• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೋರ್‌ವೆಲ್‌ಗೆ ಬಿದ್ದ 2 ವರ್ಷದ ಬಾಲಕ: ಹೊರತೆಗೆಯಲು ಹರಸಾಹಸ

|

ತಿರುಚಿರಾಪಳ್ಳಿ, ಅಕ್ಟೋಬರ್ 26: ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ನಡುಕಟ್ಟುಪಟ್ಟಿಯಲ್ಲಿ ಎರಡು ವರ್ಷದ ಬಾಲಕನೊಬ್ಬ 600 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಬಾಲಕ ಸುಮಾರು 30 ಅಡಿ ಆಳದಲ್ಲಿ ಸಿಲುಕಿ ಕೊಂಡಿದ್ದಾನೆ. ಸತತ 15 ಗಂಟೆಗೂ ಹೆಚ್ಚು ಸಮಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಆತನನ್ನು ಹೊರತೆಗೆಯುವ ಪ್ರಯತ್ನ ನಡೆದಿದೆ. ಅದೃಷ್ಟವಶಾತ್ ಬಾಲಕ ಬಾವಿಯೊಳಗೆ ಮುದುಡಿಕೊಂಡು ಕುಳಿತಿರುವುದು ಕಾಣಿಸುತ್ತಿದೆ.

ಶುಕ್ರವಾರ ಸಂಜೆ ಮನೆಯಿಂದ ಹೊರಬಂದಿದ್ದ ಎರಡು ವರ್ಷದ ಬಾಲಕ ಸುಜಿತ್ ವಿಲ್ಸನ್ ಬಾವಿಯೊಳಗೆ ಬಿದ್ದಿದ್ದಾನೆ. ಆತನ ಪೋಷಕರಾದ ಬೃಟ್ಟೋ ಆರೋಗಿಯರಾಜ್ ಮತ್ತು ಕಲೈರಾಣಿ ಮಗ ಕಾಣಿಸದೆ ಹೋದಾಗ ಹುಡುಕಾಟ ಆರಂಭಿಸಿದ್ದರು. ಬಳಿಕ ಆತ ಬೋರ್ ವೆಲ್ ಒಳಗೆ ಸಿಲುಕಿಕೊಂಡಿರುವುದು ಪತ್ತೆಯಾಯಿತು. ಮನೆಯಿಂದ ಹೊರಕ್ಕೆ ಆಡುತ್ತಿದ್ದ ಬಾಲಕ ಸುಜಿತ್, ಸಂಜೆ ಐದು ಗಂಟೆ ಸುಮಾರಿಗೆ ಬಾವಿಯೊಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಮಳೆಯಿಂದ ಸುತ್ತಲೂ ಕೆಸರು ತುಂಬಿಕೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡಿದೆ.

ಬೋರ್‌ವೆಲ್‌ಗೆ ಬಿದ್ದಿದ್ದ ಪುಟಾಣಿಯನ್ನು ರಕ್ಷಿಸಿದರೂ ಬದುಕುಳಿಯಲಿಲ್ಲ

ಬಾಲಕನ ರಕ್ಷಣೆಗೆ ಲಭ್ಯವಿರುವ ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುವಂತೆ ತಮಿಳುನಾಡು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಸಾವಿರಾರು ಜನರು ಸೇರಿದ್ದಾರೆ. ರಾತ್ರಿಯಿಡೀ ಸತತ ಕಾರ್ಯಾರಣೆ ನಡೆಸಿದ ಬಳಿಕ ಶನಿವಾರ ಬೆಳಿಗ್ಗೆ ಕೂಡ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಜೋಳದ ಹೊಲದಲ್ಲಿ ಬಾವಿ

ಜೋಳದ ಹೊಲದಲ್ಲಿ ಬಾವಿ

ಸುಜಿತ್ ನಾಲ್ವರು ಬಾಲಕರ ಜತೆ ತಮ್ಮ ಮನೆ ಮುಂದೆ ಆಡುತ್ತಿದ್ದ. ಅಲ್ಲಿಂದ ಮನೆಗೆ ಹೋಗಿದ್ದವನು, ಮತ್ತೆ ಬರುವಾಗ ಜೀಳದ ಹೊಲದ ನಡುವೆ ಬಂದಿದ್ದ. ಅಲ್ಲಿ ತೆರೆದ ಕೊಳವೆ ಇತ್ತು. ಅದರೊಳಗೆ ಗೊತ್ತಾಗದೆ ಬಿದ್ದಿದ್ದಾನೆ ಎಂದು ಬಾಲಕನ ಚಿಕ್ಕಮ್ಮ ಹೇಳಿದ್ದಾರೆ.

ಬೋರ್‌ವೆಲ್ ಒಳಭಾಗದಿಂದ 35 ಅಡಿಗಳವರೆಗೆ ಮುಚ್ಚಲಾಗಿದೆ. ಅದು ಜೋಳದ ಹೊಲದ ನಡುವೆ ಇದ್ದು, ಮುಚ್ಚಿಹಾಕಲಾಗಿತ್ತು. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಅದರ ಬಾಯಿ ಮತ್ತೆ ತೆರೆದುಕೊಂಡಿರಬಹುದು ಎಂದು ಹೇಳಲಾಗಿದೆ.

