ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಅಂತಾರಾಷ್ಟ್ರೀಯ ಧೈರ್ಯವಂತ ಮಹಿಳೆ ಪ್ರಶಸ್ತಿ"ಗೆ ತಮಿಳುನಾಡಿನ ಕೌಸಲ್ಯಾ ಶಂಕರ್ ನಾಮನಿರ್ದೇಶನ

|
Google Oneindia Kannada News

ಚೆನ್ನೈ, ಮಾರ್ಚ್ 12: ಯುಎಸ್‌ ಕಾನ್ಸುಲೇಟ್ ವತಿಯಿಂದ ನೀಡಲಾಗುವ "ಅಂತರರಾಷ್ಟ್ರೀಯ ಧೈರ್ಯವಂತ ಮಹಿಳೆ ಪ್ರಶಸ್ತಿ"ಗೆ ತಮಿಳುನಾಡು ಮೂಲದ ಜಾತಿ ವಿರೋಧಿ ಆಂದೋಲನ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಕೌಸಲ್ಯಾ ಶಂಕರ್ ಅವರು ನಾಮ ನಿರ್ದೇಶನಗೊಂಡಿದ್ದಾರೆ.

ಮಾರ್ಚ್ 11ರಂದು "ಧೈರ್ಯಶಾಲಿ ಮಹಿಳೆಯರು ಉತ್ತಮ ಜಗತ್ತಿನ ರೂವಾರಿಗಳು" ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಚೆನ್ನೈನಲ್ಲಿನ ಯುಎಸ್ ಕಾನ್ಸುಲ್ ಜನರಲ್ ಜುಡಿತ್ ರಾವಿನ್ ಅವರು ಕೌಸಲ್ಯಾ ಶಂಕರ್ ಅವರನ್ನು ಸನ್ಮಾನಿಸಿದರು.

ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..

ತಮಿಳುನಾಡಿನ ಕೌಸಲ್ಯಾ ಅವರು ಯು.ಎಸ್. ಮಿಷನ್ ಇಂಡಿಯಾ 2021ರ ಯು.ಎಸ್. ಸೆಕ್ರೆಟರಿ ಆಫ್ ಸ್ಟೇಟ್ ಇಂಟರ್ ನ್ಯಾಷನಲ್ ವುಮನ್ ಆಫ್ ಕರೇಜ್ (ಐಡಬ್ಲ್ಯುಒಸಿ) -"ಅಂತರರಾಷ್ಟ್ರೀಯ ಧೈರ್ಯವಂತ ಮಹಿಳೆ" ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಮತ್ತೊಬ್ಬರ ಜೀವನದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಅಸಾಧಾರಣ ಧೈರ್ಯ, ಛಲ ಹಾಗೂ ನಾಯಕತ್ವ ಪ್ರದರ್ಶಿಸುವ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

 US Consulate General Chennai Honours Courageous Woman Award Nominee Kousalya Shankar

ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಹೋರಾಡಲು ಕೌಸಲ್ಯಾ ಅವರು ಮಾರ್ಚ್ 2017ರಲ್ಲಿ ತಮ್ಮ ಪತಿಯ ಗೌರವಾರ್ಥ ಶಂಕರ್ ಸಾಮಾಜಿಕ ನ್ಯಾಯ ಟ್ರಸ್ಟ್‌ ಪ್ರಾರಂಭಿಸಿದರು. ಜಾತಿ ಕಾರಣವಾಗಿ ಹಿಂಸಾಚಾರಕ್ಕೆ ಒಳಗಾದವರಿಗೆ ಮಾನಸಿಕ ಸ್ಥೈರ್ಯ, ಕಾನೂನು ಮತ್ತು ನೈತಿಕ ಬೆಂಬಲ ಒದಗಿಸುವ ಕಾರ್ಯವನ್ನು ಟ್ರಸ್ಟ್ ನಿರ್ವಹಿಸುತ್ತಿದ್ದು, ಸಾಮಾಜಿಕ ತಾರತಮ್ಯ ಮತ್ತು ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನ; ಸವಾಲುಗಳೇ ಮಹಿಳೆಯ ಸಾಧನೆಯ ಮೆಟ್ಟಿಲು: ಡಾ.ಹೇಮಾಅಂತಾರಾಷ್ಟ್ರೀಯ ಮಹಿಳಾ ದಿನ; ಸವಾಲುಗಳೇ ಮಹಿಳೆಯ ಸಾಧನೆಯ ಮೆಟ್ಟಿಲು: ಡಾ.ಹೇಮಾ

