India
 • search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತರಗತಿಯಲ್ಲಿ ಒಬ್ಬ ಶಿಕ್ಷಕ ಇಬ್ಬರು ಶಿಕ್ಷಕಿಯರೊಂದಿಗೆ ಲವ್ವಿಡವ್ವಿ- ಅರೆಬೆತ್ತಲೆ ಫೋಟೋ ವೈರಲ್

|
Google Oneindia Kannada News

ತಿರುಚ್ಚಿ ಜುಲೈ 2: ಕೊರೊನಾ ಹಾವಳಿಯಿಂದಾಗಿ ಮುಚ್ಚಲಾಗಿದ್ದ ಶಾಲೆಗಳು ಈಗಿನ್ನು ಚೇತರಿಸಿಕೊಳ್ಳುತ್ತಿವೆ. ಅದಾಗಲೇ ಸರ್ಕಾರಿ ಶಾಲೆಯಲ್ಲಿ ಮನುಕುಲ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾದಾನ ಮಾಡಬೇಕಿದ್ದ ಶಿಕ್ಷಕರು ಪ್ರೇಮ ಪ್ರಸಂಗದಲ್ಲಿ ಮುಳುಗಿದ ದೃಶ್ಯ ವೈರಲ್ ಆಗಿದೆ.

ತರಗತಿಯಲ್ಲಿ ಶಿಕ್ಷಕ ಶಿಕ್ಷಕಿಯ ಪ್ರೇಮ ಪ್ರಸಂಗದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಉತ್ತರ ಚಿತ್ತಂಪುರ್ ಎಂಬ ಪ್ರದೇಶದ ತಿರುಚ್ಚಿ ಜಿಲ್ಲೆಯ ಮನ್ನಚನಲ್ಲೂರ್‌ನಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಸುತ್ತಮುತ್ತಲಿನ ಗ್ರಾಮಗಳ ಸುಮಾರು 500 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಫೋಟೋಗಳು ಸದ್ಯ ಪೋಷಕರ ಆಕ್ರೋಶಕ್ಕೆ ಗುರಿಯಾಗಿದೆ.

ಇಲ್ಲಿ ಕಾರ್ಯನಿರ್ವಹಿಸುತ್ತಿರುವ 40 ವರ್ಷ ಶಿಕ್ಷಕ ರಮೇಶ್ ಪುನ್ನಿಯಮೂರ್ತಿ 4 ದಿನಗಳಿಂದ 30 ವರ್ಷದ ಇಬ್ಬರೂ ಶಿಕ್ಷಕಿಯೊಂದಿಗೆ ಅನ್ಯೋನ್ಯವಾಗಿರುವುದು ಕಂಡುಬಂದಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಈ ಘಟನೆ ತರಗತಿಯಲ್ಲೇ ನಡೆದಿದ್ದು ಆ ತರಗತಿಗಳಲ್ಲಿ ಮಕ್ಕಳೇ ಇರಲಿಲ್ಲ. ವಿದ್ಯಾರ್ಥಿಗಳು ಶಾಲೆ ಬಿಟ್ಟಾಗ, ಅಥವಾ ವಿರಾಮದ ವೇಳೆಯಲ್ಲಿ ಈ ಘಟನೆ ನಡೆದಿರಬಹುದು ಎನ್ನಲಾಗುತ್ತಿದೆ.

ಹೆಗಲ ಮೇಲೆ ಕೈ ಹಾಕಿ ಮಾತುಕತೆ

ಹೆಗಲ ಮೇಲೆ ಕೈ ಹಾಕಿ ಮಾತುಕತೆ

ಮೊದಲ ಫೋಟೋದಲ್ಲಿ ಶಿಕ್ಷಕರೊಬ್ಬರು ಕುರ್ಚಿಯಲ್ಲಿ ಕುಳಿತಿದ್ದಾರೆ. ಆಗ ಶಿಕ್ಷಕಿಯೊಬ್ಬರು ಮೇಜಿನ ಮೇಲೆ ಒರಗಿಕೊಂಡು ಮಾತನಾಡುತ್ತಿದ್ದಾರೆ. ಶಿಕ್ಷಕ ಶಿಕ್ಷಕಿ ಭುಜದ ಮೇಲೆ ಕೈಯಿಟ್ಟು ಲವಲವಿಕೆಯಿಂದ ಹರಟೆ ಹೊಡೆಯುತ್ತಿರುವುದು ಕಾಣಬಹುದು. ಆದರೆ ಶಿಕ್ಷಕರ ಹಸ್ತಲಾಘವವನ್ನು ಶಿಕ್ಷಕಿ ವಿರೋಧಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ. ಬದಲಿಗೆ ಅವರೊಂದಿಗೆ ನಗುತ್ತಾ ಲವಲವಿಕೆಯಿಂದ ಮಾತನಾಡುತ್ತಾರೆ. ಶಿಕ್ಷಕರು ಒಂದು ಕೈಯಲ್ಲಿ ಸೆಲ್ ಫೋನ್ ಅನ್ನು ಹಿಡಿದಿದ್ದಾರೆ ಮತ್ತು ಇನ್ನೊಂದು ಕೈ ಶಿಕ್ಷಕರ ಭುಜದ ಮೇಲೆ ಇರಿಸಿರುವುದು ಕಾಣಬಹುದು.

