• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡು: ಪೊಲ್ಲಾಚಿಯಿಂದ ಮಂಗಳಮುಖಿ ಕಲ್ಕಿ ಸ್ಪರ್ಧೆ

By Mahesh
|

ಚೆನ್ನೈ,ಮಾ.30: ತಮಿಳುನಾಡಿನ ಖ್ಯಾತ ಲೇಖಕಿ ಹಾಗೂ ಸಿನಿಮಾ ನಟಿ, ಮಂಗಳ ಮುಖಿ, ಕಲ್ಕಿ ಸುಬ್ರಮಣಿಯಂ ಅವರು ಈ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ತನ್ನ ಸಮುದಾಯದ ಬಾಂಧವರ ಹಕ್ಕುಗಳ ರಕ್ಷಣೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಹೊಸ ಆಯಾಮವನ್ನು ಕೊಡುವ ನಿಟ್ಟಿನಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಕಲ್ಕಿ ಏ.4ರಂದು ನಾಮಪತ್ರ ಸಲ್ಲಿಸಿ, ಅಂದಿನಿಂದಲೇ ಪ್ರಚಾರ ಆರಂಭಿಸಲಿದ್ದಾರೆ. ಈ ಕ್ಷೇತ್ರಕ್ಕೆ ಏ.27ರಂದು ಮತದಾನ ನಡೆಯಲಿದ್ದು ಈ ಮೊದಲು ವಿಲ್ಲುಪುರಂ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಳಾದರೂ ಕೂಡ ಅದು ಮೀಸಲು ಕ್ಷೇತ್ರವಾದ್ದರಿಂದ ಅಲ್ಲಿಂದ ಪೊಲ್ಲಾಚಿಗೆ ತನ್ನ ಕಾರ್ಯಕ್ಷೇತ್ರವನ್ನು ಬದಲಾಯಿಸಿಕೊಂಡಿದ್ದಾರೆ.

ಪೊಲ್ಲಾಚಿ ಕಲ್ಕಿಯ ಸ್ವಂತ ಜಿಲ್ಲೆಯಾಗಿದ್ದು ಈ ಪ್ರದೇಶದ ಬಹುತೇಕ ಭಾಗಗಳು ನನಗೆ ಗೊತ್ತು ಹಾಗೂ ಇಲ್ಲಿನ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಂಡಿದ್ದೇನೆ ಹಾಗಾಗಿ ಈ ಕ್ಷೇತ್ರವನ್ನೇ ಆಯ್ದುಕೊಂಡೆ ಎಂದು ಕಲ್ಕಿ ಸುಬ್ರಮಣಿಯಂ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕಲ್ಕಿ ಸುಬ್ರಮಣಿಯಂ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿ ಎರಡು ಸ್ನಾತಕೋತ್ತರ ಪದವೀಧರೆಯಾಗಿದ್ದು, ದೇಶದಲ್ಲಿ ಮಂಗಳಮುಖಿಯರ ಸಮಸ್ಯೆಗಳ ಕುರಿತಂತೆ ಹೋರಾಟ ನಡೆಸುತ್ತಾ ಬಂದಿದ್ದಾರೆ.

ಸಹೋದರಿ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿ ಆ ಮೂಲಕ ನೂರಾರು ಮಂಗಳಮುಖಿಯರಿಗೆ ಮಾರ್ಗದರ್ಶನ ಹಾಗೂ ಸಂಸ್ಥೆಯ ಇತಿಮಿತಿಯಲ್ಲಿ ಸಹಕಾರ ನೀಡುತ್ತಿರುವ ಸುಬ್ರಮಣಿಯಂ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ನಾನು ಮಂಗಳಮುಖಿಯರ ಪರ ಹೋರಾಟ ನಡೆಸುತ್ತಿದ್ದರೂ ಕೂಡ ಕೇವಲ ಅಷ್ಟಕ್ಕೆ ಸೀಮಿತ ವಾಗದೆ ಒಟ್ಟಾರೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಮಂಗಳಮುಖಿಯರೂ ಬರುವುದರಿಂದ ಅದನ್ನು ಪ್ರತ್ಯೇಕವಾಗಿ ನಡೆಸುವ ಅಗತ್ಯವಿಲ್ಲ. ಸುಬ್ರಮಣಿಯಂ ಹೋರಾಟದ ಫಲವಾಗಿ ಸರ್ಕಾರ ಮಂಗಳಮುಖಿಯರ ಸಮುದಾಯ ಸಂಕ್ಷೇಮ ಸಮಿತಿಯೊಂದನ್ನು ಸ್ಥಾಪಿಸಿದ್ದು ಏ.15ನ್ನು ಮಂಗಳಮುಖಿಯರ ದಿನ ಎಂದು ಆಚರಿಸಲು ಆದೇಶಿಸಿದೆ.

ನನ್ನ ರೋಲ್ ಮಾಡೆಲ್ ‌ಗಳೆಂದರೆ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೇಡಂ. ಇಂದಿರಾಗಾಂಧಿ, ಜಯಲಲಿತಾ ಅಂಥವರನ್ನು ನೋಡಿ ಆಡಳಿತ ನಡೆಸುವ ವಿಧಾನ ಅರಿತಿದ್ದೇನೆ ಜೊತೆಗೆ ಜನತೆಯ ಕಲ್ಯಾಣಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ನನ್ನ ಆಸೆ.

ವಿಶೇಷವಾಗಿ ಮಂಗಳಮುಖಿಯರಿಗೆ ಉದ್ಯೋಗ ಒದಗಿಸುವುದು ನನ್ನ ಪ್ರಮುಖ ಗುರಿಯಾಗಿರುತ್ತದೆ. ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು ಇತರ ರಾಜಕಾರಣಿಗಳಂತೆ ಧನಬಲ, ತೋಳ್ಬಲಗಳನ್ನು ಬಳಸಿಕೊಂಡು ಚುನಾವಣೆ ಗೆಲ್ಲುವ ಇರಾದೆ ನನಗಿಲ್ಲ. ಜನ ನನಗೆ ಮತ ನೀಡುತ್ತಾರೆ ಎಂಬ ಆತ್ಮವಿಶ್ವಾಸವಿದೆ ಎಂದು ಕಲ್ಕಿ ಸುಬ್ರಮಣಿಯಂ ಹೇಳಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections 2014: Adding a new dimension to her battle in securing her community's rights, a well known transgender and activist Kalki Subramaniam is making her electoral debut in the April 27 Lok Sabha polls in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more