• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಸಾರ್ವಜನಿಕರ ಬಸ್ ಹತ್ತಿದ ತಮಿಳುನಾಡು ಸಿಎಂ ಸ್ಟಾಲಿನ್

|
Google Oneindia Kannada News

ಚೆನ್ನೈ, ಅಕ್ಟೋಬರ್ 24: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಚೆನ್ನೈನಲ್ಲಿ ಮಹಿಳೆಯರನ್ನು ಉಚಿತವಾಗಿ ಕರೆದೊಯ್ಯುವ ಸಿಟಿ ಬಸ್‌ನ್ನು ಹತ್ತುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ವಿಚಾರಿಸುವ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯನ್ನು ಕೇಳಿದರು.

ಆರನೇ ಬೃಹತ್ ಲಸಿಕಾ ಅಭಿಯಾನದ ಅಂಗವಾಗಿ ಆಯೋಜಿಸಲಾದ ಕೆಲವು ಲಸಿಕೆ ಕೇಂದ್ರಗಳನ್ನು ಪರಿಶೀಲಿಸಲು ಎಂಕೆ ಸ್ಟಾಲಿನ್ ಅವರು ಕನ್ನಗಿ ನಗರದಲ್ಲಿ ಬಸ್ ಹತ್ತಿದರು. ''ಡಿಎಂಕೆ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳ ಹಿಂದೆ ಘೋಷಿಸಿದ್ದ ಉಚಿತ ಪ್ರಯಾಣ ಯೋಜನೆಯ ಕುರಿತು ಮುಖ್ಯಮಂತ್ರಿಗಳು ಬಸ್ ಪರಿಶೀಲನೆ ನಡೆಸಿ ಮಹಿಳೆಯರೊಂದಿಗೆ ಮಾತನಾಡಿದರು'' ಎಂದು ರಾಜ್ಯ ಸರಕಾರದ ಹೇಳಿಕೆ ತಿಳಿಸಿದೆ.

ಸಾರ್ವಜನಿಕ ಬಸ್‌ನಲ್ಲಿ ಎಂ.ಕೆ.ಸ್ಟಾಲಿನ್

ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮುಖ್ಯಮಂತ್ರಿ ಬೆಂಗಾವಲು ಪಡೆ ನಿಲ್ಲುವುದು ಮತ್ತು ಎಂಕೆ ಸ್ಟಾಲಿನ್ ರಸ್ತೆ ದಾಟುವುದು ಮತ್ತು ಇನ್ನೊಂದು ಬದಿಯಲ್ಲಿ ಬಸ್ ಹತ್ತುವುದು ಕಂಡುಬರುತ್ತದೆ. ಆಶ್ಚರ್ಯಚಕಿತರಾದ ಪ್ರಯಾಣಿಕರು ಅವರನ್ನು ಕೈಮುಗಿದು ಸ್ವಾಗತಿಸುತ್ತಿರುವುದು ಕಂಡುಬಂದಿತು. ಕೆಲವು ಮಹಿಳೆಯರು ಮುಖ್ಯಮಂತ್ರಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅವರಲ್ಲಿ ಕೆಲವರೊಂದಿಗೆ ಸಂಕ್ಷಿಪ್ತವಾಗಿ ಮಾತನಾಡುತ್ತಿರುವುದನ್ನೂ ನೋಡಬಹುದು. ಹಬ್ಬದ ಸೀಸನ್‌ಗೆ ಮುಂಚಿತವಾಗಿ ನೆರೆಯ ಕೇರಳಕ್ಕೆ ಪ್ರಯಾಣಿಸುವ ಬಸ್‌ಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರವು 100% ಆಕ್ಯುಪೆನ್ಸಿಗೆ ಅನುಮತಿ ನೀಡಿದೆ. ರಾಜ್ಯ ಸರ್ಕಾರವು ಕೋವಿಡ್ -19 ಲಾಕ್‌ಡೌನ್ ನಿರ್ಬಂಧಗಳನ್ನು ಕೆಲವು ಸಡಿಲಿಕೆಯೊಂದಿಗೆ ಶನಿವಾರದಂದು ನವೆಂಬರ್ 15 ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಹಬ್ಬಗಳು ಮತ್ತು ರಾಜಕೀಯ ಕಾರ್ಯಕ್ರಮಗಳ ಮೇಲಿನ ನಿಷೇಧ ಮುಂದುವರಿಯುತ್ತದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಡಿಎಂಕೆ ಸರ್ಕಾರವು ನಗರದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಆರಂಭಿಸಿದೆ. ಸಾಮಾನ್ಯ ದರವನ್ನು ವಿಧಿಸುವ ಟೌನ್ ಬಸ್‌ಗಳಲ್ಲಿ ಮುಖ್ಯಮಂತ್ರಿ ಎಂ. ಸ್ಟಾಲಿನ್ ಸರ್ಕಾರ ಈ ಯೋಜನೆಯನ್ನು ಮಂಗಳಮುಖಿಯರಿಗೂ ವಿಸ್ತರಿಸಲು ಯೋಚಿಸಿದೆ. ತೃತೀಯ ಲಿಂಗದ ವ್ಯಕ್ತಿಗಳಿಗೆ ಯೋಜನೆಯ ವಿಸ್ತರಣೆಯನ್ನು ಕೋರಿದ ಪತ್ರಕರ್ತರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಇದನ್ನು ಪರಿಗಣಿಸಲಾಗುವುದು ಮತ್ತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ದಿವಂಗತ ಎಂ. ಕರುಣಾನಿಧಿ ಮುಖ್ಯಮಂತ್ರಿಯಾದಾಗಿನಿಂದ ಡಿಎಂಕೆ ಸರ್ಕಾರವು ಮಹಿಳೆಯರು ಮತ್ತು ಟ್ರಾನ್ಸ್‌ಪರ್ಸನ್‌ಗಳ ಕಲ್ಯಾಣ ಎರಡನ್ನೂ ಪರಸ್ಪರರ ಜೊತೆಗೆ ಪರಿಗಣಿಸುವುದು ಯಾವಾಗಲೂ ವಾಡಿಕೆಯಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

