ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ಜತೆ ಸಖ್ಯವಿಲ್ಲ, ಏಕಾಂಗಿ ಹೋರಾಟ : ಕಮಲ್ ಹಾಸನ್

|
Google Oneindia Kannada News

ಚೆನ್ನೈ, ಫೆಬ್ರವರಿ 07: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ 40 ಕ್ಷೇತ್ರಗಳಲ್ಲಿ ಮಕ್ಕಳ್ ನೀತಿ ಮಯಂ(ಎಂಎನ್ಎಂ) ಪಕ್ಷವು ಏಕಾಂಗಿಯಾಗಿ ಹೋರಾಟ ನಡೆಸಲಿದ್ದು, ಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.

2018ರ ಫೆಬ್ರವರಿ 21ರಂದು ಹೊಸ ಪಕ್ಷಕ್ಕೆ ಚಾಲನೆ ನೀಡಿದ ಕಮಲ್ ಹಾಸನ್ ಅವರು ಮೋದಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದು, ಡಿಎಂಕೆ ಜತೆ ಕೈಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

We will contest elections alone, definitely not in alliance: Kamal Haasan

ಗ್ರಾಮೀಣ ಭಾಗದಲ್ಲಿ ನಮ್ಮ ಪಕ್ಷದ ತನ್ನ ಉದ್ದೇಶವನ್ನು ತಲುಪಿಸುವಲ್ಲಿ ಸಫಲವಾಗಿದೆ. ಜನರು ನನ್ನಲ್ಲಿ ಒಬ್ಬ ನಾಯಕನನ್ನು ಕಾಣುತ್ತಿದ್ದಾರೆ. ಅವರ ಆಶಯಗಳನ್ನು ಈಡೇರಿಸುವುದು ನನ್ನ ಗುರಿ ಎಂದು ಕಮಲ್ ಹೇಳಿದ್ದಾರೆ.

* ಮೈತ್ರಿ ಎಂಬುದು ಹೊರೆಯಾಗಬಾರದು, ಸ್ವ ಸಾಮರ್ಥ್ಯದಿಂದ ಪಕ್ಷವನ್ನು ಕಟ್ಟಿ ಬೆಳೆಸುವ ಉದ್ದೇಶ ನಮ್ಮದು,ಡಿಎಂಕೆಯಾಗಲಿ ಎಐಎಡಿಎಂಕೆಯಾಗಲಿ ಮಿತ್ರಪಕ್ಷವಾಗಲಾರದು.

* ಒಂದು ವೇಳೆ ಮೈತ್ರಿ ಸಾಧ್ಯತೆ ಕಂಡು ಬಂದರೆ ಅದು ತಮಿಳುನಾಡಿನ ಅಭಿವೃದ್ಧಿಗೆ ಪೂರಕವಾಗಿರಬೇಕು. ನಮ್ಮ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರಬೇಕು. ಸೀಟು ಹಂಚಿಕೆಗೆ ಸೀಮಿತವಾಗಬಾರದು ಅಷ್ಟೇ.

* ರಾಹುಲ್ ಆಗಲಿ ಮೋದಿ ಆಗಲಿ ಒಬ್ಬ ವ್ಯಕ್ತಿ ಅವರನ್ನು ದ್ವೇಷಿಸುವುದರಲ್ಲಿ ಅರ್ಥವಿಲ್ಲ. ಪಕ್ಷದ ಬಗ್ಗೆ ಯೋಚಿಸಬೇಕಿದೆ. ತೃತೀಯ ರಂಗ ನಿರ್ಮಾಣವಾದರೆ ಬೆಂಬಲ ಇದ್ದೇ ಇರುತ್ತೆ. ದೇಶವನ್ನು ಒಬ್ಬ ವ್ಯಕ್ತಿ ಮುನ್ನಡೆಸುವುದಿಲ್ಲ. ಇದು ಪ್ರಜಾಪ್ರಭುತ್ವ, ದೇಶದ ಅಭಿವೃದ್ಧಿಗೆ ನಾವೆಲ್ಲರೂ ಸಾಧನವಷ್ಟೇ ಎಂದಿದ್ದಾರೆ.

English summary
Kamal Haasan said in an interview that his party is prepared to contest in the coming general elections alone rathan than align with the DMK, in all 40 constituencies in the state and Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X