ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರುಕುಳ ತಾಳಲಾರದೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಆತ್ಮಹತ್ಯೆ

By Mahesh
|
Google Oneindia Kannada News

ವಿಲ್ಲುಪುರಂ(ತಮಿಳುನಾಡು), ಜ.24: ವಿಲ್ಲುಪುರಂನ ಖಾಸಗಿ ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶನಿವಾರ ತಡರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾಲೇಜಿನ ಆಡಳಿತ ಮಂಡಳಿಯೇ ಕಾರಣ ಎಂದು ಸೂಸೈಡ್ ನೋಟ್ ಬರೆದಿಟ್ಟಿದ್ದಾರೆ. ಮೂವರು ವಿದ್ಯಾರ್ಥಿನಿಯರ ಪೋಷಕರು ಹಾಗೂ ಸಾರ್ವಜನಿಕರ ತೀವ್ರ ಪ್ರತಿಭಟನೆ ನಂತರ ಕಾಲೇಜಿಗೆ ಬೀಗ ಹಾಕಲಾಗಿದೆ.

ವಿಲ್ಲುಪುರಂನ ಪ್ರತಿಷ್ಠಿತ ಎಸ್ ವಿಎಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನ ವೈದ್ಯಕೀಯ ಕಾಲೇಜಿನಲ್ಲಿ ನ್ಯಾಚುರೋಪತಿ ಕೋರ್ಸ್ ಓದುತ್ತಿದ್ದ ಈ ಮೂವರು ವಿದ್ಯಾರ್ಥಿನಿಯರು ತಾವು ಈ ನಿರ್ಧಾರಕ್ಕೆ ಬರಲು ಕಾಲೇಜಿನ ಆಡಳಿತ ಮಂಡಳಿಯೇ ಕಾರಣ ಎಂದು ಆತ್ಮಹತ್ಯೆ ಪತ್ರದಲ್ಲಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ, ಇದುವರೆವಿಗೂ ಯಾರನ್ನು ಬಂಧಿಸಿಲ್ಲ.[ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ: ನರೇಂದ್ರ ಮೋದಿ]

ಮೃತ ವಿದ್ಯಾರ್ಥಿನಿಯರನ್ನು ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿ ಪ್ರಿಯಾಂಕಾ, ಟಿ ಮೋನಿಶಾ ಹಾಗೂ ಇ ಶರಣ್ಯ ಎಂದು ಗುರುತಿಸಲಾಗಿದೆ. ಮೂರು ದುಪ್ಪಟ್ಟಾ ಬಳಸಿಕೊಂಡು ಉಸಿರುಗಟ್ಟಿಸಿಕೊಂಡು ಕಾಲೇಜು ಸಮೀಪದ ಬಾವಿಗೆ ಹಾರಿದ್ದಾರೆ.

ಕಾಲೇಜು ಆಡಳಿತ ಮಂಡಳಿ ನಮ್ಮಿಂದ ಅಧಿಕ ಹಣವನ್ನು ನಿರೀಕ್ಷೆ ಮಾಡುತ್ತಿದ್ದರು. ಕಾಲೇಜಿನ ಚೇರ್ಮನ್ ವಾಸುಕಿ ಸುಬ್ರಮಣಿಯನ್ ಅವರಿಗೆ ದೂರು ನೀಡಿದರು ಪ್ರಯೋಜನವಾಗಲಿಲ್ಲ. ನಮ್ಮ ಸಾವಿನಿಂದ ಬದಲಾವಣೆ ಬರಲಿ ಎಂದು ಬಯಸಿದ್ದೇವೆ ಎಂದು ಎರಡು ಪುಟಗಳ ಆತ್ಮಹತ್ಯಾ ಪತ್ರದಲ್ಲಿ ಹೇಳಲಾಗಿದೆ.

ಈ ಹಿಂದೆ ದೂರುಗಳು ಕೇಳಿ ಬಂದಿದ್ದರೂ...

ಈ ಹಿಂದೆ ದೂರುಗಳು ಕೇಳಿ ಬಂದಿದ್ದರೂ...

ಚೆನ್ನೈ -ಸೇಲಂ ಮುಖ್ಯರಸ್ತೆಗೆ ಹೊಂದಿಕೊಂಡಿರುವ ತಮಿಳುನಾಡಿನ ಡಾ ಎಂಜಿಆರ್ ಮೆಡಿಕಲ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಈ ಕಾಲೇಜಿನ ಬಗ್ಗೆ ಈ ಹಿಂದೆ ದೂರುಗಳು ಕೇಳಿ ಬಂದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮೃತ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳದಿಂದ ದೊರೆತ ಮೊದಲ ಚಿತ್ರಗಳು

ಘಟನಾ ಸ್ಥಳದಿಂದ ದೊರೆತ ಮೊದಲ ಚಿತ್ರಗಳು ಹೀಗಿವೆ

ವಿದ್ಯಾರ್ಥಿನಿಯರ ಪೋಷಕರ ಆಕ್ರಂದನ

ವಿದ್ಯಾರ್ಥಿನಿಯರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಓದಿಗೆ ಖರ್ಚಾದ ವೆಚ್ಚ ಎಷ್ಟು?

ಓದಿಗೆ ಖರ್ಚಾದ ವೆಚ್ಚ ಎಷ್ಟು?

ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರರು ಸುಮಾರು 6 ಲಕ್ಷ ರು ಖರ್ಚು ಮಾಡಿದ್ದರು ಆದರೆ, ಯಾವುದೇ ಮೂಲ ಸೌಕರ್ಯಗಳು ಅವರಿಗೆ ಸಿಕ್ಕಿರಲಿಲ್ಲ. ಕಾಲೇಜಿನ ದುಃಸ್ಥಿತಿ ಹಾಗೂ ಹೆಚ್ಚು ಫೀ ಬಗ್ಗೆ 20ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

English summary
Three women, who were students of a private medial college in Tamil Nadu, have been found dead on Jan 23 in Villupuram. It is suspected that the students committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X