ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ; ತಮಿಳುನಾಡಿನಲ್ಲಿ ಆನೆಯ 20ನೇ ಹುಟ್ಟುಹಬ್ಬ ಆಚರಣೆ

|
Google Oneindia Kannada News

ಚೆನ್ನೈ, ಮೇ 26; ಜನರು ಕೇಕ್ ಕಟ್ ಮಾಡಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ತಮಿಳುನಾಡಿನಲ್ಲಿ ಆನೆಯೊಂದರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.

ಮೇ 25ರಂದು 'ಅಖಿಲಾ' ಹೆಸರಿನ ಆನೆಯ 20ನೇ ಹುಟ್ಟುಹಬ್ಬ. ಹಲವಾರು ಜನರು ಸೇರಿ ಆನೆಗೆ ವಿವಿಧ ಹಣ್ಣುಗಳನ್ನು ನೀಡಿ, ಹ್ಯಾಪಿ ಬರ್ತಡೇ ಅಖಿಲಾ ಎಂದು ಹಾಡು ಹೇಳುತ್ತಾ ಆನೆ ಹುಟ್ಟುಹಬ್ಬ ಆಚರಿಸಿದ್ದಾರೆ.

ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ! ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ!

ಹಣ್ಣುಗಳನ್ನು ತಿನ್ನುತ್ತಾ ಜನರಿಗೆ ಧನ್ಯವಾದ ಸಲ್ಲಿಸುವ ಮಾದರಿಯಲ್ಲಿ ಅಖಿಲಾ ಆನೆಯೂ ಜನರ ಜೊತೆ ಬೆರೆತು ಸಂತಸದಿಂದಲೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ

Viral Video Elephant Akila Birthday At Tamil Nadu

'ಅಖಿಲಾ' ಹೆಸರಿನ ಆನೆ ತಮಿಳುನಾಡಿನ ತಿರುಚ್ಚಿಯ ತಿರುವನೈಕ್ಕಾವಲ್‌ನಲ್ಲಿನ ಅಕಿಲಾಂಡೇಶ್ವರಿ ಸಮೇತ ಜಂಜುಕೇಶ್ವರ ದೇವಾಲಯದ್ದು. ಬುಧವಾರ ದೇವಾಲಯದ ಆವರಣದಲ್ಲಿಯೇ ಆನೆ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.

ವೈರಲ್‌ ವಿಡಿಯೋ: ಬಸ್‌ ಮೇಲೆ ಆನೆ ದಾಳಿ, ಚಾಲಕ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ ನೋಡಿ? ವೈರಲ್‌ ವಿಡಿಯೋ: ಬಸ್‌ ಮೇಲೆ ಆನೆ ದಾಳಿ, ಚಾಲಕ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ ನೋಡಿ?

ಅಕಿಲಾಂಡೇಶ್ವರಿ ಸಮೇತ ಜಂಜುಕೇಶ್ವರ ದೇವಾಲಯ ಪಂಚಭೂತ ಸ್ಥಳಗಳಲ್ಲಿ ಒಂದಾಗಿದೆ ಎಂಬ ನಂಬಿಕೆ ಇದೆ. ಇದು 'ನೀರು' ಎಂಬುದನ್ನು ಸೂಚಿಸುತ್ತದೆ. ಲಿಂಗದ ಕೆಳಗಿನಿಂದ ನೀರು ಹರಿದುಬರುತ್ತದೆ ಎಂಬ ನಂಬಿಕೆ ಇದೆ.

ಜಂಬೂ ಎಂಬ ಋಷಿ ಇಲ್ಲಿ ಬಂದು ತಪಸ್ಸು ಮಾಡಿದನು, ತಪಸ್ಸಿಗೆ ಮೆಚ್ಚಿ ಶಿವ ದರ್ಶನ ನೀಡಿದರು ಎನ್ನುತ್ತದೆ ಇತಿಹಾಸ. ಉದ್ಯೋಗ ಸಮಸ್ಯೆ ಎದುರಿಸುತ್ತಿರುವವರು ಇಲ್ಲಿ ಬಂದು ಪೂಜಿಸಿದರೆ ಸಮಸ್ಯ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ, ನೂರಾರು ಭಕ್ತರು ಪ್ರತಿದಿನ ಇಲ್ಲಿಗೆ ಆಗಮಿಸುತ್ತಾರೆ.

ಇಲ್ಲಿ ಶಿವನ ದರ್ಶನವಾದಾಗ ಋಷಿ ಹಣ್ಣನ್ನು ನೀಡಿದ್ದ ಎಂಬುದು ಇತಿಹಾಸ. ಈ ದೇವಾಲಯಕ್ಕೆ ಸೇರಿದ 'ಅಖಿಲಾ' ಆನೆಯ ಹುಟ್ಟುಹಬ್ಬವನ್ನು ಸಹ ಹಣ್ಣುಗಳನ್ನು ನೀಡುವುದರ ಮೂಲಕ ಆಚರಣೆ ಮಾಡಲಾಗಿದೆ.

English summary
Elephant Akila 20th birthday celebration with fruit. Viral video from Trichy's Thiruvanaikoil Arulmigu Jambukeswarar temple, Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X