ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 18 ವರ್ಷದೊಳಗಿನವರಿಗೆ ಲಸಿಕೆ ಆರಂಭಿಸಿದ ಮೊದಲ ರಾಜ್ಯ ಯಾವುದು?

|
Google Oneindia Kannada News

ಚೆನ್ನೈ, ಅಕ್ಟೋಬರ್ 14: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಈಗಾಗಲೇ 2 ರಿಂದ 18 ವರ್ಷದೊಳಗಿನ ವಯೋಮಾನದವರಿಗೆ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಆರಂಭಿಸಿದೆ.

ತಮಿಳುನಾಡು ದೇಶದಲ್ಲೇ ಮೊದಲ ಬಾರಿಗೆ 2-18 ವಯೋಮಾನದವರಿಗೆ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಆರಂಭಿಸಿದ ಮೊದಲ ರಾಜ್ಯವಾಗಿದೆ ಎಂದು ಆರೋಗ್ಯ ಸಚಿವ ಎಂ ಸುಬ್ರಮಣಿಯಮ್ ತಿಳಿಸಿದ್ದಾರೆ. ಕೋಯಂತ್ತೂರಿನಲ್ಲಿ ನಡೆದ ಆಹಾರ ಕೆಡಿಸದಿರುವುದು, ಕೈ ತೊಳೆಯುವುದು ಮತ್ತು ಅಡುಗೆ ಎಣ್ಣೆ ಮರು ಉಪಯೋಗಕ್ಕೆ ಸಂಬಂಧಿಸಿದಂತೆ ವಿವಿಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

Explained: ಭಾರತದಲ್ಲಿ 18 ವರ್ಷದೊಳಗಿನವರಿಗೆ ನೀಡುವ ಕೊವಿಡ್-19 ಲಸಿಕೆಗಳು ಯಾವುವು?Explained: ಭಾರತದಲ್ಲಿ 18 ವರ್ಷದೊಳಗಿನವರಿಗೆ ನೀಡುವ ಕೊವಿಡ್-19 ಲಸಿಕೆಗಳು ಯಾವುವು?

ಕೊರೊನಾವೈರಸ್ ಲಸಿಕೆಯ ಕುರಿತು ಕೇಂದ್ರ ಸರ್ಕಾರವು ಔಪಚಾರಿಕ ಘೋಷಣೆ ಹೊರಡಿಸಿದೆ. ತಜ್ಞರ ಶಿಫಾರಸ್ಸಿನ ಮೇಲೆ ಅನುಮೋದನೆ ಪಡೆದ ಲಸಿಕೆ ವಿತರಣೆಯನ್ನು ಆರಂಭಿಸುವಲ್ಲಿ ತಮಿಳುನಾಡು ಮೊದಲ ರಾಜ್ಯವಾಗಿದೆ ಎಂದು ಸಚಿವ ಸುಬ್ರಮಣ್ಯಂ ಹೇಳಿದ್ದಾರೆ.

2-18 ವರ್ಷದೊಳಗಿನವರಿಗೆ ಕೊವ್ಯಾಕ್ಸಿನ್ ಲಸಿಕೆ

2-18 ವರ್ಷದೊಳಗಿನವರಿಗೆ ಕೊವ್ಯಾಕ್ಸಿನ್ ಲಸಿಕೆ

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ -2 ಮತ್ತು ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು 2-18 ವಯೋಮಾನದ ಮಕ್ಕಳ ಮೇಲೆ ತುರ್ತು ಬಳಕೆಗೆ ಕೊವಿಡ್-19 ತಜ್ಞರ ಸಮಿತಿ ಅನುಮೋದನೆಗೆ ಶಿಫಾರಸ್ಸು ಮಾಡಿತ್ತು. ಅಕ್ಟೋಬರ್ ತಿಂಗಳ ಆರಂಭದಲ್ಲಿ ವೈದ್ಯಕೀಯ ಪ್ರಯೋಗಗಳ ಫಲಿತಾಂಶದ ದತ್ತಾಂಶವನ್ನು ಕಂಪನಿಯು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಸಲ್ಲಿಸಿದ್ದು, ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ.

