ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯದಿಂದ ನಿವೃತ್ತಿ ಎಂದು ಎಂಕೆ ಸ್ಟಾಲಿನ್ ಹೇಳಿದ್ದೇಕೆ?

|
Google Oneindia Kannada News

ಚೆನ್ನೈ, ಮೇ 15: ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರು ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳುಸಾಯಿ ಸೌಂದರರಾಜನ್ ಆರೋಪವನ್ನು ಸ್ಟಾಲಿನ್ ಅಲ್ಲಗಳೆದಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಆರೋಪವನ್ನು ಸ್ವತಃ ಸೌಂದರರಾಜನ್ ಅಥವಾ ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಿದ್ದೇ ಆದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಬಿಜೆಪಿ ನಾಯಕರೊಂದಿಗೆ ಸ್ಟಾಲಿನ್ ಮಾತುಕತೆ: ಬಾಂಬ್ ಸಿಡಿಸಿದ ಪಕ್ಷಾಧ್ಯಕ್ಷೆ!ಬಿಜೆಪಿ ನಾಯಕರೊಂದಿಗೆ ಸ್ಟಾಲಿನ್ ಮಾತುಕತೆ: ಬಾಂಬ್ ಸಿಡಿಸಿದ ಪಕ್ಷಾಧ್ಯಕ್ಷೆ!

ಮೇ 13 ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸ್ಟಾಲಿನ್ ಅವರನ್ನು ಭೇಟಿ ಮಾಡಿ ತೃತೀಯ ರಂಗದ ಬಗ್ಗೆ ಮಾತನಾಡಿದ್ದು, ಆ ಪ್ರಸ್ತಾಪವನ್ನು ಸ್ಟಾಲಿನ್ ತಳ್ಳಿಹಾಕಿದ್ದರು. ಈ ಘಟನೆಯ ನಂತರ ಅವರು ಬಿಜೆಪಿ ನಾಯಕರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ, ಬಿಜೆಪಿ ಜೊತೆ ಮೈತ್ರಿಗೆ ಅವರು ತೆರೆಮರೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಮಿಳುಸಾಯಿ ಅವರು ಹೇಳಿದ್ದರು.

ಬಿಜೆಪಿ ನಾಯಕರೊಂದಿಗೆ ಸ್ಟಾಲಿನ್ ಮಾತುಕತೆ

ಬಿಜೆಪಿ ನಾಯಕರೊಂದಿಗೆ ಸ್ಟಾಲಿನ್ ಮಾತುಕತೆ

ಟ್ಯುಟಿಕಾರ್ನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತಮಿಳುಸಾಯಿ ಸೌಂದರರಾಜನ್ ಪತ್ರಕರ್ತರೊಂದಿಗೆ ಮಾತನಾಡುವ ಸಂದರ್ಭದಲ್ಲಿ, "ಒಂದೆಡೆ ರಾಹುಲ್ ಗಾಂಧಿ, ಒಂದು ಕಡೆ ಕೆಸಿಆರ್ ಮತ್ತೊಂದೆಡೆ ಮೋದಿ. ಎಲ್ಲರಿಗೂ ಡಿಎಂಕೆ ಬಣ್ಣ ಬದಲಾಯಿಸುವ ಪಕ್ಷ ಎಂಬುದು ಗೊತ್ತಿದೆ. ಆದ್ದರಿಂದ ಈಗಾಗಲೇ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಲು ಆರಂಭಿಸಿದ್ದಾರೆ. ಈ ಬಗ್ಗೆ ತೆರೆಮರೆಯ ಯತ್ನ ನಡೆಯುತ್ತಿದ್ದು, ನಾನು ಹೇಳುತ್ತಿರುವ ಮಾತು ನೂರಕ್ಕೆ ನೂರು ಸತ್ಯ" ಎಂದಿದ್ದರು.

ಕೆಸಿಆರ್ ಗೆ ಸ್ಟಾಲಿನ್ ರಿಂದ ಮತ್ತೆ ಮುಖಭಂಗ: ಹೋದ ದಾರಿಗೆ ಸುಂಕವಿಲ್ಲ!ಕೆಸಿಆರ್ ಗೆ ಸ್ಟಾಲಿನ್ ರಿಂದ ಮತ್ತೆ ಮುಖಭಂಗ: ಹೋದ ದಾರಿಗೆ ಸುಂಕವಿಲ್ಲ!

