ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಅವರು ಎಂದಿಗೂ ಗರ್ಭಿಣಿಯಾಗಿರಲಿಲ್ಲ: ಎಐಎಡಿಎಂಕೆ

By Mahesh
|
Google Oneindia Kannada News

Recommended Video

ಜಯಲಲಿತಾರವರು ಯಾವತ್ತೂ ಗರ್ಭಿಣಿಯಾಗಿರಲಿಲ್ಲ | ತಮಿಳುನಾಡು ಸರ್ಕಾರ ಹೇಳಿಕೆ | Oneindia Kannada

ಚೆನ್ನೈ, ಜುಲೈ 25: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಾರಸುದಾರಿಕೆಗೆ ಸಂಬಂಧಿಸಿದಂತೆ ತಾವು ಜಯಾರ ಉತ್ತರಾಧಿಕಾರಿ ಎಂದು ಅರ್ಜಿ ಸಲ್ಲಿಸಿದ್ದ ಬೆಂಗಳೂರು ನಿವಾಸಿ ಅಮೃತಾ ಅವರಿಗೆ ಹಿನ್ನಡೆಯಾಗಿದೆ.

ಈ ಕುರಿತಂತೆ ಅಮೃತಾ ಅವರು ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟಿನ ನ್ಯಾಯಪೀಠ ಕೇಳಿದ್ದ 'ಜಯಲಲಿತಾ ಎಂದಿಗೂ ಗರ್ಭಿಣಿಯಾಗಿದ್ದಾರೆ? ಎಂಬ ಪ್ರಶ್ನೆಗೆ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವು ಸ್ಪಷ್ಟನೆ ನೀಡಿದ್ದು, ಜಯಲಲಿತಾ ಅವರು ಎಂದಿಗೂ ಗರ್ಭಿಣಿಯಾಗಿರಲಿಲ್ಲ ಎಂದು ಹೇಳಿದೆ.

ನಾನು 'ಜಯಾ' ಮಗಳು, ಡಿಎನ್ ಎ ಪರೀಕ್ಷೆ ಮಾಡಿ ಎಂದ ಬೆಂಗಳೂರಿನ ಅಮೃತಾನಾನು 'ಜಯಾ' ಮಗಳು, ಡಿಎನ್ ಎ ಪರೀಕ್ಷೆ ಮಾಡಿ ಎಂದ ಬೆಂಗಳೂರಿನ ಅಮೃತಾ

ಬೆಂಗಳೂರಿನಲ್ಲಿರುವ ಅಮೃತಾ ಎಂಬುವವರು ತಾವು ಜಯಾರ ಉತ್ತರಾಧಿಕಾರಿ ಎಂದು ಈ ಹಿಂದೆ ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ತಿರಸ್ಕರಿಸಲ್ಪಟ್ಟಿತ್ತು. ಈಗ ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದೆ.

ಶೋಭನ್ ಬಾಬು- ಜಯಲಲಿತಾ ಮದುವೆ, ದತ್ತು ನೋಂದಣಿ ಪತ್ರ ಬಹಿರಂಗಶೋಭನ್ ಬಾಬು- ಜಯಲಲಿತಾ ಮದುವೆ, ದತ್ತು ನೋಂದಣಿ ಪತ್ರ ಬಹಿರಂಗ

ಮದ್ರಾಸ್ ಹೈಕೋರ್ಟ್​ಗೆ ಸಾಕ್ಷ್ಯ ಸಮೇತ ಅರ್ಜಿ ಹಾಕಿದ್ದ ಅಮೃತಾ ಅವರ ಆರೋಪಗಳನ್ನು ಅಲ್ಲಗೆಳೆದಿರುವ ತಮಿಳುನಾಡು ಸರ್ಕಾರ ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್ ಅವರು ಅಮೃತಾ ಅವರು ನೀಡಿದ ವಿಡಿಯೋ ಸಾಕ್ಷ್ಯ ಸುಳ್ಳು ಎಂದು ಸಾಬೀತುಪಡಿಸಿದರು.

1980 ವಿಡಿಯೋ ಕ್ಲಿಪ್​ ದಾಖಲೆ

1980 ವಿಡಿಯೋ ಕ್ಲಿಪ್​ ದಾಖಲೆ

ಅಮೃತಾ ತಾವು 1980 ಆಗಸ್ಟ್​ನಲ್ಲಿ ಜನಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್​ ಸಲ್ಲಿಸಿದ್ದಾರೆ. ಆದರೆ, ಆ ವಿಡಿಯೋ ಕ್ಲಿಪ್ಪಿಂಗ್ ಜಯಲಲಿತಾ ಅವರು ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಡಿಯೋ ಆಗಿದೆ. ಇದು ಅಮೃತಾ ಅವರು ಹುಟ್ಟುವುದಕ್ಕೂ ಒಂದು ತಿಂಗಳ ಹಿಂದಿನ ವಿಡಿಯೋ ಆಗಿದ್ದು, ಜಯಾ ಅವರು ಗರ್ಭಿಣಿಯಾಗಿರುವ ಯಾವುದೇ ಕುರುಹು ಇದರಲ್ಲಿಲ್ಲ ಎಂದು ಎಜಿ ವಿಜಯ್ ನಾರಾಯಣ್ ಅವರು ವಾದಿಸಿದ್ದಾರೆ.

