ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರ ಕಳೆದರೂ 'ಸೀಳು ಸೀರೆ' ವಧುವಿನ ವಿವಾದ ಮುಗಿದಿಲ್ಲ!

ಕೆನಡಾದ ಟೊರೆಂಟೋ ಮೂಲದ ಮ್ಯಾಗಜೀನ್ ನ ಕವರಪೇಜ್ ನಲ್ಲಿ ಸೀಳು ಸೀರೆಯುಟ್ಟ ನೀಳ ಕಾಲುಳ್ಳ ಮಾಡೆಲ್ ಚಿತ್ರ ನೋಡಿ ತಮಿಳರು ಕೆರಳಿದ್ದರು, ಸಂಸ್ಕೃತಿ ನಾಶವಾಗುತ್ತಿದೆ ಎಂದು ಅಬ್ಬರಿಸಿದ್ದರು. ಈ ಚರ್ಚೆ ಇನ್ನೂ ಮುಂದುವರೆದಿದೆ.

By Mahesh
|
Google Oneindia Kannada News

ಚೆನ್ನೈ, ಮಾರ್ಚ್ 27: ಕೆನಡಾದ ಟೊರೆಂಟೋ ಮೂಲದ ಮ್ಯಾಗಜೀನ್ ನ ಕವರಪೇಜ್ ನಲ್ಲಿ ಸೀಳು ಸೀರೆಯುಟ್ಟ ನೀಳ ಕಾಲುಳ್ಳ ಮಾಡೆಲ್ ಚಿತ್ರ ನೋಡಿ ತಮಿಳರು ಕೆರಳಿದ್ದರು, ತಮಿಳುನಾಡಿನ ಅಪ್ಪಟ ಸಂಸ್ಕೃತಿ ಬಿಂಬಿಸುವ ವಧು ಇವಳು ಎಂದು ಮ್ಯಾಗಜೀನ್ ನಲ್ಲಿ ಹೇಳಲಾಗಿತ್ತು. ಆದರೆ, ಸಂಸ್ಕೃತಿ ನಾಶವಾಗುತ್ತಿದೆ ಎಂದು ಅಬ್ಬರಿಸಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಚರ್ಚೆ ಇನ್ನೂ ಮುಂದುವರೆದಿದೆ.

ವಧುವಿನ ಈ ಬೋಲ್ಡ್ ಅಂಡ್ ಬ್ಯೂಟಿಫುಲ್ ವೇಷ ನೋಡಿ ತಮಿಳರು ದಂಗಾಗಿದ್ದಾರೆ. ದಕ್ಷಿಣ ಏಷ್ಯಾದ ಮಾಸಪತ್ರಿಕೆ ವಿರುದ್ಧ ಕಿಡಿಕಾರಿದ್ದಾರೆ.

ಕೆನಡಾದಲ್ಲಿ ನೆಲೆಸಿರುವ ಭಾರತೀಯರಿಗಾಗಿಯೇ ಇರುವ ವಿಶೇಷ ಮಾಸಪತ್ರಿಕೆಯಲ್ಲಿ 'ಜೋಡಿ ಬ್ರೈಡಲ್ ಶೋ' ಹೆಸರಲ್ಲಿ ಫೋಟೋ ಪ್ರಕಟಿಸಲಾಗಿತ್ತು. ಪ್ರತಿ ವರ್ಷ ಈ ಹೊಸ ವಿಶೇಷ ಸಂಚಿಕೆ ಹೊರ ತರಲಾಗುತ್ತದೆ.

