• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ದಕ್ಷಿಣ ಭಾರತಕ್ಕೆ ಬಂದಿರುವುದು ಸಂತಸ ತಂದಿದೆ'

By Prasad
|

ಚೆನ್ನೈ, ಸೆ. 18 : ಚೆನ್ನೈನ ಅಮೆರಿಕ ದೂತಾವಾಸದ ಕಾನ್ಸಲ್ ಜನರಲ್ ಆಗಿ ಫಿಲಿಪ್ ಮಿನ್ ಅವರು ಸೆಪ್ಟೆಂಬರ್ 18, ಗುರುವಾರದಂದು ಅಧಿಕಾರ ಸ್ವೀಕರಿಸಿದರು.

ಅಮೆರಿಕ ವಿದೇಶಾಂಗ ಸೇವೆಯಲ್ಲಿ 27 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಕಾನ್ಸಲ್ ಜನರಲ್ ಮಿನ್ ಅವರು ರಿಯೋ ಡಿ ಜನೈರೋ, ಬ್ರೆಜಿಲ್; ವಾರ್ಸಾ, ಪೋಲಂಡ್; ಸಿಯೋಲ್, ಕೊರಿಯಾ; ಟೋಕಿಯೋ, ಜಪಾನ್; ಬೋಗೋಟಾ, ಕೊಲಂಬಿಯಾ; ಮತ್ತು ಕರಾಚಿ, ಪಾಕಿಸ್ತಾನ ಸೇರಿದಂತೆ ದಕ್ಷಿಣ ಅಮೆರಿಕ, ಯೂರೋಪ್, ಪೂರ್ವ ಏಷ್ಯಾ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾನ್ಸಲ್ ಜನರಲ್ ಮಿನ್ ಅವರು ವಾಷಿಂಗ್ಟನ್ನಲ್ಲಿ ಕಾನ್ಸಲರ್ ವ್ಯವಹಾರಗಳು ಹಾಗೂ ಜಪಾನೀಸ್ ವ್ಯವಹಾರಗಳ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. [ಭಾರತದಲ್ಲಿ ಚೀನಾ ಅಧ್ಯಕ್ಷ]

"ಭಾರತ ಹಾಗೂ ಅಮೆರಿಕ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಹಾಗೂ ವ್ಯೂಹಾತ್ಮಕ ಸಹಭಾಗಿತ್ವವನ್ನು ವಿಸ್ತರಿಸುವ ಹೊಸ ಅವಕಾಶಗಳನ್ನು ಒಟ್ಟಗೂಡಿ ಅನ್ವೇಷಿಸುವ ಈ ಕಾಲಘಟ್ಟದಲ್ಲಿ, ದಕ್ಷಿಣ ಭಾರತಕ್ಕೆ ಬಂದಿರುವುದು ರೋಚಕವಾಗಿದೆ. ದಕ್ಷಿಣ ಭಾರತದ ಜನರ ಸಾಂಸ್ಕೃತಿಕ ವೈವಿಧ್ಯವನ್ನು ಅನ್ವೇಷಿಸಲು ಕಾತರನಾಗಿದ್ದೇನೆ " ಎಂದು ಅವರು ಹೇಳಿದರು. [ಕರ್ನಾಟಕ ಚೆನ್ನೈ ನಡುವೆ ಹೃದಯ ಸಾಗಣೆ]

ಕಾನ್ಸಲ್ ಜನರಲ್ ಮಿನ್ ಅವರು ಪೆನ್ಸಿಲ್ವೇನಿಯಾದ ಹಾವರ್ಪೋರ್ಡ್ ಕಾಲೇಜಿನಿಂದ ಕಲಾ ಇತಿಹಾಸದಲ್ಲಿ ಪದವಿಯನ್ನು ಪಡೆದರು. ಸಿಯಾಟಲ್ಲಿನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲೂ ಪೂರ್ವ ಏಷ್ಯಾ ಅಧ್ಯಯನ ಕುರಿತೂ ಪದವಿಯಲ್ಲಿ ಅಧ್ಯಯನ ಮಾಡಿದರು. ವಾಷಿಂಗ್ಟನ್ ಡಿ.ಸಿ.ಯಲ್ಲಿನ ನ್ಯಾಷನಲ್ ವಾರ್ ಕಾಲೇಜಿನಲ್ಲಿ ರಾಷ್ಟ್ರೀಯ ರಕ್ಷಣ ನೀತಿ ಕುರಿತು ವಿಜ್ಞಾನ ಸ್ನಾತಕೋತ್ತರ ಪದವಿ (ಎಂ.ಎಸ್.) ಪಡೆದರು. ಅಮೆರಿಕ ವಿದೇಶಾಂಗ ಇಲಾಖೆಯ ಪ್ರತಿಷ್ಠಿತ ಸುಪೀರಿಯಲ್ ಆನರ್ ಪ್ರಶಸ್ತಿಗೆ ಮೂರು ಬಾರಿ ಭಾಜನರಾಗಿದ್ದಾರೆ.

ವಾಷಿಂಗ್ಟನ್ ಡಿ.ಸಿ. ಪ್ರದೇಶದಲ್ಲಿ ಜನಿಸಿದ ಕಾನ್ಸಲ್ ಜನರಲ್ ಮಿನ್ ಅವರು ನ್ಯೂಜೆರ್ಸಿ ಹಾಗೂ ಉತ್ತರ ವರ್ಜೀನಿಯಾದ ನಡುವೆ ಹಂಚಿ ಹೋಗಿರುವ ಪ್ರದೇಶವನ್ನು ತಮ್ಮ ಸ್ವಂತ ಪ್ರದೇಶ ಎಂದು ಪರಿಗಣಿಸುತ್ತಾರೆ. ಕಾನ್ಸಲ್ ಜನರಲ್ ಮಿನ್ ಅವರ ಪತ್ನಿ ಯೂನ್ ಯಂಗ್ ಲೀ ಒಬ್ಬ ಶಾಸ್ತ್ರೀಯ ಪಿಯಾನೋವಾದಕಿ. [ಶಾಸ್ತ್ರೀಯವಾಗಿ ಹಾರ್ಮೋನಿಕಾ ನುಡಿಸುವ ಸಿಂಗ್]

English summary
Phillip A. Min took over as the new Consul General of the U.S. Consulate General Chennai on September 18. Over his 27-year career in the U.S. Foreign Service, Consul General Min has served in many countries. Born in Washington D.C. area and considers his home base in the U.S. to be split between New Jersey and Northern Virginia. He is married to Eun Young Lee, a classical pianist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X