ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಕೊಡಿ ಪ್ಲೀಸ್: ಮದುವೆ ಹುಡುಗಿಗಾಗಿ ಪೋಸ್ಟರ್ ಹಾಕಿದ ಇಲ್ಲೊಬ್ಬ ಧೀರ!

|
Google Oneindia Kannada News

ಚೆನ್ನೈ, ಜೂನ್ 26: ಹುಡುಗಿ ಹುಡುಕಿ ಹುಡುಕಿ ಸಾಕಾಯ್ತೇ?, ಹೆಣ್ಣು ಸಿಗದೇ ಸೋತಿರುವವರಿಗೆ? ಮದುವೆಗೆ ಹುಡುಗಿ ಹುಡುಕುತ್ತಿರುವವರಿಗೆ? ಹೊಸ ದಾಂಪತ್ಯ ಬದುಕಿಗೆ ಕಾಲಿರಿಸಲು ಹವಣಿಸುತ್ತಿರುವವರಿಗೆ ತಮಿಳುನಾಡಿನ ಭೂಪನೊಬ್ಬ ಬೊಂಬಾಟ್ ಐಡಿಯಾವೊಂದನ್ನು ಕೊಟ್ಟಿದ್ದಾನೆ.

ಸಾಮಾನ್ಯವಾಗಿ ಬ್ಯಾನರ್ ಹಾಕಿಸುವುದು, ಪೋಸ್ಟರ್ ಹಾಕಿಸುವುದು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರ ಕೆಲಸ. ತಮ್ಮ ನಾಯಕರಿಗೆ ಜೈಕಾರ, ಅಭಿನಂದನೆ ಸಲ್ಲಿಸುವುದಕ್ಕಾಗಿ ಈ ರೀತಿ ಪೋಸ್ಟರ್ ಅನ್ನು ಹಾಕುತ್ತಾರೆ. ಆದರೆ ತಮಿಳುನಾಡಿನ ಯುವಕನೊಬ್ಬ ತನಗೆ ಹೆಣ್ಣು ಬೇಕು ಎನ್ನುವ ಪೋಸ್ಟರ್ ಹಾಕುವ ಮೂಲಕ ಸಖತ್ ಸುದ್ದಿ ಮಾಡಿದ್ದಾನೆ.

ಇವಳೂ ಇರಲಿ, ಅವಳೂ ಬರಲಿ: ಒಂದೇ ಮಂಟಪದಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ..!ಇವಳೂ ಇರಲಿ, ಅವಳೂ ಬರಲಿ: ಒಂದೇ ಮಂಟಪದಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ..!

ಅಲ್ಲ ಕಣ್ರೀ ಮದುವೆಗೆ ಹುಡುಕಿ ಬೇಕು ಅಂತಾ ಪೋಸ್ಟರ್ ಹಾಕಿದರೆ ಹುಡುಗಿ ಸಿಗುತ್ತಾಳಾ?. ಹೀಗೆ ಪ್ರಶ್ನೆ ಮಾಡುವ ಜನರಿಗೆ ಈ ವರದಿಯಲ್ಲಿ ಉತ್ತರ ಸಿಗಲಿದೆ. ವಧುವಿಗಾಗಿ ಪೋಸ್ಟರ್ ಹಾಕಿದ ಭೂಪನ ಹಿನ್ನೆಲೆ ಹಾಗೂ ಪೋಸ್ಟರ್ ಹಾಕಿದ ನಂತರದಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದನ್ನು ಈ ವೈರಲ್ ಸುದ್ದಿಯಲ್ಲಿ ಓದಿ ತಿಳಿದುಕೊಳ್ಳೋಣ.

