ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನ ಪೂರ್ವಜರ ಗ್ರಾಮದಲ್ಲಿ ಪೂಜೆ

|
Google Oneindia Kannada News

ಚೆನ್ನೈ, ನವೆಂಬರ್ 3: ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಗೆಲುವಿಗಾಗಿ ತಮಿಳುನಾಡಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

'ಚುನಾವಣೆಗೂ ಮುನ್ನ ಮತ ಚಲಾಯಿಸಲು ಇದು ನಮ್ಮ ಕೊನೆಯ ದಿನ. ಹೀಗಾಗಿ ನಾನು ಬೆಥ್ಲೆಹೆಮ್‌ನಲ್ಲಿ ಈ ಸಮರ ನೆಲೆಯಲ್ಲಿ ನಮಗೆ ಗೆಲುವು ತಂದುಕೊಡಲು ನೆರವು ನೀಡುತ್ತಿರುವ ಮತದಾರರು ಮತ್ತು ಕಾರ್ಯಕರ್ತರ ಜತೆಗೆ ಚುನಾವಣಾ ಪ್ರಚಾರ ನಡೆಸುತ್ತಿದ್ದೇನೆ' ಎಂದು ಕಮಲಾ ಹ್ಯಾರಿಸ್ ಟ್ವೀಟ್ ಮಾಡಿದ್ದರು.

ಸಂಪೂರ್ಣ ಬಹುಮತ ಕೊಡಿ: ಕಮಲಾ ಹ್ಯಾರಿಸ್ ಮನವಿಸಂಪೂರ್ಣ ಬಹುಮತ ಕೊಡಿ: ಕಮಲಾ ಹ್ಯಾರಿಸ್ ಮನವಿ

ದೂರ ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಭರ್ಜರಿ ಪ್ರಚಾರ ನಡೆಸಿದ್ದರೆ, ಸಪ್ತಸಾಗರದ ಸಾವಿರಾರು ಕಿಮೀ ಈಚೆ ಇರುವ ತಮಿಳುನಾಡಿನ ಕೃಷಿ ಅವಲಂಬಿತ ಸಣ್ಣ ಗ್ರಾಮದ ಜನರು ಕಮಲಾ ಅವರ ಗೆಲುವಿಗಾಗಿ ಜತೆಗೂಡಿ ಪ್ರಾರ್ಥಿಸುತ್ತಿದ್ದಾರೆ.

ಭಾರತೀಯರ ಹೃದಯ ಗೆದ್ದರೆ ಮಾತ್ರ ಅಮೆರಿಕ ಅಧ್ಯಕ್ಷರಾಗಲು ಸಾಧ್ಯ..!ಭಾರತೀಯರ ಹೃದಯ ಗೆದ್ದರೆ ಮಾತ್ರ ಅಮೆರಿಕ ಅಧ್ಯಕ್ಷರಾಗಲು ಸಾಧ್ಯ..!

ಈ ಗ್ರಾಮದ ಬಹುತೇಕ ಜನರಲ್ಲಿ ಕಮಲಾ ಹ್ಯಾರಿಸ್ ನೋಡಲು ಹೇಗಿದ್ದಾರೆ ಎನ್ನುವುದೂ ತಿಳಿದಿಲ್ಲ. ಆದರೆ ಅವರಿಗೆ ಅದರ ಅಗತ್ಯವಿಲ್ಲ. ಏಕೆಂದರೆ ಕಮಲಾ ಹ್ಯಾರಿಸ್ ಅವರ ಕುಟುಂಬದ ಮೂಲ ತಿರುವರೂರ್ ಜಿಲ್ಲೆಯ ಮನ್ನರಗುಡಿ ತಾಲ್ಲೂಕಿನ ದುಲಸೆಂದ್ರಾಪುರಂ. ಇಲ್ಲಿನ ಜನರಿಗೆ ಕಮಲಾ ತಮ್ಮವರೆಂಬ ಪ್ರೀತಿಯೇ ಸಾಕು, ಅವರ ಗೆಲುವಿಗಾಗಿ ಪ್ರಾರ್ಥಿಸಲು. ಮುಂದೆ ಓದಿ.

