ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 28ರಿಂದ ಚೆನ್ನೈನಿಂದ ಕರ್ನಾಟಕ, ಕೇರಳಕ್ಕೆ ರೈಲು ಸಂಚಾರ

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 25 : ತಮಿಳುನಾಡು ರಾಜಧಾನಿ ಚೆನ್ನೈನಿಂದ ಕರ್ನಾಟಕ, ಕೇರಳಕ್ಕೆ ರೈಲುಗಳು ಸಂಚಾರ ಸೆ. 27ರ ಭಾನುವಾರದಿಂದ ಆರಂಭವಾಗಲಿದೆ. ಲಾಕ್ ಡೌನ್ ಘೋಷಣೆ ಮಾಡಿದ ದಿನದಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.

ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಪ್ರತಿದಿನ ಚೆನ್ನೈನಿಂದ ತಿರುವನಂತಪುರಂ, ಮಂಗಳೂರು, ಮೈಸೂರು ನಗರಗಳಿಗೆ ಆರಂಭಿಸಲಿದೆ. ರೈಲ್ವೆ ಬೋರ್ಡ್ ವಿಶೇಷ ರೈಲುಗಳನ್ನು ಓಡಿಸಲು ಅನುಮತಿಯನ್ನು ನೀಡಿದೆ.

ಕರ್ನಾಟಕದಿಂದ 3 ವಿಶೇಷ ರೈಲು ಸಂಚಾರ; ವೇಳಾಪಟ್ಟಿ ಕರ್ನಾಟಕದಿಂದ 3 ವಿಶೇಷ ರೈಲು ಸಂಚಾರ; ವೇಳಾಪಟ್ಟಿ

ಸೆಪ್ಟೆಂಬರ್ 27ರಂದು ಚೆನ್ನೈ-ತಿರುವನಂತಪುರಂ ವಿಶೇಷ ರೈಲು ಸಂಚಾರ ಆರಂಭಿಸಲಿದೆ. ಚೆನ್ನೈ-ಮಂಗಳೂರು ವಿಶೇಷ ರೈಲಿನ ಸಂಚಾರ ಸೆಪ್ಟೆಂಬರ್ 28ರಿಂದ ಆರಂಭವಾಗಲಿದೆ. ಮೈಸೂರಿಗೆ ಸಂಚಾರ ನಡೆಸುವ ರೈಲಿನ ವೇಳಾಪಟ್ಟಿ ಅಂತಿಮವಾಗಿಲ್ಲ.

ಮೆಜೆಸ್ಟಿಕ್‌ನಿಂದ ಹೊರಡಲಿದೆ ಯಶವಂತಪುರ-ಕಾರವಾರ ರೈಲು ಮೆಜೆಸ್ಟಿಕ್‌ನಿಂದ ಹೊರಡಲಿದೆ ಯಶವಂತಪುರ-ಕಾರವಾರ ರೈಲು

ವಿಶೇಷ ರೈಲುಗಳಿಗೆ ಟಿಕೆಟ್ ಬುಕ್ಕಿಂಗ್ ಶೀಘ್ರವೇ ಆರಂಭವಾಗಲಿದೆ. ಲಾಕ್ ಡೌನ ಬಳಿಕ ಇದೇ ಮೊದಲ ಬಾರಿಗೆ ಚೆನ್ನೈನಿಂದ ಅಂತರರಾಜ್ಯ ರೈಲುಗಳ ಸಂಚಾರ ಆರಂಭವಾಗುತ್ತಿದೆ.

ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ

ಚೆನ್ನೈ-ತಿರುವನಂತಪುರಂ ರೈಲು ವೇಳಾಪಟ್ಟಿ

ಚೆನ್ನೈ-ತಿರುವನಂತಪುರಂ ರೈಲು ವೇಳಾಪಟ್ಟಿ

ಚೆನ್ನೈ ಸೆಂಟ್ರಲ್-ತಿರುವನಂತಪುರಂ ವಿಶೇಷ ರೈಲು ಚೆನ್ನೈನಿಂದ ಸಂಜೆ 7.45ಕ್ಕೆ ಹೊರಡಲಿದೆ, ಮರುದಿನ ಬೆಳಗ್ಗೆ 11.45ಕ್ಕೆ ತಿರುವನಂತಪುರಂ ತಲುಪಲಿದೆ. ತಿರುವನಂತಪುರಂನಿಂದ ಮಧ್ಯಾಹ್ನ 3 ಗಂಟೆಗೆ ಹೊರಡುವ ರೈಲು ಬೆಳಗ್ಗೆ 7.40ಕ್ಕೆ ಚೆನ್ನೈ ತಲುಪಲಿದೆ.

ಮಂಗಳೂರು ರೈಲು ವೇಳಾಪಟ್ಟಿ

ಮಂಗಳೂರು ರೈಲು ವೇಳಾಪಟ್ಟಿ

ಚೆನ್ನೈ ಸೆಂಟ್ರಲ್-ಮಂಗಳೂರು ರೈಲು ಚೆನ್ನೈನಿಂದ ರಾತ್ರಿ 8.10ಕ್ಕೆ ಹೊರಡಲಿದೆ, ಮಧ್ಯಾಹ್ನ 12.10ಕ್ಕೆ ಮಂಗಳೂರಿಗೆ ತಲುಪಲಿದೆ. ಮಂಗಳೂರಿನಿಂದ ಮಧ್ಯಾಹ್ನ 1.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 5.35ಕ್ಕೆ ಚೆನ್ನೈ ತಲುಪಲಿದೆ.

ಮೈಸೂರು ರೈಲು ವೇಳಾಪಟ್ಟಿ

ಮೈಸೂರು ರೈಲು ವೇಳಾಪಟ್ಟಿ

ನೈಋತ್ಯ ರೈಲ್ವೆಯಲ್ಲಿಯೇ ಚೆನ್ನೈ ಸೆಂಟ್ರಲ್-ತಿರುವನಂತಪುರಂ ರೈಲಿಗೆ ಭಾರಿ ಬೇಡಿಕೆ ಇದೆ. ಚೆನ್ನೈನಿಂದ ಕರ್ನಾಟಕದ ಮೈಸೂರಿಗೆ ಸಹ ರೈಲು ಸಂಚಾರ ನಡೆಸಲಿದೆ. ಆದರೆ, ವೇಳಾಪಟ್ಟಿಯನ್ನು ಇನ್ನು ಅಂತಿಮಗೊಳಿಸಿಲ್ಲ.

ಸೆಪ್ಟೆಂಬರ್ 7ರಿಂದ ಸಂಚಾರ

ಸೆಪ್ಟೆಂಬರ್ 7ರಿಂದ ಸಂಚಾರ

ಲಾಕ್ ಡೌನ್ ಬಳಿಕ ತಮಿಳುನಾಡು ಸರ್ಕಾರ ಸೆಪ್ಟೆಂಬರ್ 7ರಿಂದ ರಾಜ್ಯದೊಳಗೆ ರೈಲು ಸಂಚಾರವನ್ನು ಆರಂಭಿಸಿತ್ತು. ಈಗ ಅಂತರರಾಜ್ಯ ರೈಲು ಸೇವೆಯನ್ನು ಆರಂಭಮಾಡುತ್ತಿದೆ. ವಿಶೇಷ ರೈಲಿನಲ್ಲಿ ಸಂಚಾರ ನಡೆಸುವವರು 90 ನಿಮಿಷ ಮೊದಲಯ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದೆ.

Recommended Video

corona timeಅಲ್ಲು income ಜೋರು | Oneindia Kannada

English summary
South western railway will run train from Chennai to Kerala and Karnataka from Sunday, September 28, 2020. Train service stopped after announcement of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X