• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡವರಿಗಾಗಿ ಇಲ್ಲಿ 1 ರೂ.ಗೆ ತಿಂಡಿ, 5 ರೂ.ಗೆ ಊಟ!

|

ಚೆನ್ನೈ, ಮಾರ್ಚ್ 26: ಕೊರೊನಾ ಸಂಕಷ್ಟದ ಕಾಲದಲ್ಲಿ ಆಹಾರಕ್ಕಾಗಿ ಬಡವರು, ಕೂಲಿ ಕಾರ್ಮಿಕರು ಪರಿತಪಿಸುತ್ತಿದ್ದಾರೆ. ಅಂತಹ ಅತ್ಯಂತ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಸಿಗುತ್ತದೆ.

ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಬಡವರು ಮತ್ತು ಕೂಲಿ ಕಾರ್ಮಿಕರಿಗಾಗಿ ಒಂದು ರೂಪಾಯಿಗೆ ಊಟ ತಮಿಳುನಾಡಿನಲ್ಲಿ ಸಿಗುತ್ತದೆ.

ತಮಿಳುನಾಡಿನ ತಿರುಚಿಯಲ್ಲಿ ದಂಪತಿ ಒಂದು ರೂ.ಗೆ ತಿಂಡಿ ಹಾಗೂ ಐದು ರೂಪಾಯಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಿದ್ದಾರೆ. ಚಂದ್ರಶೇಖರ್-ಪುಷ್ಪರಾಣಿ ಎಂಬ ದಂಪತಿ ಬಡವರಿಗೆ ಊಟ ಬಡಿಸುವ ಕಾಯಕ ಮಾಡುತ್ತಿದ್ದಾರೆ.

ಚಂದ್ರಶೇಖರ್ ಕೂಡ ಲಾಕ್‌ಡೌನ್‌ನಲ್ಲಿ ಹಣವಿಲ್ಲದೇ ಪರದಾಡಿದ್ದರು. ಲಾಕ್‌ಡೌನ್ ತೆರೆದ ತಕ್ಷಣ ಬ್ಯಾಂಕ್‌ನಲ್ಲಿ 50 ಸಾವಿರ ಲೋನ್ ಪಡೆದು ಸಣ್ಣ ಹೋಟೆಲ್ ಒಂದನ್ನು ಆರಂಭಿಸಿದರು.

ಇಲ್ಲಿ ಬಡವರಿಗೆ, ವಲಸೆ ಕಾರ್ಮಿಕರಿಗೆ ಒಂದು ರೂಪಾಯಿಗೆ ಊಟ ಸಿಗುತ್ತದೆ. ಬಡವರೇ ಬಡವರಿಗೆ ಸಹಾಯ ಮಾಡುತ್ತಾರೆ ಎಂಬುದು ಮತ್ತೊಮ್ಮೆ ನಿಜವಾಗಿದೆ. ದಿನಕ್ಕೆ 400ಕ್ಕೂ ಹೆಚ್ಚು ಮಂದಿ ಇಲ್ಲಿ ಊಟ ಮಾಡಿ ಇವರಿಗೆ ಕೈ ಮುಗಿದು ತೆರಳುತ್ತಾರೆ. ಬೆಳಗಿನ ತಿಂಡಿಗೆ ಒಂದು ರೂ., ಊಟಕ್ಕೆ ಐದು ರೂ. ಪಡೆಯುತ್ತಾರೆ.

English summary
In Trichy, Tamil Nadu, the couple Provides Foods for poor people at Less Price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X