ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಹೋಗುವ ಮುನ್ನ ತಿಳಿಯಬೇಕಾದ ಮಾರ್ಗಸೂಚಿಗಳು

|
Google Oneindia Kannada News

ಚೆನ್ನೈ, ಮೇ 15 : ಕೋವಿಡ್ - 19 ಪರಿಸ್ಥಿತಿ ಹಿನ್ನಲೆಯಲ್ಲಿ ಭಾರತದ ವಿವಿಧ ರಾಜ್ಯಗಳಿಗೆ ಸಂಚಾರ ನಡೆಸಲು ಹಲವಾರು ಷರತ್ತುಗಳಿವೆ. ಬೇರೆ ರಾಜ್ಯಗಳಿಂದ ಆಗಮಿಸಿದವರಿಗೆ ಕಡ್ಡಾಯ ಕ್ವಾರಂಟೈನ್ ಮಾಡುವ ಮಾರ್ಗಸೂಚಿ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಅಂತರರಾಜ್ಯ ಸಂಚಾರಕ್ಕೆ ಪಾಸು ಸಹ ಕಡ್ಡಾಯವಾಗಿದೆ.

ತಮಿಳುನಾಡು ಸರ್ಕಾರ ಕೋವಿಡ್ - 19 ಪರೀಕ್ಷೆ ಮತ್ತು ಕ್ವಾರಂಟೈನ್ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡಿದೆ. ಬೆಂಗಳೂರು ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಿಂದ ತಮಿಳುನಾಡಿಗೆ ಹೋಗುವ ಮುನ್ನ ಜನರು ಈ ಮಾರ್ಗಸೂಚಿ ವಿವರಗಳನ್ನು ಕಡ್ಡಾಯವಾಗಿ ತಿಳಿದಿರಬೇಕು.

ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭ ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭ

ಪರಿಷ್ಕೃತ ಮಾರ್ಗಸೂಚಿ ಅನ್ವಯ ಯಾವುದೇ ಸಾರಿಗೆ ವ್ಯವಸ್ಥೆ ಮೂಲಕ ಜನರು ತಮಿಳುನಾಡಿಗೆ ಹೋದರೆ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು. ತಮಿಳುನಾಡಿಗೆ ಬರುವ ಜನರಿಗಾಗಿಯೇ ರಾಜ್ಯ ಸರ್ಕಾರ ವೆಬ್ ಸೈಟ್‌ನಲ್ಲಿ ನೋಂದಣಿ ಆರಂಭಿಸಿದೆ.

ದೇಶದಲ್ಲೀಗ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರ ಅಲ್ಲ, ತಮಿಳುನಾಡುದೇಶದಲ್ಲೀಗ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರ ಅಲ್ಲ, ತಮಿಳುನಾಡು

ತುರ್ತು ಸಂದರ್ಭ, ಬೇರೆ ರಾಜ್ಯದಲ್ಲಿ ಸಿಲುಕಿರುವ ತಮಿಳುನಾಡಿನ ಜನರು ರಾಜ್ಯಕ್ಕೆ ವಾಪಸ್ ಆಗುತ್ತೇವೆ ಎಂದರೂ ಈ ಮಾರ್ಗಸೂಚಿ ಪಾಲನೆ ಮಾಡಲೇಬೇಕಿದೆ. ಕರ್ನಾಟಕದಿಂದ ತಮಿಳುನಾಡಿಗೆ ಹೋಗಲು ಸೇವಾ ಸಿಂಧು ಪೋರ್ಟಲ್ ಮೂಲಕ ಜನರು ಪಾಸು ಪಡೆಯುವುದು ಕಡ್ಡಾಯ.

ಕರ್ನಾಟಕ, ತಮಿಳುನಾಡು ಗಡಿ ಮುಚ್ಚಲು ಮುಂದಾದ ಕೇರಳ ಕರ್ನಾಟಕ, ತಮಿಳುನಾಡು ಗಡಿ ಮುಚ್ಚಲು ಮುಂದಾದ ಕೇರಳ

ಪಾಸು ಪಡೆಯುವುದು ಹೇಗೆ?

ಪಾಸು ಪಡೆಯುವುದು ಹೇಗೆ?

ತಮಿಳುನಾಡಿಗೆ ಭೇಟಿ ನೀಡುವ ಜನರು ಸರ್ಕಾರ ಆರಂಭ ಮಾಡಿರುವ ವೆಬ್ ಸೈಟ್ ಮೂಲಕ ಪಾಸು ಪಡೆಯಬೇಕು. ಆಧಾರ್ ವಿವರ, ಗುರುತಿನ ಚೀಟಿ, ವಾಹನದ ವಿವರಗಳನ್ನು ನಮೂದಿಸಬೇಕು. ಒಬ್ಬ ವ್ಯಕ್ತಿ ಒಮ್ಮೆ ಲಾಗಿನ್ ಆದರೆ ಡ್ರೈವರ್ ಸೇರಿ 30 ಜನರು ಮಾತ್ರ ರಾಜ್ಯಕ್ಕೆ ಬರಲು ಸರ್ಕಾರ ಪಾಸುಗಳನ್ನು ವಿತರಣೆ ಮಾಡುತ್ತದೆ.