ತಮಿಳುನಾಡಿನಲ್ಲೇ ಮೊದಲ ಬಾರಿಗೆ ಗರ್ಭಿಣಿಯರಿಗೆ ಲಸಿಕೆ

ತಮಿಳುನಾಡಿನಲ್ಲೇ ಮೊದಲ ಬಾರಿಗೆ ಗರ್ಭಿಣಿಯರಿಗೆ ಲಸಿಕೆ

ಕೊರೊನಾವೈರಸ್ ಲಸಿಕೆಯನ್ನು ಗರ್ಭಿಣಿಯರಿಗೆ ನೀಡಬೇಕೋ ಬೇಡವೋ ಎಂಬ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಪರಿಶೋಧನೆ ನಡೆಸಿದರು. ಅಂತಿಮವಾಗಿ ಗರ್ಭಿಣಿಯರಿಗೂ ಲಸಿಕೆ ಸುರಕ್ಷಿತವಾಗಿದೆ ಎಂಬ ಫಲಿತಾಂಶ ಹೊರಬಂದ ನಂತರ ತಮಿಳುನಾಡಿನಲ್ಲೇ ಮೊದಲು ಲಸಿಕೆ ವಿತರಣೆ ಅಭಿಯಾನವನ್ನು ಶುರು ಮಾಡಲಾಗಿತ್ತು. ರಾಜ್ಯದಲ್ಲಿ ಈವರೆಗೂ 5 ಲಕ್ಷ ಮಹಿಳೆಯರಿಗೆ ಲಸಿಕೆ ವಿತರಿಸಲಾಗಿದೆ.

ಮನೆ ಬಾಗಿಲಿಗೆ ಕೊರೊನಾವೈರಸ್ ಲಸಿಕೆ ವಿತರಣೆ

ಮನೆ ಬಾಗಿಲಿಗೆ ಕೊರೊನಾವೈರಸ್ ಲಸಿಕೆ ವಿತರಣೆ

ಕೊಯಂತ್ತೂರು ಜಿಲ್ಲೆಯಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಶರವೇಗದಲ್ಲಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.100ರಷ್ಟು ಅರ್ಹ ಫಲಾನುಭವಿಗಳಿಗೆ ಲಸಿಕೆ ವಿತರಿಸಲು ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯ ಐದು ಪ್ರಮುಖ ವಲಯಗಳಲ್ಲಿ ಮೊಬೈಲ್ ಲಸಿಕೆ ವಿತರಣೆ ವಾಹನವನ್ನು ಬಿಡಲಾಗಿದೆ. ಜಿಲ್ಲೆಯಲ್ಲಿ ಈವರೆಗೂ ಶೇ.93ರಷ್ಟು ಫಲಾನುಭವಿಗಳಿಗೆ ಕೊವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಶೇ.37ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ವಿತರಿಸಲಾಗಿದೆ. ಐದು ಮೆಗಾ ಕ್ಯಾಂಪ್‌ಗಳ ಮೂಲಕ 5.51 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವ ಸುಬ್ರಮಣಿಯಮ್ ಹೇಳಿದ್ದಾರೆ.

2-18 ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆ

2-18 ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆ

ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವಯೋಮಾನದ ಮಕ್ಕಳ ಮೇಲೆ ತುರ್ತು ಬಳಕೆಗೆ ಶಿಫಾರಸ್ಸು ಮಾಡಲಾಗಿದೆ. ದೇಶದಲ್ಲಿ ಈಗಾಗಲೇ ಈ ಕೊವ್ಯಾಕ್ಸಿನ್ ಲಸಿಕೆಯನ್ನು 18 ವರ್ಷದ ಮೇಲ್ಪಟ್ಟವರಿಗೆ ವಿತರಿಸಲು ಅನುಮೋದನೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಮತ್ತು ಎರಡನೇ ಡೋಸ್ ಲಸಿಕೆ ನಡುವೆ 30 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ. ಅದೇ ರೀತಿ 2 ರಿಂದ 18 ವರ್ಷದ ಮಕ್ಕಳಿಗೆ ನೀಡುವ ಎರಡು ಡೋಸ್ ಲಸಿಕೆ ನಡುವೆ 20 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ.

English summary
Which State First Start Coronavirus vaccine Between 2 to 18 years Childrens in india. Tamil nadu is the Answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X