• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪರಪ್ಪನ ಅಗ್ರಹಾರದಿಂದ ಈ ತಿಂಗಳೇ ಶಶಿಕಲಾ ಬಿಡುಗಡೆ?: ತ. ನಾಡು ರಾಜಕೀಯದಲ್ಲಿ ಸಂಚಲನ

|

ಚೆನ್ನೈ, ಸೆಪ್ಟೆಂಬರ್ 4: ತಮಿಳುನಾಡು ರಾಜಕಾರಣ ಮತ್ತೆ ಗರಿಗೆದರುವ ಲಕ್ಷಣಗಳು ಕಂಡುಬಂದಿವೆ. 2021ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಆಪ್ತರಾಗಿದ್ದ ವಿಕೆ ಶಶಿಕಲಾ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

   Drugs ದಂಧೆ ಕಾರ್ಯಚರಣೆಗೆ ಬ್ರೇಕಿಲ್ಲ: Home Minister | Oneindia Kannada

   ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಂಭವ ಇದೆ ಎಂದು ಅವರ ವಕೀಲ ರಾಜಾ ಸೆಂಥೂರ್ ಪಾಂಡಿಯನ್ ಹೇಳಿದ್ದಾರೆ.

   ಇದು ಯಾವುದಕ್ಕೂ ಕಡಿಮೆ ಮಾಡದ ಚಿನ್ನಮ್ಮನ ಜೈಲು ದುನಿಯಾ!

   ಎರಡು ದಿನಗಳ ಹಿಂದಷ್ಟೇ ಆದಾಯ ತೆರಿಗೆ ಇಲಾಖೆಯ ಬೇನಾಮಿ ನಿಷೇಧ ಘಟಕವು ಶಶಿಕಲಾ ಅವರಿಗೆ ಸೇರಿದ 300 ಕೋಟಿ ರೂ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿತ್ತು. 2017ರಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.

   ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಅವರ ಶಿಕ್ಷೆಯ ಅವಧಿ ವಾಸ್ತವವಾಗಿ 2021ರ ಜನವರಿಯಲ್ಲಿ ಅಂತ್ಯಗೊಳ್ಳಲಿದೆ. ಆದರೆ ಅದಕ್ಕೂ ಮುನ್ನ ಉತ್ತಮ ನಡತೆಯನ್ನು ಪರಿಗಣಿಸಿ ಕರ್ನಾಟಕ ಕಾರಾಗೃಹ ನಿಯಮದಡಿ ಅವರನ್ನು ಸೆಪ್ಟೆಂಬರ್ ಅಂತ್ಯದಲ್ಲಿಯೇ ಬಿಡುಗಡೆ ಜೈಲಿನಿಂದ ಬಿಡುಗಡೆ ಮಾಡಬಹುದು ಎಂದು ತಿಳಿಸಿದ್ದಾರೆ. ಮುಂದೆ ಓದಿ...

   ಸಾಮಾನ್ಯ ವಿನಾಯಿತಿ

   ಸಾಮಾನ್ಯ ವಿನಾಯಿತಿ

   ಕರ್ನಾಟಕ ಕಾರಾಗೃಹ ಅಧಿನಿಯಮದ ಸಾಧಾರಣ ಶಿಕ್ಷೆ ವಿನಾಯಿತಿಯ ನಿಯಮದ ಅಡಿ ತಿಂಗಳಿಗೆ ಮೂರು ದಿನಗಳ ಕಾಲ ಶಿಕ್ಷೆಯಿಂದ ವಿನಾಯಿತಿ ಪಡೆಯುವ ಅರ್ಹತೆ ಅವರಿಗೆ ಇದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಯಾವುದೇ ಶಿಕ್ಷಿತ ವ್ಯಕ್ತಿಯು ಈ ವಿನಾಯಿತಿಗೆ ಅರ್ಹರಲ್ಲ ಎಂದು ಕರ್ನಾಟಕ ಕಾರಾಗೃಹ ಕೈಪಿಡಿ ಹೇಳುತ್ತದೆ. ತಿಂಗಳಲ್ಲಿ ಮೂರು ದಿನ ಸನ್ನಡತೆಯ ಆಧಾರದಲ್ಲಿ ಯಾವುದೇ ಕೈದಿ ಸಾಮಾನ್ಯ ವಿನಾಯಿತಿ ಪಡೆಯಲು ಅರ್ಹರಾಗಿದ್ದಾರೆ ಎಂದು ಪಾಂಡಿಯನ್ ತಿಳಿಸಿದ್ದಾರೆ.