5 ವರ್ಷಗಳಿಂದ ವಧುವಿಗಾಗಿ ಹುಡುಕಾಟ ನಡೆಸಿದ ಜಗನ್

5 ವರ್ಷಗಳಿಂದ ವಧುವಿಗಾಗಿ ಹುಡುಕಾಟ ನಡೆಸಿದ ಜಗನ್

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಈ ವ್ಯಕ್ತಿಯ ಹೆಸರು ಜಗನ್. ತಮಿಳುನಾಡಿನ ಮಧುರೈನ ವಿಲ್ಲಾಪುರಂ ಮೂಲದ 27 ವರ್ಷದ ಜಗನ್ ಕಳೆದ ಐದು ವರ್ಷಗಳಿಂದಲೂ ವಧುವಿನ ಹುಡುಕಾಟದಲ್ಲಿ ಬ್ಯುಸಿ ಆಗಿದ್ದಾರೆ. ಐದು ವರ್ಷಗಳಿಂದ ಹುಡುಗಿ ಹುಡುಕಿದ್ದರೂ, ತಮ್ಮ ಮನಸ್ಥಿತಿ ಮತ್ತು ಮನೆ ಸ್ಥಿತಿಗೆ ಹೋಲುವ ಹಾಗೂ ಹೊಂದಾಣಿಕೆ ಆಗುವ ಹುಡುಕಿ ಸಿಗಲಿಲ್ಲ. ಇದರಿಂದ ರೋಸಿ ಹೋಗಿರುವ ಜಗನ್ ಅದೊಂದು ಪೋಸ್ಟರ್ ಮೂಲಕ ಮತ್ತೀಗ ಸುದ್ದಿ ಆಗಿದ್ದಾರೆ.

ಪಾರ್ಟ್ ಟೈಮ್ ಡಿಸೈನರ್ ತಲೆಯಲ್ಲಿ ಪೋಸ್ಟರ್ ಐಡಿಯಾ

ಪಾರ್ಟ್ ಟೈಮ್ ಡಿಸೈನರ್ ತಲೆಯಲ್ಲಿ ಪೋಸ್ಟರ್ ಐಡಿಯಾ

ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಗನ್, ಪಾರ್ಟ್ ಟೈಮ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಾರೆ. ಬಿಡುವಿನ ಸಂದರ್ಭಗಳಲ್ಲಿ ಪೋಸ್ಟರ್ ಅನ್ನು ಡಿಸೈನ್ ಮಾಡುವ ಜಗನ್, ಬೇರೆಯವರಿಗಾಗಿ ಹಲವು ಬಾರಿ ಪೋಸ್ಟರ್ ಮತ್ತು ಬ್ಯಾನರ್ ಅನ್ನು ಸಿದ್ಧಪಡಿಸುತ್ತಿದ್ದರು. ಈ ವೇಳೆ ತಮಗಾಗಿ ಒಂದು ಪೋಸ್ಟರ್ ಅನ್ನು ಏಕೆ ಮಾಡಿಕೊಳ್ಳಬಾರದು ಎಂದು ಆಲೋಚನೆ ಮಾಡಿದ್ದಾರೆ. ಆಗ ಹೊಳೆದಿದ್ದೇ ಬಯೋಡಾಟಾದ ಪೋಸ್ಟರ್ ಐಡಿಯಾ.

ಬಯೋಡಾಟವನ್ನೇ ಪೋಸ್ಟರ್ ಮಾಡಿರುವ ಜಗನ್

ಬಯೋಡಾಟವನ್ನೇ ಪೋಸ್ಟರ್ ಮಾಡಿರುವ ಜಗನ್

ತಮಿಳುನಾಡಿನ ಜಗನ್ ವೃತ್ತಿಯಲ್ಲಿ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮದುವೆಗೆ ಹುಡುಕಿ ಹುಡುಕಾಟಕ್ಕಾಗಿ ಸಿದ್ಧಪಡಿಸಿದ ಬಯೋಡಾಟಾವನ್ನೇ ದೊಡ್ಡದಾಗಿ ಪೋಸ್ಟರ್ ಮಾಡಿ ಹಾಕಲಾಗಿದೆ. ಈ ಪೋಸ್ಟರ್ ನಲ್ಲಿ ಜಗನ್ ತಮ್ಮ ವಿದ್ಯಾಭ್ಯಾಸ, ವಯಸ್ಸು, ಧರ್ಮ, ವೃತ್ತಿ, ಆದಾಯ, ಆಸ್ತಿಯ ವಿವರವನ್ನು ನೀಡುವುದರ ಜೊತೆಗೆ ಅವರದೊಂದು ಪುಟ್ಟ ಫೋಟೋವನ್ನು ಹಾಕಲಾಗಿದೆ. ಈ ಪೋಸ್ಟರ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಹೆಣ್ಣು ಬೇಕು ಅಂದವನಿಗೆ ಬಂದಿದ್ದು ಬರೀ ಬ್ರೋಕರ್ಸ್ ಫೋನ್