ಗ್ರಾಮದ ಎಲ್ಲೆಡೆ ಪೋಸ್ಟರ್

ಗ್ರಾಮದ ಎಲ್ಲೆಡೆ ಪೋಸ್ಟರ್

ಸ್ಥಳೀಯ ದೇವತೆ ಅಯ್ಯನರ್ ದೇವಸ್ಥಾನದಲ್ಲಿ ಮಂಗಳವಾರ ಗ್ರಾಮಸ್ಥರೆಲ್ಲ ಸೇರಿ ಕಮಲಾ ಅವರಿಗೆ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಮತ್ತು ಅವರ ಕುಟುಂಬ ದುಲಸೆಂದ್ರಾಪುರಂ ಗ್ರಾಮದವರಾಗಿದ್ದಾರೆ. ಕಮಲಾ ಅವರು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎನ್ನುವುದು ತಿಳಿಯುತ್ತಿದ್ದಂತೆಯೇ ಗ್ರಾಮದ ಅನೇಕ ಕಡೆ ಅವರ ಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು.

ದೇವಸ್ಥಾನದಲ್ಲಿ ವಿಶೇಷ ಪೂಜೆ

ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಂಗಳವಾರ ದೇವಸ್ಥಾನದ ಹೊರಭಾಗದಲ್ಲಿ ಫ್ಲೆಕ್ಸ್ ಅಂಟಿಸಿದ ಗ್ರಾಮಸ್ಥರು, ಅಭಿಷೇಕ ಸೇರಿದಂತೆ ಅನೇಕ ಪೂಜಾ ವಿಧಿಗಳನ್ನು ನಡೆಸಿದರು. ಈ ದೇವಸ್ಥಾನವು ಕಮಲಾ ಅವರ ಕುಟುಂಬದ ಮೂಲ ದೇವಸ್ಥಾನವಾಗಿದೆ. ಮತದಾನದ ದಿನವಾದ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದರು.

ಕಮಲಾ ಗೆಲ್ಲುವುದನ್ನು ಬಯಸಿದ್ದೇವೆ

ಕಮಲಾ ಗೆಲ್ಲುವುದನ್ನು ಬಯಸಿದ್ದೇವೆ

'ಅಮೆರಿಕದಲ್ಲಿ ಹೆಚ್ಚಿನ ಮತಗಳು ಆನ್‌ಲೈನ್ ಮೂಲಕವೇ ನಡೆಯುತ್ತದೆ ಎನ್ನುವುದು ಗ್ರಾಮಸ್ಥರಿಗೆ ತಿಳಿದಿದೆ. ಆದರೂ ಚುನಾವಣಾ ದಿನದಂದು ಪೂಜೆ ಸಲ್ಲಿಸಲು ಬಯಸಿದ್ದರು. ನಾವೆಲ್ಲರೂ ಕಮಲಾ ಅವರು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಆಶಿಸಿದ್ದೇವೆ. ಈ ವಾರ ನಮಗೆ ಫಲಿತಾಂಶ ಸಿಗುವ ನಿರೀಕ್ಷೆಯಿದೆ' ಎಂದು ಗ್ರಾಮಸ್ಥ ಸೆಂಥಿಲ್ ಕುಮಾರನ್ ತಿಳಿಸಿದರು.

ಚೆನ್ನೈನಲ್ಲಿ 'ಚಿಟ್ಟಿ'

ಚೆನ್ನೈನಲ್ಲಿ 'ಚಿಟ್ಟಿ'

ಚೆನ್ನೈನಲ್ಲಿ ಕಮಲಾ ಅವರ ಚಿಕ್ಕಮ್ಮ (ತಾಯಿಯ ತಂಗಿ) ಮತ್ತು ಇತರೆ ಸಂಬಂಧಿಕರು ನೆಲೆಸಿದ್ದಾರೆ. ಅವರು ಚುನಾವಣೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಂತಿಲ್ಲ. ಪಕ್ಷದ ಅಭ್ಯರ್ಥಿಯ ನಾಮನಿರ್ದೇಶನವನ್ನು ಆಗಸ್ಟ್ 18ರಂದು ಒಪ್ಪಿಕೊಂಡ ವೇಳೆ ಕಮಲಾ ಅವರು ತಮ್ಮ 'ಚಿಟ್ಟಿ'ಯ (ಚಿಕ್ಕಮ್ಮ) ಬಗ್ಗೆ ಪ್ರಸ್ತಾಪಿಸಿದ್ದರು.

English summary
US Elections: People in Thulasendrapuram village of Tamil Nadu, the ancestral village of Demacratic vice president candidate Kamala Harris, has performed a special pooja for her victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X