• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದಿ ಹೇರಿಕೆ ವಿರುದ್ಧ ಹೋರಾಟಕ್ಕೆ ಹೊಸ ಟೀ-ಶರ್ಟ್!

|

ಚೆನ್ನೈ, ಸಪ್ಟೆಂಬರ್.08: ದೇಶಾದ್ಯಂತ ಹಿಂದಿ ಹೇರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ತಮಿಳುನಾಡಿನಲ್ಲಿ ಹೊಸ ಅಭಿಯಾನ ಶುರುವಾಗಿದೆ. ಹಿಂದಿ ಹೇರಿಕೆ ವಿರುದ್ಧ ಘೋಷಣೆಗಳಿರುವ ಟೀ-ಶರ್ಟ್ ಗಳು ಸಖತ್ ಸದ್ದು ಮಾಡುತ್ತಿವೆ.

ತಮಿಳಿನ ಯುವ ಸಂಗೀತಕಾರ ಯುವನ್ ಶಂಕರ್ ರಾಜನ್ ಮತ್ತು ನಟ ಶಿರಿಶ್ ಸರವಣನ್ ಅವರು "ನಾನು ತಮಿಳು ಮಾತನಾಡುವ ಭಾರತೀಯ, ನನಗೆ ಹಿಂದಿ ಗೊತ್ತಿಲ್ಲ ಹೋಗಪ್ಪ" ಎಂದು ಬರೆದ ಟೀ-ಶರ್ಟ್ ಧರಿಸಿರುವ ಫೋಟೋವನ್ನು ತಮ್ಮ ಖಾತೆಯಲ್ಲಿ ಮೊದಲಿಗೆ ಶೇರ್ ಮಾಡಿದ್ದರು.

ಹಿಂದಿ ಹೇರಿಕೆ: ಸಿಡಿದೆದ್ದ ದಕ್ಷಿಣ ಭಾರತದ ನಾಯಕರು

ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಮತ್ತು ತಮಿಳು ಭಾಷೆಯ ಪರವಾದ ಟೀ-ಶರ್ಟ್ ಗಳನ್ನು ಧರಿಸಿದ ರಾಜಕಾರಣಿಗಳು, ಯುವಕರು, ಕಾಲೇಜು ವಿದ್ಯಾರ್ಥಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹಿಂದಿ ಹೇರಿಕೆ ವಿರುದ್ಧ ಹಲವರ ಪೋಸ್ಟ್:

ಭಾರತದಲ್ಲಿ ಹಿಂದಿ ಹೇರಿಕೆ ವಿರುದ್ಧ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಗೀತಗಾರ ಯುವನ್ ಶಂಕರ್ ರಾಜನ್ ಟ್ವೀಟ್ ಮಾಡಿದ್ದ ಫೋಟೋವನ್ನು ಡಿಎಂಕೆ ಸಂಸದೆ ಕನಿಮೋಳಿ ರೀ-ಟ್ವೀಟ್ ಮಾಡುವ ಮೂಲಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮನೋಭಾವವನ್ನು ಹುಟ್ಟು ಹಾಕುವುದಕ್ಕೆ ಒಂದೇ ಒಂದು ಕಿಡಿ ಸಾಕು. ಹಿಂದಿ ಹೇರಿಕೆಯ ಯುಗದಲ್ಲಿ ನಾವು ಟಿಶರ್ಟ್ ‌ಗಳನ್ನು ಮುದ್ರಿಸಿದಾಗ ತಾರತಮ್ಯ ನೀತಿ ವಿರುದ್ಧ ಹೋರಾಡಲು ಯುವಕರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಕನಿಮೋಳಿ ಬರೆದುಕೊಂಡಿದ್ದಾರೆ.

English summary
Viral News: ‘I am Indian, I Don’t Speak Hindi’: New T-Shirts In Trend With Slogans Against Hindi Imposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X