ಹೆಣ್ಣು ಬೇಕು ಅಂದವನಿಗೆ ಬಂದಿದ್ದು ಬರೀ ಬ್ರೋಕರ್ಸ್ ಫೋನ್

ಹುಡುಗಿ ಬೇಕು ಎಂದು ಪೋಸ್ಟರ್ ಹಾಕಿದರೆ ಸಾಮಾನ್ಯವಾಗಿ, ಹುಡುಗಿಯರು ಅಥವಾ ಹುಡುಗಿಯ ಪೋಷಕರು ಕರೆ ಮಾಡುತ್ತಿದ್ದರು. ಆದರೆ ಜಗನ್ ಅಂದುಕೊಂಡಿದ್ದೇ ಬೇರೆ, ಅಲ್ಲಿಂದ ಮುಂದೆ ಆಗಿದ್ದೇ ಬೇರೆ. ಈ ಪೋಸ್ಟರ್ ಅನ್ನು ನೋಡಿದ ನಂತರದಲ್ಲಿ ಹುಡುಗಿಯ ಪೋಷಕರ ಬದಲಿಗೆ ಬ್ರೋಕರ್ಸ್ ಕಾಟ ಶುರುವಾಯಿತು. ನಿಮಗೆ ಹೆಣ್ಣನ್ನು ನಾವು ತೋರಿಸುತ್ತೇವೆ ಎಂದು ಮಧ್ಯವರ್ತಿಗಳು ಮೇಲಿಂದ ಮೇಲೆ ಫೋನ್ ಮಾಡುವುದಕ್ಕೆ ಶುರು ಮಾಡಿದರು ಎನ್ನುವುದು ಜಗನ್ ಮಾತು.

ಟ್ರೋಲ್ ಬಗ್ಗೆ ಪೋಸ್ಟರ್ ಹಾಕಿದ ಜಗನ್ ಹೇಳುವುದೇನು?

ಟ್ರೋಲ್ ಬಗ್ಗೆ ಪೋಸ್ಟರ್ ಹಾಕಿದ ಜಗನ್ ಹೇಳುವುದೇನು?

"90ರ ದಶಕದಲ್ಲಿ ಜನಿಸಿದವರಿಗೆ ಇದು ಕಠಿಣ ಅವಧಿ ಎಂದು ನಾನು ಭಾವಿಸುತ್ತೇನೆ. ನನ್ನ ಬಗ್ಗೆ ಕೆಲವರು ತಮಾಷೆ ಮಾಡಬಹುದು, ನನಗೂ ಅಪಹಾಸ್ಯ ಮಾಡುತ್ತಾರೆ ಎಂಬುದು ತಿಳಿದಿದೆ. ಆದರೆ ನಾನು ಅದ್ಯಾವುದಕ್ಕೂ ಹೆದರುವುದಿಲ್ಲ. ಅವರು ನನ್ನ ಪೋಸ್ಟರ್‌ನಿಂದ ಮೀಮ್‌ಗಳನ್ನು ಮತ್ತು ಟ್ರೋಲ್ ಅನ್ನು ಮಾಡುತ್ತಿದ್ದಾರೆ. ಆ ಮೂಲಕ ಅವರ ಖರ್ಚಿನಲ್ಲಿ ನಾನು ವೈರಲ್ ಆಗುತ್ತಿದ್ದೇನೆ," ಎಂದು ಜಗನ್ ಹೇಳುತ್ತಾರೆ.

English summary
Viral News: Tamil Nadu man putting up posters to looking for bride. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X