ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ 1947ರಲ್ಲಿ ಹಾರಿಸಿದ ತ್ರಿವರ್ಣ ಧ್ವಜ ಕಾಣಿರಿ

By Mahesh
|
Google Oneindia Kannada News

ಚೆನ್ನೈ, ಆಗಸ್ಟ್ 14: ಆಗಸ್ಟ್ 15, 1947ರಂದು ಮೊದಲ ಸ್ವಾತಂತ್ರ ದಿನಾಚರಣೆಯಂದು ಚೆನ್ನೈನ ಫೋರ್ಟ್ ಸೈಂಟ್ ಜಾರ್ಜ್‌ನಲ್ಲಿ ಹಾರಿಸಲಾದ ರಾಷ್ಟ್ರಧ್ವಜವನ್ನು ಇಂದಿಗೂ ಕಾಣಬಹುದು. ಭಾರತೀಯ ಪುರಾತತ್ವ ಇಲಾಖೆ ಬಹುಕಾಲದಿಂದ ಈ ಅಮೂಲ್ಯ ಧ್ವಜವನ್ನು ಸಂರಕ್ಷಿಸಿಟ್ಟಿದೆ.

ಫೋರ್ಟ್ ಸೈಂಟ್ ಜಾರ್ಜ್ ಕಾಂಪ್ಲೆಕ್ಸ್ ಕಟ್ಟಡದ ವಸ್ತುಸಂಗ್ರಹಾಲಯದಲ್ಲಿರುವ ಈ ಧ್ವಜವನ್ನು 2013 ಜನವರಿ 26ರಂದು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯಿತು.

Tricolour hoisted in 1947 at Fort St George still flying high


ಮರ ಹಾಗೂ ಗ್ಲಾಸಿನ ಶೋಕೇಸ್‌ ನಲ್ಲಿರುವ ಈ ರಾಷ್ಟ್ರಧ್ವಜ ಈಗಲೂ ಸಾರ್ವಜನಿಕರ ವೀಕ್ಷಣಕ್ಕೆ ಲಭ್ಯವಿದೆ. ಎಲ್ಲಾ ಕಾಲ, ಋತು, ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಆರ್ದ್ರತೆ ನಿಯಂತ್ರಿಸಲು ಹಾಗೂ ತೇವಾಂಶ ಹೀರಿಕೊಳ್ಳಲು ಧ್ವಜದ ಸುತ್ತಲೂ ಆರು ಸಿಲಿಕಾ ತುಂಬಿದ ಬಟ್ಟಲುಗಳನ್ನು ಇರಿಸಲಾಗಿದೆ.

ಹವಾನಿಯಂತ್ರಕ ಬಳಸಿ 24 ಗಂಟೆಗಳ ಕಾಲವೂ ಸೂಕ್ತ ಉಷ್ಣಾಂಶ ಕಾಯ್ದುಕೊಳ್ಳಲಾಗಿದೆ. ಶೋಕೇಸ್‌ನ ಸುತ್ತಲೂ ಸೆನ್ಸಾರ್‌ಯುಕ್ತ ಲೆಡ್ ಲೈಟ್‌ಗಳನ್ನು ಬಳಸಲಾಗಿದೆ. ಸಂದರ್ಶಕರು ಆಗಮಿಸುವಾಗ ಮಾತ್ರ ಈ ಲೈಟ್‌ಗಳು ಉರಿಯುತ್ತವೆ.

ಬ್ರಿಟಿಶರಿಂದ ಬಿಡುಗಡೆ ದೊರಕಿದ ಬಳಿಕ 1947 ಆಗಸ್ಟ್ 15ರಂದು 12 ಅಡಿ ಉದ್ದ ಹಾಗೂ 8 ಅಡಿ ಅಗಲದ ಸಿಲ್ಕ್‌ನಿಂದ ರೂಪಿಸಲಾದ ಧ್ವಜವನ್ನು ಬೆಳಗ್ಗೆ 05.05ಕ್ಕೆ ಫೋರ್ಟ್ ಸೈಂಟ್ ಜಾರ್ಜ್‌ನಲ್ಲಿ ಹಾರಿಸಲಾಗಿತ್ತು. (ಪಿಟಿಐ)

English summary
The only surviving vintage national flag in India, hoisted at Fort St George here on the first Independence day on August 15 1947, is being conserved by the Archaeological Survey of India through multi-pronged efforts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X