ಶಿಕ್ಷಕಿಯೊಂದಿಗೆ ಅರೆಬೆತ್ತಲೆಯಲ್ಲಿ ಕಣಿಸಿಕೊಂಡ ಶಿಕ್ಷಕ

ಶಿಕ್ಷಕಿಯೊಂದಿಗೆ ಅರೆಬೆತ್ತಲೆಯಲ್ಲಿ ಕಣಿಸಿಕೊಂಡ ಶಿಕ್ಷಕ

ಎರಡನೇ ಫೋಟೋದಲ್ಲಿ ತರಗತಿಯ ಬೆಂಚುಗಳ ಮಧ್ಯದಲ್ಲಿ ಮತ್ತೊಬ್ಬ ಶಿಕ್ಷಕಿ ನಿಂತಿದ್ದಾರೆ. ಆದರೆ ಶಿಕ್ಷಕನಿಗೆ ಮೈ ಮೇಲೆ ಅಂಗಿ ಇಲ್ಲ. ಅಂಗಿ ಕಳಚಿ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಅವರ ಪ್ಯಾಂಟ್ ಹೆಗಲ ಮೇಲಿದೆ. ಅರೆಬೆತ್ತಲೆ ಈ ಫೋಟೋ ತರಗತಿಯಲ್ಲಿ ಕಾಣಿಸಿಕೊಂಡಿದೆ. ಶಿಕ್ಷಕಿ ಅರೆಬೆತ್ತಲೆ ಶಿಕ್ಷಕನ ಹತ್ತಿರ ನಿಂತಿರುವುದು ಫೋಟೋದಲ್ಲಿ ಕಾಣಬಹುದು. ಆಶ್ಚರ್ಯಕರ ಸಂಗತಿಯೆಂದರೆ 2 ಶಿಕ್ಷಕಿಯರು ಬೇರೆ ಬೇರೆ ಆದರೆ ಶಿಕ್ಷಕ ಮಾತ್ರ ಒಂದೇ. ಈ ಮೂವರು ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

ಅಂಗಿ ಕಳಚಿ ಒಣಗಲು ಇಟ್ಟಿದ್ದೆ ಎಂದು ಶಿಕ್ಷಕ ಸಮಜಾಯಿಸಿ

ಅಂಗಿ ಕಳಚಿ ಒಣಗಲು ಇಟ್ಟಿದ್ದೆ ಎಂದು ಶಿಕ್ಷಕ ಸಮಜಾಯಿಸಿ

ಮೂವರೂ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು ಇಂತಹ ತಲೆತಗ್ಗಿಸುವಂತ ಘಟನೆ ನಡೆದಿದೆ. ಈ ಫೋಟೋಗಳನ್ನು ಯಾರು ತೆಗೆದರೋ ಗೊತ್ತಿಲ್ಲ. ಅಂತರ್ಜಾಲದಲ್ಲಿ ಹಾಕಿದ್ದರಿಂದ ವಿದ್ಯಾರ್ಥಿಗಳು, ಪೋಷಕರು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕರು ಸಿಟ್ಟಿಗೆದ್ದಿದ್ದಾರೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ದೂರು ನೀಡಲಾಗಿದೆ.

ಇದೇ ವೇಳೆ 2 ಶಿಕ್ಷಕರು ಶಾಲೆಯ ಪರವಾಗಿ ವಠಾಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಶರ್ಟ್ ಪ್ಯಾಂಟ್ ಕಳಚಿ ಅರೆಬೆತ್ತಲೆಯಾಗಿ ನಿಂತಿದ್ದ ಶಿಕ್ಷಕ ಪೊಲೀಸರಿಗೆ ದೂರು ನೀಡಿದ್ದಾರೆ. ಅಂಗಿ ಕಳಚಿ ಒಣಗಲು ಇಟ್ಟಿದ್ದು, ಅದನ್ನು ಶಿಕ್ಷಕಿಗೆ ಲಿಂಕ್ ಮಾಡಿ ಫೋಟೋವನ್ನು ಹರಿಬಿಟ್ಟಿರುವುದಾಗಿ ಹರಿಹಾಯ್ದಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇಬ್ಬರು ಶಿಕ್ಷಕರು ವರ್ಗಾವಣೆ

