ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಮತ್ತೋರ್ವ ಡಿಎಂಕೆ ಶಾಸಕರಿಗೆ ಕೊರೊನಾ ಸೋಂಕು

|
Google Oneindia Kannada News

ಚೆನ್ನೈ, ಜೂನ್ 22: ತಮಿಳುನಾಡಿನಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಇದೀಗ ರಿಶಿವಂಧಿಯಮ್ ಕ್ಷೇತ್ರದ ಡಿಎಂಕೆ ಶಾಸಕ ವಸಂತಮ್ ಕಾರ್ತಿಕೇಯನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊವಿಡ್ 19 ಸೋಂಕಿಗೆ ಬಲಿಯಾದ ಡಿಎಂಕೆ ಶಾಸಕಕೊವಿಡ್ 19 ಸೋಂಕಿಗೆ ಬಲಿಯಾದ ಡಿಎಂಕೆ ಶಾಸಕ

ಸೋಂಕು ತಗುಲಿದ ಡಿಎಂಕೆ ಎರಡನೇ ಶಾಸಕರು ಇವರಾಗಿದ್ದು ತಮಿಳುನಾಡಿನ ಮೂವರು ಶಾಸಕರಲ್ಲಿ ಇವರೊಬ್ಬರಾಗಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ಕಾರ್ತಿಕೇಯನ್ ತುಂಬಾ ಕಠಿಣ ಶ್ರಮ ವಹಿಸಿದ್ದರು. ತುಂಬಾ ಜನರಿಗೆ ಸಹಾಯ ಮಾಡಿದ್ದರು, ಅವರ ಜೊತೆ ಮಾತನಾಡಿ ಆತ್ಮ ವಿಶ್ವಾಸ ತುಂಬಿದ್ದೇನೆ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

Vasantham K Karthikeyan Becomes Second DMK MLA To Test Positive For Coronavirus

ಕಾರ್ತಿಕೇಯನ್ ಮತ್ತು ಅವರ ತಾಯಿ ಇಬ್ಬರಿಗೂ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಇವರ ಜೊತೆಗೆ ಶಾಸಕನ ಪತ್ನಿ ಮತ್ತು ಮಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಡಿಎಂಕೆ ಶಾಸಕ ಜೆ. ಅನ್ಬಳಗನ್ ಅವರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದರು. ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರನ್ನು ಜೂನ್ 2 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 10ರಂದು ಮೃತಪಟ್ಟಿದ್ದರು.

English summary
Vasantham K Karthikeyan, the DMK MLA from Rishivandhiyam, tested positive for Covid-19 on Sunday. He is the second legislator from the DMK and third in the state to contract the infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X