ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಟಿವಿ ದಿನಕರನ್ ಎಎಂಎಂಕೆಗೆ 'ಗಿಫ್ಟ್ ಪ್ಯಾಕ್' ಚುನಾವಣೆ ಚಿಹ್ನೆ

|
Google Oneindia Kannada News

ಚೆನ್ನೈ, ಮಾರ್ಚ್ 29: 'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ'(ಎಎಂಎಂಕೆ) ಪಕ್ಷಕ್ಕೆ ಪ್ರೆಶರ್‌ ಕುಕ್ಕರ್‌ ಚಿಹ್ನೆಯನ್ನು ನೀಡಲು ಸುಪ್ರೀಂ ಕೋರ್ಟ್‌ ಗುರುವಾರದಂದು ನಿರಾಕರಿಸಿದ ಬಳಿಕ ಯಾವುದೇ ಚಿಹ್ನೆ ನೀಡಿದರೂ ಅಡ್ಡಿಯಿಲ್ಲ ಎಂದಿದ್ದ ಟಿಟಿವಿ ದಿನಕರನ್ ಪಕ್ಷಕ್ಕೆ ಇಂದು 'ಗಿಫ್ಟ್ ಪ್ಯಾಕ್' ಚಿಹ್ನೆ ಸಿಕ್ಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಮಿಳುನಾಡಿನಲ್ಲಿ ಚುನಾವಣೆ ಸಂದರ್ಭದಲ್ಲಿ ಮತದಾರರ ಓಲೈಕೆ 'ಗಿಫ್ಟ್' ನೀಡುವುದು ಮಾಮೂಲಿ. ಚುನಾವಣಾ ಅಕ್ರಮ ನಗದು ಸಂಗ್ರಹದಲ್ಲೂ ತಮಿಳುನಾಡು ಎರಡನೇ ಸ್ಥಾನದಲ್ಲಿದೆ

ಲೋಕ ಚುನಾವಣಾ ಅಕ್ರಮ : ದೇಶದೆಲ್ಲೆಡೆ 613 ಕೋಟಿ ರು ವಶ ಲೋಕ ಚುನಾವಣಾ ಅಕ್ರಮ : ದೇಶದೆಲ್ಲೆಡೆ 613 ಕೋಟಿ ರು ವಶ

ದಿನಕರನ್‌ ಬಣದ ಎಐಎಡಿಎಂಕೆ(ಅಮ್ಮ) ಪಕ್ಷಕ್ಕೆ ಪ್ರೆಷರ್‌ ಕುಕ್ಕರ್‌ನ್ನು ಚಿಹ್ನೆಯಾಗಿ ನೀಡುವಂತೆ ಚುನಾವಣೆ ಆಯೋಗಕ್ಕೆ ಕಳೆದ ಮಾರ್ಚ್ ನಲ್ಲಿ ಕೋರ್ಟ್ ಆದೇಶಿಸಿತ್ತು. ತಿರುವರೂರ್ ಉಪ ಚುನಾವಣೆಗೆ ತಾತ್ಕಾಲಿಕವಾಗಿ ಚಿಹ್ನೆ ನೀಡಲಾಗಿತ್ತು.

TTV Dinakarans AMMK gets gift pack as symbol

ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರ ನಿಧನದಿಂದ ತೆರವಾದ ರಾಧಾಕೃಷ್ಣ ನಗರ (ಆರ್.ಕೆ.ನಗರ) ವಿಧಾನಸಭಾ ಕ್ಷೇತ್ರಕ್ಕೆ ಡಿ.21ರಂದು ಮತದಾನ ನಡೆದಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ದಿನಕರನ್ ಸ್ಪರ್ಧಿಸಿ, ಜಯಗಳಿಸಿದ್ದರು.

ತಮಿಳುನಾಡಿನಲ್ಲಿ ರಜನಿಕಾಂತ್ ಆಟ ನಡೆಯಲ್ಲ : ದಿನಕರನ್ ತಮಿಳುನಾಡಿನಲ್ಲಿ ರಜನಿಕಾಂತ್ ಆಟ ನಡೆಯಲ್ಲ : ದಿನಕರನ್

ಪಳನಿಸ್ವಾಮಿ ನೇತೃತ್ವದ ಗುಂಪಿಗೆ ಎರಡು ಎಲೆಗಳ ಚಿಹ್ನೆಯನ್ನು ನೀಡಿ ನವೆಂಬರ್ 23, 2017 ರಂದು ಚುನಾವಣೆ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಿನಕರನ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆರ್​.ಕೆ.ನಗರ ಕ್ಷೇತ್ರದಲ್ಲಿ ಪ್ರೆಷರ್ ಕುಕ್ಕರ್ ಚಿಹ್ನೆಯೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ದಿನಕರನ್‌ ಅವರು ಪ್ರೆಷರ್‌ ಕುಕ್ಕರ್‌ ಅನ್ನೇ ಚಿಹ್ನೆಯಾಗಿ ನೀಡುವಂತೆ ಕೋರಿದ್ದರು.

ಇಪಿಎಸ್- ಒಪಿಎಸ್ ಬಣಕ್ಕೆ ಒಲಿದ ಎರಡು ಹಸಿರೆಲೆ ಚಿನ್ಹೆ ಇಪಿಎಸ್- ಒಪಿಎಸ್ ಬಣಕ್ಕೆ ಒಲಿದ ಎರಡು ಹಸಿರೆಲೆ ಚಿನ್ಹೆ

ಆದರೆ, ಈ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ, ಎಎಂಎಂಕೆ ಪಕ್ಷಕ್ಕೆ ಪ್ರೆಷರ್ ಕುಕ್ಕರ್ ನೀಡಲು ನಿರಾಕರಿಸಿದ್ದರಿಂದ ಬೇರೆ ಲಭ್ಯ ಚಿಹ್ನೆಯಡಿಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ತಮಿಳುನಾಡು ಹಾಗು ಪುದುಚೇರಿಯಲ್ಲಿ ದಿನಕರ್ ನೇತೃತ್ವದ ಪಕ್ಷ ಚುನಾವಣೆ ಎದುರಿಸಲಿದೆ.

English summary
The Election Commission has allotted 'gift pack' as the common symbol for candidates of T.T.V. Dhinakaran's Amma Makkal Munnetra Kazhagam (AMMK). Earlier, the Supreme Court had refused to recognise AMMK's claim over the 'pressure cooker' symbol, with which Dinakaran won the R.K. Nagar Assembly by-election last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X