ಅಡ್ಡಿಯಾಗಿರುವ ಬಂಡೆ

ಅಡ್ಡಿಯಾಗಿರುವ ಬಂಡೆ

ಘಟನೆ ತಿಳಿದ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಪಡೆ ತಿರುಚಿಯಿಂದ ಕೂಡಲೇ ಸ್ಥಳಕ್ಕೆ ಧಾವಿಸಿತು. ಯಂತ್ರಗಳ ಸಹಾಯದಿಂದ ಬೋರ್‌ವೆಲ್‌ಗೆ ಸಮಾನಾಂತರವಾಗಿ ಸುರಂಗ ಕೊರೆಯಲು ಪ್ರಾರಂಭಿಸಿದರು. ಆದರೆ ಹತ್ತು ಅಡಿ ಆಳದಲ್ಲಿಯೇ ಬೃಹತ್ ಬಂಡೆಯೊಂದು ಅಡ್ಡ ಬಂದಿರುವುದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ.

150 ಅಡಿ ಬೋರ್ವೆಲ್, 2 ವರ್ಷದ ಪುಟಾಣಿ, 109 ಗಂಟೆ ಯಶಸ್ವಿ ಕಾರ್ಯಾಚರಣೆ

ಹಗ್ಗ ಕಟ್ಟುವ ಪ್ರಯತ್ನ ವಿಫಲ

ಹಗ್ಗ ಕಟ್ಟುವ ಪ್ರಯತ್ನ ವಿಫಲ

ಬಾಲಕ ಕೊಳವೆಯೊಳಗೆ ಮುದುಡಿಕುಳಿತಿದ್ದು, ಆತನ ಎರಡೂ ಕೈಗಳು ಮೇಲ್ಭಾಗಕ್ಕೆ ಕಾಣಿಸುತ್ತಿವೆ. ಮೇಲಿನಿಂದ ಕೂಗಿದಾಗ ಆತ ತನ್ನ ಕೈಗಳನ್ನು ಆಡಿಸುತ್ತಾನೆ. ಚಿಕ್ಕಮಗುವಾಗಿರುವುದರಿಂದ ಹಗ್ಗ ಇಳಿಬಿಟ್ಟು ಹಿಡಿದುಕೊಳ್ಳುವಂತೆ ಹೇಳಿ ಆತನನ್ನು ಮೇಲಕ್ಕೆ ಎಳೆದುಕೊಳ್ಳುವುದು ಕಷ್ಟ. ಕೈಜಾರಿದರೆ ಮಗು ಇನ್ನಷ್ಟು ಆಳಕ್ಕೆ ಇಳಿಯುವ ಅಪಾಯವಿದೆ. ಹಾಗಾಗಿ ಹಗ್ಗದ ಗಂಟಿನೊಳಗೆ ಮಗುವಿನ ಕೈಗಳನ್ನು ತೂರಿಸುವಂತೆ ಮಾಡಿ ಹೊರಕ್ಕೆ ತೆಗೆಯುವ ಪ್ರಯತ್ನ ಕೂಡ ವಿಫಲವಾಗಿದೆ.

ಬೋರ್ವೆಲ್ ನಲ್ಲಿ ಬಿದ್ದಿದ್ದ 6 ವರ್ಷದ ಮಗು ಪವಾಡಸದೃಶ ಪಾರು

ಎಚ್ಚರವಾಗಿರಿಸುವ ಪ್ರಯತ್ನ

ಎಚ್ಚರವಾಗಿರಿಸುವ ಪ್ರಯತ್ನ

ಮತ್ತೊಂದು ಪ್ರಯತ್ನದಲ್ಲಿ ರಕ್ಷಣಾ ತಂಡವು ಸರಪಳಿ ಮತ್ತು ಹುಕ್ ಇರುವ ಸಣ್ಣ ಲೋಹದ ಪೈಪ್‌ಅನ್ನು ಕೆಳಕ್ಕಿಳಿಸುತ್ತಿದೆ. ಬಾಲಕ ಇದನ್ನು ಹಿಡಿದುಕೊಂಡರೆ ಸುಲಭವಾಗಿ ಮೇಲೆತ್ತಬಹುದು. ಆತನ ತಂದೆ ಮಗನ ಹೆಸರು ಕರೆಯುವ ಮೂಲಕ ಆತ ಎಚ್ಚರವಾಗಿಯೇ ಇರುವಂತೆ ಮಾಡುತ್ತಿದ್ದಾರೆ. ಉಸಿರಾಟ ಸರಾಗವಾಗಿ ನಡೆಯುವಂತೆ ಮಾಡಲು ಕೊಳವೆಯೊಳಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ.

ಮನಕಲಕುವ ದೃಶ್ಯ

ಮನಕಲಕುವ ದೃಶ್ಯ

ಈ ಬೋರ್‌ವೆಲ್ ಕೊರೆದು ಸುಮಾರು ಐದು ವರ್ಷಗಳಾಗಿದ್ದು, ಅದು ನಿರುಪಯುಕ್ತವಾಗಿದ್ದರೂ ಮುಚ್ಚುವ ಗೋಜಿಗೆ ಹೋಗಿರಲಿಲ್ಲ. ಕಲ್ಲುಕುಟಿಕ ವೃತ್ತಿ ಮಾಡುತ್ತಿರುವ ಆತನ ತಂದೆ ಮತ್ತು ತಾಯಿ ಮಗನ ಉಳಿಸಿಕೊಡಿ ಎಂದು ಕಣ್ಣೀರಿಡುತ್ತಾ ಅಧಿಕಾರಿಗಳನ್ನು ಅಂಗಲಾಚುತ್ತಿರುವ ದೃಶ್ಯ ಮನಕಲಕುವಂತಿದೆ.

English summary
Two year old boy Sujit Wilson falls into an abondoned borewell on Friday evening in Triuchy, Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X