ಸ್ಟಾಲಿನ್ ಹೇಳಿದ್ದೇನು?

ಸ್ಟಾಲಿನ್ ಹೇಳಿದ್ದೇನು?

ಇದು ತಮಿಳುನಾಡು ಮಾತ್ರವಲ್ಲದೆ, ದೇಶದ ರಾಜಕೀಯದಲ್ಲೇ ತಲ್ಲಣ ಎಬ್ಬಿಸಿತ್ತು. ಆದರೆ ಈ ಕುರಿತು ಖಡಕ್ ಪ್ರತಿಕ್ರಿಯೆ ನೀಡಿದ ಸ್ಟಾಲಿನ್, ಸೌಂದರರಾಜನ್ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂಥ ಹೇಳಿಕೆ ನೀಡಬಾರದು. ನಾನು ಬಿಜೆಪಿ ನಾಯಕರೊಂದಿಗೆ ಮಾತನಾಡಿದ್ದು, ಅಥವಾ ಡಿಎಂಕೆಯ ಯಾವುದೇ ಸದಸ್ಯರು ಮಾತುಕತೆ ನಡೆಸಿದ್ದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಕೆಸಿಆರ್ ಪ್ರಧಾನಿ ಪಟ್ಟದ ಕನಸಿಗೆ ಅದೊಂದು ಮಾತಿಂದ ಕೊಳ್ಳಿ ಇಟ್ಟ ಸ್ಟಾಲಿನ್!ಕೆಸಿಆರ್ ಪ್ರಧಾನಿ ಪಟ್ಟದ ಕನಸಿಗೆ ಅದೊಂದು ಮಾತಿಂದ ಕೊಳ್ಳಿ ಇಟ್ಟ ಸ್ಟಾಲಿನ್!

ಸಾಕ್ಷಿ ಕೊಡಿ ಎಂದ ಡಿಎಂಕೆ

ಸಾಕ್ಷಿ ಕೊಡಿ ಎಂದ ಡಿಎಂಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಎಂಕೆ ವಕ್ತಾರ ಮನುರಾಜ್, "ತಮಿಳುಸಾಯಿ ಅವರು ಯಾವ ಆಧಾರದ ಮೇಲೆ ಈ ಹೇಳಿಕೆ ನೀಡಿದ್ದಾರೆ. ಅವರ ಮಾತಿಗೆ ಯಾವ ಸಾಕ್ಷಿ ಇದೆ? ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ಅವರು ಇಂಥ ಹೇಳಿಕೆಗಳನ್ನು ನೀಡುವಾಗ ಯೋಚಿಸಬೇಕು" ಎಂದಿದ್ದಾರೆ.

ಕೆಸಿಆರ್ ಗೆ ನಿರಾಸೆ ಉಂಟುಮಾಡಿದ ಸ್ಟಾಲಿನ್

ಕೆಸಿಆರ್ ಗೆ ನಿರಾಸೆ ಉಂಟುಮಾಡಿದ ಸ್ಟಾಲಿನ್

ತೃತೀಯ ರಂಗ ನಿರ್ಮಿಸುವ ಉದ್ದೇಶದಿಂದ ಸ್ಟಾಲಿನ್ ಅವರ ಬಳಿಗೆ ತೆರಳಿದ್ದ ಕೆ. ಚಂದ್ರಶೇಖರ್ ರಾವ್ ಅವರ ಪ್ರಸ್ತಾಪಕ್ಕೆ ಸ್ಟಾಲಿನ್ ಒಲ್ಲೆ ಎಂದಿದ್ದರು. ತಮ್ಮ ಬೆಂಬಲ ಏನಿದ್ದರೂ ಕಾಂಗ್ರೆಸ್ ನೇತೃತ್ವದ ಎನ್ ಡಿಎ ಗೆ. ಈ ಮೊದಲೂ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ನಾನು ಸೂಚಿಸಿದ್ದೆ, ಈಗಲೂ ನನ್ನ ಮಾತಿಗೆ ಬದ್ಧನಾಗಿದ್ದೇನೆ" ಎಂದು ಸ್ಟಾಳಿನ್ ಹೇಳಿದ್ದರು.

English summary
After Tamil Nadu PJP President Tamilsai Soundararajan's claim that MK Stalin meets BJP leader, Stalin challenges her and Narendra Modi that he will retire from politics, if they prove this allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X