ಸುಪ್ರೀಂಕೋರ್ಟ್ ಮಾನ್ಯ ಮಾಡಿರಲಿಲ್ಲ

ಸುಪ್ರೀಂಕೋರ್ಟ್ ಮಾನ್ಯ ಮಾಡಿರಲಿಲ್ಲ

ನಾನು ತಾಯಿ ಜತೆ ಫೋಟೋ ತೆಗೆದುಕೊಂಡಿಲ್ಲ, ಅವರು ನಮ್ಮ ಜತೆ ಇರಲಿಲ್ಲ. ನಾನು 1980 ಆಗಸ್ಟ್​ನಲ್ಲಿ ಜನಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್​ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ವಿಡಿಯೋ ಕ್ಲಿಪ್ಪಿಂಗ್ ಕೂಡಾ ನೀಡಿದ್ದರು. ಆದರೆ, ಇದೆಲ್ಲವೂ ಸುಳ್ಳು ಎಂದು ಎಜಿ ವಿಜಯ್ ನಾರಾಯಣ್ ವಾದಿಸಿದ್ದಾರೆ.

ಈ ಹಿಂದೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಅಮೃತಾ ಅವರು ಡಿಎನ್ಎ ಪರೀಕ್ಷೆಗೂ ಸಿದ್ಧ ಎಂದಿದ್ದರು. ಆದರೆ, ಅಮೃತಾ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿರಲಿಲ್ಲ
ಜಯಾ ಅಂತ್ಯಸಂಸ್ಕಾರ ಸರಿಯಾಗಿಲ್ಲ

ಜಯಾ ಅಂತ್ಯಸಂಸ್ಕಾರ ಸರಿಯಾಗಿಲ್ಲ

ಜಯಲಲಿತಾರ ದೇಹದ ಅಂತ್ಯಸಂಸ್ಕಾರ ಹಿಂದೂ ಅಯ್ಯಂಗಾರ್ ವಿಧಿ ವಿಧಾನದ ಪ್ರಕಾರ ನಡೆಯಬೇಕು ಎಂದು ಕೂಡ ಅಮೃತಾ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ತಮಿಳುನಾಡು ಸರ್ಕಾರ, ಅಂತಿಮ ಸಂಸ್ಕಾರದಲ್ಲಿ ಯಾವುದೇ ಲೋಪ ದೋಷವಾಗಿಲ್ಲ ಈ ಬಗ್ಗೆ ಜಯಾ ಅವರ ಅಪ್ತರನ್ನು ವಿಚಾರಿಸಿ, ತೀರ್ಮಾನ ಕೈಗೊಳ್ಳಲಾಯಿತು ಎಂದಿದ್ದಾರೆ.

ಡಿಎನ್ಎ ಪರೀಕ್ಷೆಯಾಗಲಿ: ಅಮೃತಾ ಅವರ ಡಿಎನ್ಎ ಜತೆಗೆ ಜಯಾ ಅವರ ಆಪ್ತ ಸಂಬಂಧಿಗಳ ಡಿಎನ್ಎ ಹೋಲಿಸಿ, ಹೊಂದಾಣಿಕೆಯಾಗುತ್ತಿದೆಯೇ ಎಂದು ಪರೀಕ್ಷಿಸಲಿ ಎಂದು ಎಜಿ ವಿಜಯ್ ನಾರಾಯಣ್ ಹೇಳಿದ್ದಾರೆ.

Array

Array

ಶೋಭನ್ ಬಾಬು ಹಾಗೂ ಜಯಲಲಿತ ತಮಗಿದ್ದ ಗಂಡು ಮಗುವನ್ನು ವಸಂತಮಣಿ ಎಂಬ ಮಹಿಳೆಗೆ ದತ್ತು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಜಯಲಲಿತಾ ಮತ್ತು ಶೋಭನ್ ಬಾಬು ಅವರಿಗೆ ಮದುವೆಯಾಗಿತ್ತು ಎನ್ನುವ ಸುದ್ದಿ ಹಲವು ಬಾರಿ ಸುದ್ದಿಯಾಗಿತ್ತು. ಇದೇ ರೀತಿ ಅಮೃತಾ ಸೇರಿದಂತೆ ಹಲವು ಮಂದಿ ಜಯಾ ಅವರ ಸಂಬಂಧಿಕರು ಎಂದು ಹೇಳಿ ಅಸ್ತಿ ಮೇಲೆ ಅಧಿಕಾರ ಹೊಂದಲು ಯತ್ನಿಸುತ್ತಿದ್ದಾರೆ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ.

English summary
The Tamil Nadu government has told the Madras High Court that Jayalalithaa was never pregnant in her lifetime. The submission was made by the Advocate General of Tamil Nadu Vijay Narayan on a petition filed by one Amrutha of Bengaluru who claimed to be the biological daughter of the late leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X