2020-21 ನೇ ಸಾಲಿಗಾಗಿ ಸಾರ್ವಜನಿಕ ವಲಯ ಉದ್ದಿಮೆಗಳ 2, 87,250 ನೌಕರರಿಗೆ 216.38 ಕೋಟಿ ರೂ. ಬೋನಸ್ ಮತ್ತು ಶೇಕಡಾ 1.67 ರಷ್ಟು ಕೃಪಾಧನ (ಎಕ್ಸ್ -ಗ್ರೇಷಿಯಾ)ವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಪ್ರಕಟಿಸಿದ್ದಾರೆ. ಲಾಭ ಹಾಗೂ ನಷ್ಟದಲ್ಲಿರುವ ಸಾರ್ವಜನಿಕ ವಲಯ ಉದ್ದಿಮೆಗಳ ಸಿ ಮತ್ತು ಡಿ ದರ್ಜೆಯ ನೌಕರರು ಶೇ. 10 ರಷ್ಟು ಬೋನಸ್ ಪಡೆಯಲಿದ್ದಾರೆ. ಖಾಯಂ ನೌಕರರು 8, 400 ರೂ. ಪಡೆಯಲಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಬೋನಸ್ ಪಾವತಿ ಕಾಯ್ದೆ 2015ರ ತಿದ್ದುಪಡಿ ಪ್ರಕಾರ, ಅರ್ಹ ಸಿ ಮತ್ತು ಡಿ ದರ್ಜೆಯ ನೌಕರರ ಅರ್ಹತೆಯ ಮಿತಿಯನ್ನು ರೂ. 21 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬೋನಸ್ ನಿರ್ಧರಿಸಲು ತಿಂಗಳ ಸಂಬಳದ ಮಿತಿಯನ್ನು ಏಳು ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದೆ.

 ಕೊರೊನಾ ಸ್ಥಿತಿಗತಿ

ಕೊರೊನಾ ಸ್ಥಿತಿಗತಿ

ಕೋವಿಡ್-19 ಮೊದಲ ಹಾಗೂ ಎರಡನೇ ಅಲೆಯಿಂದಾಗಿ ತಮಿಳುನಾಡು ರಾಜ್ಯ ಸಾರಿಗೆ ನಿಗಮ ಸೇರಿದಂತೆ ಹಲವು ನಿಗಮಗಳ ತೀವ್ರ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದರೂ, ನೌಕರರ ಕುಟುಂಬಗಳ ಕಲ್ಯಾಣವನ್ನು ಪರಿಗಣಿಸಿ, ಪೂರ್ಣ ಮೊತ್ತದ ಸಂಬಳವನ್ನು ಪಾವತಿಸಲಾಗುತ್ತಿದೆ. ಈ ವರ್ಷ ದೀಪಾವಳಿಯನ್ನು ಆಚರಿಸಲು ಸಾರ್ವಜನಿಕ ವಲಯ ಉದ್ದಿಮೆಗಳ ನೌಕರರಿಗೆ ಬೋನಸ್ ಜೊತೆಗೆ ಎಕ್ಸ್ ಗ್ರೇಷಿಯಾ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಮಿಳುನಾಡಿನಲ್ಲಿ ಶನಿವಾರ 1,040 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆಯನ್ನು 26,94,089 ಕ್ಕೆ ತಳ್ಳಿದೆ. ಕಳೆದ 24 ಗಂಟೆಗಳಲ್ಲಿ ವೈರಸ್‌ನಿಂದ 17 ಸಾವುಗಳೊಂದಿಗೆ ಸಾವಿನ ಸಂಖ್ಯೆ 36,004 ಕ್ಕೆ ಏರಿದೆ.

English summary
Passengers of a city bus - which ferries women for free - in Chennai were in for a surprise on Saturday when Tamil Nadu Chief Minister MK Stalin hopped onto a public bus and asked the women about the free travel plan for them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X