ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯ

By Sachhidananda Acharya
|
Google Oneindia Kannada News

Recommended Video

ತಮಿಳುನಾಡಿನ ಆರ್ ಕೆ ನಗರ ಫಲಿತಾಂಶ : ಟಿ ಟಿ ವಿ ದಿನಕರನ್ ಗೆ ಭರ್ಜರಿ ಜಯ | Oneindia Kannada

ಚೆನ್ನೈ, ಡಿಸೆಂಬರ್ 24: ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್.ಕೆ ನಗರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಇಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.

ಆರ್.ಕೆ ನಗರ ಉಪಚುನಾವಣೆ: ಮತಎಣಿಕೆ ಕೇಂದ್ರದಲ್ಲಿ ಮಾರಾಮಾರಿಆರ್.ಕೆ ನಗರ ಉಪಚುನಾವಣೆ: ಮತಎಣಿಕೆ ಕೇಂದ್ರದಲ್ಲಿ ಮಾರಾಮಾರಿ

ಮೊದಲ ಸುತ್ತಿನಿಂದ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಶಶಿಕಲಾ ನಟರಾಜನ್ ಬೆಂಬಲಿತ ಅಭ್ಯರ್ಥಿ ಟಿಟಿವಿ ದಿನಕರನ್ ಅಂತಿಮ ಸುತ್ತಿನ ಅಂತ್ಯಕ್ಕೆ 89,013 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ 40,707 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

TTV Dhinakaran wins RK Nagar bi-poll

ಎರಡನೇ ಸ್ಥಾನವನ್ನು ಎಐಎಡಿಎಂಕೆ ಪಡೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಇ. ಮಧುಸೂದನ್ ಕೇವಲ 48,306 ಮತಗಳನ್ನು ಪಡೆದಿದ್ದಾರೆ.

ಆರ್.ಕೆ.ನಗರ ಉಪ ಚುನಾವಣಾ ಫಲಿತಾಂಶ ಇಂದು ಪ್ರಕಟಆರ್.ಕೆ.ನಗರ ಉಪ ಚುನಾವಣಾ ಫಲಿತಾಂಶ ಇಂದು ಪ್ರಕಟ

ಡಿಎಂಕೆ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪಕ್ಷದ ಅಭ್ಯರ್ಥಿ ಮರುದು ಗಣೇಶನ್ 24,651 ಮತಗಳನ್ನಷ್ಟೇ ಪಡೆದಿದ್ದಾರೆ. ಇಲ್ಲಿ ಕೇವಲ 1,417 ಮತಗಳನ್ನು ಪಡೆಯಲು ಬಿಜೆಪಿ ಅಭ್ಯರ್ಥಿ ಶಕ್ತವಾಗಿದ್ದಾರೆ.

English summary
V.K Sasikala supported independent candidate TTV Dhinakaran has won RK Nagar bi-poll with a margin of more than 30 thousand votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X