್ರ ನೋಡಿ ಪ್ರೇಕ್ಷಕ ಸುಷ್ಮಾಜಿಗೆ ಟ್ವೀಟ್ ಮಾಡಿದ್ದು ಹೀಗೆ!

ಆನ್ ಲೈನ್ ನಲ್ಲಿ ಹಿಂದಿ ಸೇರಿದಂತೆ ಹಲವಾರು ಭಾರತೀಯ ಸಿನಿಮಾಗಳ ಸೋರಿಕೆ ಯಥೇಚ್ಚವಾಗಿ ಮುಂದುವರಿದಿದ್ದು, ಇದು ಹಕ್ಕು ಸ್ವಾಮ್ಯದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ.

With Internet Archive ban, Bollywood's fight against Piracy threatens online freedom

ಹೊಸ ಚಿತ್ರಗಳು ಬಿಡುಗಡೆಯಾದ ತಕ್ಷಣವೇ ಅವುಗಳನ್ನು ಕದ್ದು ಅವುಗಳ ವಿಡಿಯೋ ಗಳನ್ನು ಆನ್ ಲೈನ್ ಮಾರ್ಗವಾಗಿ ಪ್ರೇಕ್ಷಕರಿಗೆ ತಲುಪಿಸುವ ಬೃಹತ್ ಜಾಲವೊಂದು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಅಂಥ ಚಟುವಟಿಕೆಗಳನ್ನು ಹತ್ತಿಕ್ಕಬೇಕೆಂದು ಹೇಳಿರುವ ನ್ಯಾಯಾಲಯ ಈ ನಿಟ್ಟಿನಲ್ಲಿ ಹಲವಾರು ಕಂಪನಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿ, ಅಂತರ್ಜಾಲದ ಮೂಲಕ ಯಾವುದೇ ಸಿನಿಮಾ ಭಂಡಾರದ ವೆಬ್ ಸೈಟ್ ಗಳಿಗೆ ಭೇಟಿ ನೀಡುವ ಸೌಲಭ್ಯವನ್ನು ಕಡಿತಗೊಳಿಸುವಂತೆ ಹೇಳಿದೆ.

ಕಿಕಾಸ್ ಟೊರೆಂಟ್ ಬಂದ್, ಪೈರಸಿ ಕೊಂದ ಕಬಾಲಿಕಿಕಾಸ್ ಟೊರೆಂಟ್ ಬಂದ್, ಪೈರಸಿ ಕೊಂದ ಕಬಾಲಿ

ಹಾಗಾಗಿ, ಅಂಥ ಸಿನಿಮಾ ಭಂಡಾರಗಳಿರುವ ವೆಬ್ ಸೈಟ್ ಗಳಿಗೆ ಯಾವುದೇ ಪ್ರೇಕ್ಷಕ ಭೇಟಿ ನೀಡಲು ಯತ್ನಿಸಿದಾಗ, ಆತನ ಮೊಬೈಲ್ ನಲ್ಲೋ ಅಥವಾ ಕಂಪ್ಯೂಟರ್ ನಲೋ 'ಈ ವೆಬ್ ಸೈಟ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ' ಎಂಬ ಸೂಚನೆ ತೆರೆಯ ಮೇಲೆ ಮೂಡಲಿದೆ ಎಂದು ಮೂಲಗಳು ತಿಳಿಸಿವೆ.

English summary
In yet another instance of over-broad and disproportionate online censorship, the Madras high court has ordered 2,650 entire websites to be blocked nation-wide, as an interim measure against the infringement of copyright of certain films.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X