"ಮಹಿಳಾ ಮಾಸಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪ್ರತಿಜ್ಞೆ ತೆಗೆದುಕೊಳ್ಳುವ ಮಾಸವಾಗಬೇಕು. ಮನುಷ್ಯರನ್ನು ಅಮಾನವೀಯಗೊಳಿಸುವ ಜಾತಿ ಆಧಾರಿತ ತಾರತಮ್ಯಗಳ ವಿರುದ್ಧ ಹೋರಾಡಲು ನಾನು ನಿರ್ಧರಿಸಿದ ಕ್ಷಣ, ನನಗೆ ರೆಕ್ಕೆಗಳು ಮೂಡಿದ ಅನುಭವವಾಯಿತು. ಇದು ನನಗೆ ಇನ್ನೂ ಎತ್ತರಕ್ಕೆ ಹಾರಲು ಮತ್ತು ಆಕಾಶವನ್ನು ಸ್ಪರ್ಶಿಸಲು ವಿಶ್ವಾಸ, ಧೈರ್ಯ ನೀಡಿತು" ಎಂದು ಕೌಸಲ್ಯಾ ತಮ್ಮ ಅನುಭವ ತೆರೆದಿಟ್ಟಿದ್ದಾರೆ.

 US Consulate General Chennai Honours Courageous Woman Award Nominee Kousalya Shankar

ಪ್ರಶಸ್ತಿ ನಾಮ ನಿರ್ದೇಶನದ ಪ್ರಮಾಣಪತ್ರ ನೀಡುವ ಸಂದರ್ಭ ಮಾತನಾಡಿದ ಯು.ಎಸ್. ಕಾನ್ಸುಲ್ ಜನರಲ್ ಜುಡಿತ್ ರಾವಿನ್, "ಲಿಂಗ ಸಮಾನತೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ವಿದೇಶಾಂಗ ನೀತಿಯ ಮುಖ್ಯ ಆದ್ಯತೆಯಾಗಿ ಜಾಗತಿಕವಾಗಿ ಮಹಿಳೆಯರ ಸ್ಥಾನಮಾನವನ್ನು ಉತ್ತಮಗೊಳಿಸಲು ಅಮೆರಿಕ ಬದ್ಧವಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಸಂಪೂರ್ಣ ಭಾಗವಹಿಸುವಿಕೆ ಇಲ್ಲದೆ ಜಾಗತಿಕ ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆ ಸಾಧಿಸಲು ಸಾಧ್ಯವಿಲ್ಲ" ಎಂದರು.

ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರು ನಾಯಕತ್ವ ವಹಿಸಿಕೊಂಡು ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಲಸಿಕೆ ಸಂಶೋಧನೆಯಿಂದ ಹಿಡಿದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳವರೆಗೆ ಹಾಗೂ ಕೊರೊನಾ ಸೋಲಿಸಲು ಮುಂಚೂಣಿಯಲ್ಲಿ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶ್ಲಾಘಿಸಿದ್ದಾರೆ.

2007ರಲ್ಲಿ ಅಂತರರಾಷ್ಟ್ರೀಯ ಧೈರ್ಯವಂತ ಮಹಿಳಾ ಪ್ರಶಸ್ತಿ ಆರಂಭವಾಗಿದ್ದು, ಯು.ಎಸ್ ಕಾನ್ಸುಲೇಟ್ ಇದುವರೆಗೂ 75ಕ್ಕೂ ಹೆಚ್ಚು ದೇಶಗಳ 155ಕ್ಕೂ ಹೆಚ್ಚು ಮಹಿಳೆಯರನ್ನು ಗುರುತಿಸಿ ಪುರಸ್ಕರಿಸಿದೆ. ಯು.ಎಸ್. ಡಿಪ್ಲೋಮ್ಯಾಟಿಕ್ ಮಿಷನ್ ವತಿಯಿಂದ ಆಯಾ ಆತಿಥೇಯ ರಾಷ್ಟ್ರಗಳಿಂದ ಅಸಾಧಾರಣ ಧೈರ್ಯ ತೋರಿದ ಒಬ್ಬ ಮಹಿಳೆಯನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಅಂತಿಮ ಹಂತದಲ್ಲಿ ಹಿರಿಯ ಅಧಿಕಾರಿಗಳಿಂದ ಆಯ್ಕೆ ಮತ್ತು ಅನುಮೋದನೆ ನಡೆಯುತ್ತದೆ. ಈ ವರ್ಷದ IWOC ಪ್ರಶಸ್ತಿ ಪಾತ್ರರ ಬಗೆಗಿನ ಹೆಚ್ಚಿನ ಮಾಹಿತಿಗೆ: https://www.state.gov/2021-international-women-of-courage-award-recipients-announced/

English summary
US Consulate general Chennai honored Tamil Nadu based anti caste activist and human rights defender Kousalya Shankar and presented an IWOC Award Certificate of Nomination
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X