ಇಬ್ಬರು ಶಿಕ್ಷಕರು ವರ್ಗಾವಣೆ

ಅಷ್ಟರಲ್ಲಿ ಮುಸಿರಿ ನ್ಯಾಯಾಲಯದ ನ್ಯಾಯಾಧೀಶರು ಆಕಸ್ಮಿಕವಾಗಿ ಅಲ್ಲಿಗೆ ಬಂದು ತನಿಖೆಗೆ ಮುಂದಾದರು. ದೂರನ್ನು ಸ್ವೀಕರಿಸಿ ತಿರುಚ್ಚಿ ಉಪನಗರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರಿಗೆ ಕಳುಹಿಸಿದರು. ಈ ಬಗ್ಗೆ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದರು. ಘಟನೆಯ ಕುರಿತು ಸೈಬರ್ ಕ್ರೈಂ ಪೊಲೀಸರನ್ನು ವಿಚಾರಿಸಿದಾಗ, ದೂರಿಗೆ ಒಳಗಾದ ಇಬ್ಬರು ಶಿಕ್ಷಕರು ಚಿತ್ತಂಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದಾರೆ. ಆದರೆ 2019 ರಲ್ಲಿ ಅವರು ಕೆಲಸ ಬದಲಾಯಿಸಿದ್ದರು ಮತ್ತು ಬೇರೆ ಶಾಲೆಗೆ ಹೋದರು ಎಂದು ತಿಳಿದು ಬಂದಿದೆ.

ಪ್ರತ್ಯೇಕ ಲೈಂಗಿಕ ಕಿರುಕುಳ ಘಟನೆ

ಪ್ರತ್ಯೇಕ ಲೈಂಗಿಕ ಕಿರುಕುಳ ಘಟನೆ

ಹಾಗಾದರೆ ಇವು ಅವರು ಕರ್ತವ್ಯದಲ್ಲಿದ್ದಾಗ ತೆಗೆದ ಫೋಟೋಗಳು? ಅಥವಾ ಈಗ ತೆಗೆದುಕೊಳ್ಳಲಾಗಿದೆಯೇ? ಈಗ ತೆಗೆದಿದ್ದರೇ ಅವರು ಮತ್ತೆ ಆ ಶಾಲೆಗೆ ಯಾಕೆ ಹೋಗಿದ್ದಾರೆ ಎಂದು ನಾನಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಲ್ಲದೇ ಈ ಫೋಟೋಗಳ ಅಸಲಿತನದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ.. ಈ ಫೋಟೋಗಳು ನಿಜವೇ? ಇದು ಸುಳ್ಳೇ? ನಮಗೆ ಖಚಿತವಾಗಿ ತಿಳಿದಿಲ್ಲವಾದರೂ, ಶಾಲಾ ಶಿಕ್ಷಕರ ಮೇಲೆ ಲೈಂಗಿಕ ದೌರ್ಜನ್ಯದ ವರದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಮತ್ತು ಇದು ಆತಂಕಕಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಹ ಇದೇ ಪ್ರಕರಣದಲ್ಲಿ ಒಬ್ಬ ಶಿಕ್ಷಕನನ್ನು ಬಂಧಿಸಲಾಗಿದೆ. ಈತ ಕರೂರು ಜಿಲ್ಲೆಯ ಸೇಂಗಾಲ ಸಮೀಪದ ಪಪ್ಪುರೆಟ್ಟಿಪಟ್ಟಿ ಗ್ರಾಮದ ಖಾಸಗಿ ಶಾಲೆಯೊಂದರ ಶಿಕ್ಷಕ. ಆ ಶಾಲೆಯಲ್ಲಿ ಓದುತ್ತಿರುವ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ ಚಿತ್ರಹಿಂಸೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಈತ ತಮಿಳಿಗ. ಕೊನೆಗೆ ಲಾಲಾಪೇಟ್ ಪೋಲೀಸರು ನಿನ್ನೆ ಆತನನ್ನು ಬಂಧಿಸಿದ್ದಾರೆ.

   HD Devegowdaರ ಸಾವು ಬಯಸಿ ನಾಲಗೆ ಹರಿಬಿಟ್ಟ KN Rajanna | Oneindia Kannada
   English summary
   Photos of teacher's love affair in Tiruchi district classroom have gone viral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X