   ಸನ್ನಡತೆಯ ಆಧಾರ

   ಸನ್ನಡತೆಯ ಆಧಾರ

   ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ಶಶಿಕಲಾ ತಪ್ಪಿತಸ್ಥೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಜೆ. ಜಯಲಲಿತಾ ಮೃತಪಟ್ಟ ಕೆಲವು ಸಮಯದಲ್ಲಿಯೇ ಶಶಿಕಲಾ ಶಿಕ್ಷೆಗೆ ಒಳಗಾಗಿದ್ದರು. ಅವರ ಶಿಕ್ಷೆಯ ಅವಧಿ 2021ರ ಜನವರಿಗೆ ಅಂತ್ಯಗೊಳ್ಳಲಿದೆ. ಆದರೆ ಸನ್ನಡತೆಯ ಆಧಾರದಲ್ಲಿ ಅವರು ಇನ್ನೂ ಬೇಗನೆ ಬಿಡುಗಡೆಯಾಗಬಹುದು. ಕರ್ನಾಟಕ ಕಾರಾಗೃಹ ಇಲಾಖೆ ಒಪ್ಪಿದರೆ 129 ದಿನಗಳ ವಿನಾಯಿತಿ ಪಡೆಯಬಹುದು.

   ಶಶಿಕಲಾಗೆ ಮತ್ತೆ ಸಂಕಷ್ಟ: 1,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಸ್ವಾಧೀನ

   129 ದಿನಗಳ ವಿನಾಯಿತಿಗೆ ಅರ್ಹರು

   129 ದಿನಗಳ ವಿನಾಯಿತಿಗೆ ಅರ್ಹರು

   2020ರ ಸೆಪ್ಟೆಂಬರ್ ವೇಳೆಗೆ ಶಶಿಕಲಾ ಅವರು 43 ತಿಂಗಳ ಶಿಕ್ಷೆ ಪೂರೈಸಲಿದ್ದಾರೆ. ಕರ್ನಾಟಕ ಕಾರಾಗೃಹ ನಿಯಮದ ಪ್ರಕಾರ ಅವರು ತಿಂಗಳಿಗೆ ಮೂರು ದಿನ ಶಿಕ್ಷೆಯ ವಿನಾಯಿತಿ ಪಡೆಯಲು ಅರ್ಹರಾಗಿದ್ದಾರೆ. ಈ 43 ತಿಂಗಳನ್ನು ಲೆಕ್ಕಹಾಕಿದರೆ ಅವರಿಗೆ 129 ದಿನಗಳು ಸಿಗುತ್ತದೆ. 1997 ಮತ್ತು 2014ರಲ್ಲಿ ಅವರು 35 ದಿನಗಳ ಅವಧಿ ಜೈಲಿನಲ್ಲಿದ್ದರು. ಪೆರೋಲ್ ಅವಧಿಯನ್ನು 17 ದಿನ ಇಳಿಸಿದ ಬಳಿಕ 18 ದಿನ ಉಳಿಯುತ್ತದೆ.

   ತಮಿಳುನಾಡು ರಾಜಕೀಯದಲ್ಲಿ ಸಂಚಲನ

   ತಮಿಳುನಾಡು ರಾಜಕೀಯದಲ್ಲಿ ಸಂಚಲನ

   ಕಾರಾಗೃಹ ಇಲಾಖೆಯ ಯಾವುದೇ ಪರಿಗಣನೆ ಇಲ್ಲದೆ ಅವರು 2021ರ ಜನವರಿಯಲ್ಲಿ ಬಿಡುಗಡೆಯಾಗುತ್ತಾರೆ. ಅವರು ಸಾಮಾನ್ಯ ವಿನಾಯಿತಿಯನ್ನು ನೀಡಿದರೆ ಸೆಪ್ಟೆಂಬರ್‌ನಲ್ಲಿಯೇ ಹೊರಬರಬಹುದಾಗಿದೆ ಎಂದು ಪಾಂಡಿಯನ್ ಹೇಳಿದ್ದಾರೆ. ಶಶಿಕಲಾ ಜೈಲಿನಿಂದ ಬಿಡುಗಡೆಯಾದರೆ ತಮಿಳುನಾಡಿನ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟಾಗಲಿದೆ. ಜತೆಗೆ ರಾಜ್ಯದಲ್ಲಿ ಎಐಎಡಿಎಂಕೆ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

   English summary
   Lawyer of VK Sasikala said she may come out of jail by this September end as she is eligible for remission.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X