ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾಗೆ ಸೇರಿದ ಸೀರೆ, ಆಭರಣ, ಸ್ಲಿಪ್ಪರ್ ಕಥೆ ಏನು?

ಜಯಲಲಿತಾ ಅವರಿಗೆ ವಿಧಿಸಿದ್ದ 100 ಕೋಟಿ ರು ದಂಡ ವಸೂಲಿ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಜಯಾ ಅವರಿಗೆ ಸೇರಿರುವ ಸೀರೆ, ಅಭರಣ, ಪಾದರಕ್ಷೆಗಳ ಬಗ್ಗೆ ವಿವರ ಇಲ್ಲಿದೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 14: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಪ್ರಮುಖ ಆರೋಪಿ ಜೆ ಜಯಲಲಿತಾ ಮೃತರಾಗಿರುವುದರಿಂದ ಅವರ ಮೇಲಿನ ಆರೋಪವನ್ನು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಕೈಬಿಟ್ಟಿದೆ.

ಆದರೆ, ಶಶಿಕಲಾ ಸೇರಿದಂತೆ ಇತರೆ ಆಪರಾಧಗಳಿಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಲಾಗಿದೆ.ಈ ನಡುವೆ ಜಯಲಲಿತಾ ಅವರಿಗೆ ವಿಧಿಸಿದ್ದ 100 ಕೋಟಿ ರು ದಂಡ ವಸೂಲಿ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಜಯಾ ಅವರಿಗೆ ಸೇರಿರುವ ಸೀರೆ, ಅಭರಣ, ಪಾದರಕ್ಷೆಗಳ ಬಗ್ಗೆ ವಿವರ ಇಲ್ಲಿದೆ.[ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಕೇಸ್: ಟೈಮ್ ಲೈನ್]

What happens to Jayalalithaa's 750 pairs of slippers- DA case verdict

ಮದ್ರಾಸ್ ಹೈಕೋರ್ಟಿನಿಂದ ಬೆಂಗಳೂರಿನ ನ್ಯಾಯಾಲಯಗಳಿಗೆ ಅಕ್ರಮ ಆಸ್ತಿ ಪ್ರಕರಣ ಶಿಫ್ಟ್ ಆದ ಬಳಿಕ, ಜಯಾ ಅವರ ನಿವಾಸದಲ್ಲಿ ಜಫ್ತಿಯಾದ ವಸ್ತುಗಳೆಲ್ಲವನ್ನು ಬೆಂಗಳೂರಿಗೆ ತರಲಾಯಿತು. ಈಗ ಜಫ್ತಿಯಾದ ವಸ್ತುಗಳನ್ನು ಹರಾಜು ಹಾಕಿ ಬಂದ ಮೊತ್ತವನ್ನು ದಂಡಕ್ಕೆ ಸರಿದೂಗಿಸಿಕೊಳ್ಳಬೇಕಿದೆ.

ಬೆಂಗಳೂರಿನ ವಿಶೇಷ ನ್ಯಾಯಾಲಯದ ಅಧೀನದಲ್ಲಿ ಜಯಾ ಅವರಿಗೆ ಸೇರಿರುವ 750 ಜತೆ ಬೆಲೆ ಬಾಳುವ ಸ್ಲಿಪ್ಪರ್ ಗಳಿವೆ. ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ಕೊಠಡಿಯೊಂದರಲ್ಲಿ 40,500 ಸೀರೆಗಳಿವೆ ಈ ಪೈಕಿ 750 ಸಿಲ್ಕ್ ಸ್ಯಾರಿ. ಈ ಕೊಠಡಿಗೆ ಸದಾಕಾಲ ನಾಲ್ವರು ಪೊಲೀಸರ ಪಹರೆ ಇರುತ್ತದೆ.[ಪರಪ್ಪನ ಅಗ್ರಹಾರ ಜೈಲು ಸೇರಲಿರುವ ಶಶಿಕಲಾ]

ಜಫ್ತಿಯಾಗಿರುವ ಚಿನ್ನದ ಮೌಲ್ಯ 3.5 ಕೋಟಿ ರು ಎಂದು ಅಫಿಡವಿಟ್ ಸಲ್ಲಿಸಲಾಗಿದೆ. 1997ರಲ್ಲಿ ಭ್ರಷ್ಟಾಚಾರ ನಿಗ್ರಹ ಹಾಗೂ ಗುಪ್ತಚರ ನಿರ್ದೇಶನಾಲಯದಿಂದ ಜಯಲಲಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಸೀರೆ, ಸ್ಲಿಪ್ಪರ್ ಅಲ್ಲದೆ 500 ವೈನ್ ಹಾಕುವ ಪಾತ್ರೆಗಳು, ಬ್ರೇಸ್ ಲೇಟ್, ಚಿನ್ನಾಭರಣ, ಚಿನ್ನದ ಬೆಲ್ಟ್, 1ಕೋಟಿ ಮೌಲ್ಯದ ಡೈಮಂಡ್, ಬೆಳ್ಳಿ ಕತ್ತಿ ಮುಂತಾದ ವಸ್ತುಗಳನ್ನು ಜಫ್ತಿ ಮಾಡಲಾಗಿತ್ತು.

English summary
The Supreme Court on Tuesday held that the trial court was right in convicting Jayalalithaa, Sasikala and two others in the disproportionate assets case. The case against Jayalalithaa was abated since she is deceased. However with the court holding that a case of disporportionate assets had been made out, the assets seized in connection with the case will have to be auctioned off in order to recover the Rs 100 crore fine which had been imposed by the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X