ಮಾರ್ಚ್ 13ರ ಸಂಚಿಕೆಯಲ್ಲಿ ಬಂದಿರುವ ವಧುವಿನ ಚಿತ್ರದಲ್ಲಿರುವ ಮಾಡೆಲ್ ಸ್ಲಿಟ್ ಸೀರೆ ಉಟ್ಟು ತನ್ನ ನೀಳ ಕಾಲುಗಳನ್ನು ಫೋಟೋದಲ್ಲಿ ಪ್ರದರ್ಶಿಸುತ್ತಿದ್ದಾಳೆ. ಈ ಚಿತ್ರ ಪ್ರಕಟಿಸಿದ ಮ್ಯಾಗಜೀನ್ ಅಲ್ಲದೆ, ಪೋಸ್ ಕೊಟ್ಟ ಮಾಡೆಲ್ ತಮಿಳುನಾಡು ಮೂಲದ ತನುಷ್ಕಾ ಸುಬ್ರಮಣಿಯನ್ ವಿರುದ್ಧ ಕೂಡಾ ಅನೇಕರು ಕಿಡಿಕಾರಿದ್ದಾರೆ.

ತನುಷ್ಕಾ ಸುಬ್ರಮಣ್ಯಂ

ತನುಷ್ಕಾ ಸುಬ್ರಮಣ್ಯಂ

ಸಾಮಾಜಿಕ ತಾಣಗಳಲ್ಲಿ ಬಂದಿರುವ ಕಮೆಂಟ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಮಾಡೆಲ್ ತನುಷ್ಕಾ ಸುಬ್ರಮಣ್ಯಂ, ಈ ಫೋಟೋದ ಹಿಂದೆ ತಮಿಳು ಹೆಣ್ಣುಮಗಳೊಬ್ಬಳ ಪ್ರತಿಭೆ ಅಡಗಿದೆ. ಅದನ್ನು ಗುರುತಿಸುವ ಬದಲು ಎಲ್ಲರೂ ಋಣಾತ್ಮಕವಾಗಿ ಪ್ರತಿಕ್ರಿಯಿಸಿರೋದು ದುರದೃಷ್ಟಕರ ಎಂದಿದ್ದಾರೆ.

ಸೀಳು ಸೀರೆ ಪರ ವಿರೋಧ

ಸೀಳು ಸೀರೆ ಪರ ವಿರೋಧ

ಸೀಳು ಸೀರೆ ಪರ ವಿರೋಧ ಚರ್ಚೆ ನಡೆಯುತ್ತಲೆ ಇದೆ. ಕೆಲವರು ತನುಷ್ಕಾಳನ್ನು ಬೆಂಬಲಿಸಿದ್ದು, ತಮಿಳು ಸಂಪ್ರದಾಯಕ್ಕೆ ಅವಮಾನವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗ್ನಶಿಲ್ಪಗಳ ಚಿತ್ರ ಹಾಕಿ ಚರ್ಚೆ

ನಗ್ನಶಿಲ್ಪಗಳ ಚಿತ್ರ ಹಾಕಿ ಚರ್ಚೆ

ಇದಕ್ಕೆ ಉತ್ತರಿಸಿರುವ ತಮಿಳಿಗರೊಬ್ಬರು, ಕಲೆಯೊಂದು ನನ್ನ ಸಂಸ್ಕೃತಿಯನ್ನು ಕೊಲ್ಲುತ್ತಿದ್ದರೆ, ಅಂಥಾ ಕಲೆಯನ್ನು ಒಪ್ಪಲು ಸಾಧ್ಯವಿಲ್ಲ. ಫ್ಯಾಷನ್ ಹೆಸರಿನಲ್ಲಿ ಕಲೆ, ಸಂಸ್ಕೃತಿ, ಭಾಷೆಯನ್ನು ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ.

ತನುಷ್ಕಾ ಪರ ಬೆಂಬಲ

ತನುಷ್ಕಾ ಪರ ಬೆಂಬಲ

ಜೋಡಿ ಬ್ರೈಡಲ್ ಬಗ್ಗೆ ನನ್ನ ಸಹಮತವಿದೆ. ಅನಾದಿ ಕಾಲದಿಂದಲೂ ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ. ಈ ಮ್ಯಾಗಜೀನ್ ಕವರ್ ಶೂಟಿಂಗ್ ನಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳು

English summary
Toronto-based magazine has riled up quite a few on social media who feel that the image disrespects "Tamil culture", while others defended the artist's freedom. argument continues on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X