• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನಲ್ಲಿ ಕೊರೊನಾ ಪ್ರಕರಣ ಇಳಿಕೆ: ಕೊಯಮತ್ತೂರಿನಲ್ಲಿ ಯಥಾಸ್ಥಿತಿ ಮುಂದುವರಿಕೆ

|

ಚೆನ್ನೈ, ಸೆಪ್ಟೆಂಬರ್ 25: ತಮಿಳುನಾಡಿನಲ್ಲಿ 5679 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 5,69,370 ಪ್ರಕರಣಗಳಿವೆ. ಚೆನ್ನೈನಲ್ಲಿ 1193 ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ 1,60,926 ಪ್ರಕರಣಗಳಿವೆ.

ಶುಕ್ರವಾರ 72 ಮಂದಿ ಮೃತಪಟ್ಟಿದ್ದಾರೆ. ಒಟ್ಟು 9148 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 46,386 ಸಕ್ರಿಯ ಪ್ರಕರಣಗಳಿವೆ. 3,43,470 ಪುರುಷರು, 2,25,870 ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ.

ಭಾರತದಲ್ಲಿ ಒಂದೇ ದಿನ 86052 ಜನರಿಗೆ ಕೊವಿಡ್-19 ಪಾಸಿಟಿವ್!

30 ಮಂದಿ ತೃತೀಯ ಲಿಂಗಿಗಳಿಗೂ ಸೋಂಕು ತಗುಲಿದೆ. ಇಲ್ಲಿಯವರೆಗೆ 69,10,521 ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ. ಇಂದು 94,877 ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಇಂದು 5623 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, ಇದುವರೆಗೆ 5,13,836 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಚೆಂಗಲ್‌ಪಟ್ಟುವಿನಲ್ಲಿ 277, ಕಾಂಚೀಪುರಂನಲ್ಲಿ 165, ತಿರುವಳ್ಳೂರು 229, ಅರಿಯಲೂರು 28, ಕೊಯಮತ್ತೂರು 661 ಪ್ರಕರಣಗಳು ಪತ್ತೆಯಾಗಿವೆ.

ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 58 ಲಕ್ಷದ ಗಡಿ ದಾಟಿದೆ. ಭಾರತದಲ್ಲಿ 24 ಗಂಟೆಗಳಲ್ಲೇ 86052 ಜನರಿಗೆ ಕೊವಿಡ್-19 ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ಖಾತ್ರಿಯಾಗಿದೆ.

   North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada

   ಗುರುವಾರ ಬೆಳಗ್ಗೆ 9 ಗಂಟೆಯಿಂದ ಗುರುವಾರ ಬೆಳಗ್ಗೆ 9 ಗಂಟೆವರೆಗೂ ಕೊರೊನಾವೈರಸ್ ಗೆ 1129 ಜನರು ಬಲಿಯಾಗಿದ್ದು, ದೇಶದಲ್ಲಿ ಕೊವಿಡ್-19 ನಿಂದ ಪ್ರಾಣ ಬಿಟ್ಟವರ ಸಂಖ್ಯೆ 92290ಕ್ಕೆ ಏರಿಕೆಯಾಗಿದೆ.

   English summary
   Tamil Nadu recorded 5,679 positive cases of COVID-19 Friday, bringing the state’s tally to 5,69,370. Among these, Chennai reported 1,193 positive cases, bringing the city’s total to 1,60,926.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X