ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಹಿಂದೂ ವಿರೋಧಿ ನಡೆಯೇ ಬಿಜೆಪಿ ಸ್ಟಾಲಿನ್ ವಿರೋಧಿಸಲು ಕಾರಣ"

|
Google Oneindia Kannada News

ಚೆನ್ನೈ, ಮಾರ್ಚ್ 29: ನಂಬಿಕೆ, ಆಚಾರದ ಕುರಿತು ತಮ್ಮ ಪ್ರತಿಸ್ಪರ್ಧಿ, ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರನ್ನು ಗುರಿಯಾಗಿಸಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, "ಎಐಎಡಿಎಂಕೆ ಸದಸ್ಯರು ನಿಜವಾದ ನಂಬಿಕೆಯುಳ್ಳವರು" ಎಂದು ಹೇಳಿಕೊಂಡಿದ್ದಾರೆ.

ಸೋಮವಾರ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1989ರಲ್ಲಿ ಎಐಎಡಿಎಂಕೆ ನಾಯಕಿ, ದಿ. ಜಯಲಲಿತಾ ಅವರ ಮೇಲೆ ವಿಧಾನಸಭೆಯಲ್ಲಿ ಡಿಎಂಕೆ ಅಧಿಕಾರದಲ್ಲಿದ್ದಾಗ ಮಾಡಿದ್ದ ಆರೋಪಗಳ ದಾಳಿಯನ್ನೂ ನೆನಪಿಸಿಕೊಂಡರು.

"ಇದು ಸ್ಟಾಲಿನ್ ನಿಮಗೆ ಕೊಡುತ್ತಿರುವ ಭರವಸೆ..."

"ಅಂಥ ನಾಯಕಿ ಜಯಲಲಿತಾ ಅವರನ್ನೇ ಡಿಎಂಕೆ ನಾಯಕರು ಬಿಟ್ಟಿಲ್ಲ. ಇನ್ನು ಸಾಮಾನ್ಯ ಜನರ ಕಥೆಯೇನು" ಎಂದು ಪ್ರಶ್ನಿಸಿದರು.

We Are True Believers Said Tamil Nadu CM Palaniswami Attacking MK Stalin

"ನಾನು ದೇವರ ದಯೆಯಿಂದ ಬದುಕಿದ್ದೇನೆ. ನಮಗೆ ದೇವರ ಮೇಲೆ ನಂಬಿಕೆಯಿದೆ. ನಿಮ್ಮಂತೆ ನಾವು ಕುಂಕುಮವನ್ನು ಅಳಿಸಿಕೊಳ್ಳುವುದಿಲ್ಲ. ದೇವರಿಂದಲೇ ನಾವು ಇಲ್ಲಿ ಪ್ರೀತಿ ಗಳಿಸಲು ಸಾಧ್ಯವಾಗಿದ್ದು" ಎಂದು ಸ್ಟಾಲಿನ್ ಕುರಿತು ಟೀಕಿಸಿದರು. ಈ ಹಿಂದೆ ಪೂಜಾರಿಯೊಬ್ಬರು ಇಟ್ಟಿದ್ದ ಕುಂಕುಮವನ್ನು ಸ್ಟಾಲಿನ್ ಅವರು ಅಳಿಸಿಕೊಂಡಿದ್ದ ಸಂಗತಿ ತಮಿಳುನಾಡಿನಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಸ್ಟಾಲಿನ್ ಅವರ ಈ ಹಿಂದೂ ವಿರೋಧಿ ನಡೆಯಿಂದಾಗಿಯೇ ಅವರನ್ನು ಬಿಜೆಪಿ ದ್ವೇಷಿಸುತ್ತಿದೆ ಎಂದರು.

English summary
Tamil Nadu Chief Minister E K Palaniswami on Monday said AIADMK members were true believers and lashed out at the DMK leader for certain past controversial acts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X