ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನೀರು ಹೊತ್ತು ಚೆನ್ನೈ ತಲುಪಿದ ರೈಲು

|
Google Oneindia Kannada News

ಚೆನ್ನೈ, ಜುಲೈ 12: ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರಿಗೆ ಆಹಾಕಾರವೆದ್ದಿದ್ದು, ರೈಲಿನ ಮೂಲಕ ಲಕ್ಷಾಂತರ ಲೀಟರ್‌ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಕಾವೇರಿ ನೀರನ್ನು ಹೊತ್ತ ರೈಲು ಶುಕ್ರವಾರ ಚೆನ್ನೈಗೆ ತಲುಪಿದ್ದು, ಸಾರ್ವಜನಿಕರಿಗೆ ನೀರಿನ ವಿತರಣೆ ಮಾಡಲಾಗುತ್ತಿದೆ. ನೀರು ಹಿಡಿಯಲು ವಿಶೇಷ ವ್ಯವಸ್ಥೇಯುಳ್ಳ ವ್ಯಾಗನ್‌ (ಬಿಟಿಪಿಎನ್‌) ಮೂಲಕ ನೀರನ್ನು ಚೆನ್ನೈಗೆ ತರಲಾಗಿದೆ.

ಅನಾರೋಗ್ಯ ಕಾರಣ ನೀಡಿದ ಸರವಣ ಭವನ ಮಾಲೀಕ; ಕಾಲಾವಕಾಶ ನೀಡದ ಸುಪ್ರೀಂಅನಾರೋಗ್ಯ ಕಾರಣ ನೀಡಿದ ಸರವಣ ಭವನ ಮಾಲೀಕ; ಕಾಲಾವಕಾಶ ನೀಡದ ಸುಪ್ರೀಂ

ಶುಕ್ರವಾರ ಮಧ್ಯಾಹ್ನ ಮೊದಲ ನೀರು ಹೊತ್ತ ರೈಲು ಚೆನ್ನೈಗೆ ಬಂದಿತು. ಆದರೆ ಸಚಿವರು ಉದ್ಘಾಟನೆಗೆ ಆಗಮಿಸುವುದು ತಡವಾದ್ದರಿಂದ ನೀರಿಗಾಗಿ ಜನರು ಕಾಯಬೇಕಾಯಿತು. ಇದರ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Train carrying water reached Chennai on friday

25 ಲಕ್ಷ ಲೀಟರ್ ನೀರು ಹೊತ್ತ ರೈಲು ದಿನಕ್ಕೆ ನಾಲ್ಕು ಬಾರಿ ಬರಲಿದ್ದು, ಇವು ಆರು ತಿಂಗಳ ವರೆಗೆ ಚೆನ್ನೈಗೆ ನೀರು ಪೂರೈಕೆ ಮಾಡಲಿವೆ. ಇದಕ್ಕೆಂದೇ 68 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

ಮಳೆ ಮಾತ್ರ ಚೆನ್ನೈ ನಗರವನ್ನು ಉಳಿಸಬಲ್ಲದು: ಬರಕ್ಕೆ ಮಿಡಿದ ಹಾಲಿವುಡ್ ನಟ ಡಿಕಾಪ್ರಿಯೋಮಳೆ ಮಾತ್ರ ಚೆನ್ನೈ ನಗರವನ್ನು ಉಳಿಸಬಲ್ಲದು: ಬರಕ್ಕೆ ಮಿಡಿದ ಹಾಲಿವುಡ್ ನಟ ಡಿಕಾಪ್ರಿಯೋ

ಚೆನ್ನೈ ನಗರದಲ್ಲಿ ಭಾರಿ ನೀರಿನ ಅಭಾವ ಉಂಟಾಗಿದ್ದು, ದಿನಕ್ಕೆ ಲಂಕ್ಷಾಂತರ ಲೀಟರ್ ನೀರಿನ ಕೊರತೆಯನ್ನು ಚೆನ್ನೈ ಇಜನ ಎದುರಿಸುತ್ತಿದ್ದಾರೆ. ವಾಹನಗಳನ್ನು ತೊಳೆಯುವುದು, ನೀರಿಗೆ ಸಂಬಂಧಿಸಿದ ಆಟಗಳು (ವಾಟರ್‌ಪಾರ್ಕ್‌) ಇತರೆಗಳನ್ನು ಸ್ಥಳೀಯ ಆಡಳಿತವು ಮುಚ್ಚಿಸಿದೆ.

English summary
Chennai is in deep water crisis. Friday a train carrying 25 lakh liter water reached Chennai. daily 1 crore liters of water will be transportetd to Chennai through trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X