ಅಂತರ ಜಿಲ್ಲಾ ಸಂಚಾರ

ಅಂತರ ಜಿಲ್ಲಾ ಸಂಚಾರ

ಬೇರೆ ರಾಜ್ಯದಿಂದ ಹೋದರೆ ಮಾತ್ರವಲ್ಲ ತಮಿಳುನಾಡಿನಲ್ಲಿಯೂ ಅಂತರ ಜಿಲ್ಲಾ ಸಂಚಾರ ನಡೆಸಬೇಕಾದರೆ ಆರೋಗ್ಯ ತಪಾಸಣೆ ಕಡ್ಡಾಯ. ದೇಹದ ಉಷ್ಣತೆ ಪರಿಶೀಲಿಸಲಾಗುತ್ತದೆ. ಜ್ವರ, ಕೆಮ್ಮು ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಬೇರೆ ಜಿಲ್ಲೆಗೆ ಸಂಚಾರ ನಡೆಸಿದರೂ ಕ್ವಾರಂಟೈನ್ ಕಡ್ಡಾಯವಾಗಿದೆ.

ಇದನ್ನು ಮೊದಲು ತಿಳಿಯಿರಿ

ಇದನ್ನು ಮೊದಲು ತಿಳಿಯಿರಿ

ದೇಶದ ಯಾವುದೇ ರಾಜ್ಯ ಅಥವ ಕೇಂದ್ರಾಡಳಿತ ಪ್ರದೇಶದಿಂದ ತಮಿಳುನಾಡಿಗೆ ಬಂದರೆ ವೈದ್ಯಕೀಯ ಪರೀಕ್ಷೆ ಕಡ್ಡಾಯ. ವರದಿ ಪಾಸಿಟೀವ್ ಬಂದರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ನೆಗೆಟೀವ್ ಬಂದರೆ 7 ದಿನದ ಕ್ವಾರಂಟೈನ್‌ಗೆ ಹಾಕಲಾಗುತ್ತದೆ. ಏಳು ದಿನದ ಬಳಿಕ ಪರೀಕ್ಷೆ ನಡೆಸಿ ಯಾವುದೇ ಲಕ್ಷಣ ಕಾಣಿಸಿಕೊಳ್ಳದಿದ್ದರೆ ಮನೆಗೆ ಕಳಿಸಲಾಗುತ್ತದೆ. ಇಲ್ಲವಾದಲ್ಲಿ ಇನ್ನೂ 7 ದಿನ ಕ್ವಾರಂಟೈನ್ ಮುಂದುವರೆಸಲಾಗುತ್ತದೆ.

ವಿದೇಶದಿಂದ ಬಂದವರಿಗೆ

ವಿದೇಶದಿಂದ ಬಂದವರಿಗೆ

ವಿದೇಶದಿಂದ ತಮಿಳುನಾಡಿಗೆ ಬಂದರೂ ಮೊದಲು ಪರೀಕ್ಷೆ ಮಾಡಲಾಗುತ್ತದೆ. ಕೊರೊನಾ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಒಂದು ವೇಳೆ ನೆಗೆಟೀವ್ ಬಂದರೆ 7 ದಿನದ ಕ್ವಾರಂಟೈನ್‌ಗೆ ಹಾಕಲಾಗುತ್ತದೆ. ಬಳಿಕ ಪತ್ತೆ ಪರೀಕ್ಷೆ ಇದೆ. ಆಗಲೂ ನೆಗೆಟೀವ್ ಬಂದರೆ ಮನೆಗೆ ಹೋಗಬಹುದು. ಆದರೆ, 14 ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು. ವಿದೇಶದಿಂದ ಬಂದವರಿಗೆ 21 ದಿನದ ಕ್ವಾರಂಟೈನ್‌ ನಿಯಮ ರೂಪಿಸಲಾಗಿದೆ.

ಕ್ವಾರಂಟೈನ್ ವಿನಾಯಿತಿ ಇದೆ

ಕ್ವಾರಂಟೈನ್ ವಿನಾಯಿತಿ ಇದೆ

ತಮಿಳುನಾಡು ಸರ್ಕಾರ ಕ್ವಾರಂಟೈನ್‌ನಿಂದ ಕೆಲವರಿಗೆ ವಿನಾಯಿತಿಯನ್ನು ನೀಡಿದೆ. ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ತುರ್ತು ಚಿಕಿತ್ಸೆ ಬೇಕಿದ್ದರೆ, ಗರ್ಭಿಣಿಯರು, ಅಂತ್ಯ ಸಂಸ್ಕಾರಕ್ಕೆ ಹೋಗುವವರು, 75 ವರ್ಷ ಮೇಲ್ಪಟ್ಟ ವೃದ್ಧರಿಗೆ ಕಡ್ಡಾಯ ಕ್ವಾರಂಟೈನ್‌ನಿಂದ ವಿನಾಯಿತಿ ಇದೆ.

English summary
Tamil Nadu government revised testing and quarantine guidelines. Here are the directions you know before travelling to state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X