ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲಂಬೋ ಸ್ಫೋಟಕ್ಕೂ ನಮಗೂ ಸಂಬಂಧವಿಲ್ಲ : ತಮಿಳು ಸಂಘಟನೆ

|
Google Oneindia Kannada News

ಚೆನ್ನೈ, ಏಪ್ರಿಲ್ 23: ಶ್ರೀಲಂಕಾದ ವಿವಿಧೆಡೆ ಭಾನುವಾರದಂದು ಈಸ್ಟರ್ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಮಿಳುನಾಡು ತೌಹಿದ್ ಜಮಾತ್(ಟಿಎನ್ ಟಿಜೆ) ಸಂಘಟನೆ ಸ್ಪಷ್ಟಪಡಿಸಿದೆ.

ಕೊಲಂಬೋ ಹಾಗೂ ಇನ್ನಿತರ ಕಡೆಗಳಲ್ಲಿ ಸಂಬಂಧಿಸಿದ ಸ್ಫೋಟಕ್ಕೆ ರಾಷ್ಟ್ರೀಯ ತೌಹಿದ್ ಜಮಾತೆ(ಎನ್ಟಿಜೆ) ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಎನ್ಟಿಜೆಗೂ ಟಿಎನ್ಟಿಜೆಗೂ ಸಂಬಂಧವಿಲ್ಲ ಎಂದು ತಮಿಳುನಾಡು ಮೂಲದ ಸಂಘಟನೆ ಇಂದು ಸ್ಪಷ್ಟಪಡಿಸಿದೆ.

ಶ್ರೀಲಂಕಾದಲ್ಲಿರುವ ತೌಹಿ ಜಮಾತ್ (ಎಸ್ ಎಲ್ಟಿಜೆ) ಹಾಗೂ ತಮಿಳುನಾಡಿನ ಘಟಕ ಟಿಎನ್ಟಿಜೆ ಸಾಮಾಜಿಕ ಕಳಕಳಿಯಿಂದ ಅನೇಕ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳುಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

ವಿಧ್ವಂಸಕ ಕೃತ್ಯ ಎಸಗುವ ಉಗ್ರ ಸಂಘಟನೆಗಳನ್ನು ವಿರೋಧಿಸುತ್ತಾ ಬಂದಿದ್ದೇವೆ ಎಂದು ಟಿಎನ್ಟಿಜೆ ವಕ್ತಾರರು ಹೇಳಿಕೆ ನೀಡಿದ್ದಾರೆ.

ಟಿಎನ್ಟಿಜೆ ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯೆ

ಟಿಎನ್ಟಿಜೆ ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯೆ

ಟಿಎನ್ಟಿಜೆ ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಸ್ಪಷ್ಟನೆ ನೀಡಿ, ತೌಹಿದ್ ಎಂಬ ಪದ ಎಲ್ಲಾ ಸಂಘಟನೆಗಳಲ್ಲೂ ಸಮಾನವಾಗಿ ಬಳಕೆಯಲ್ಲಿರುವುದರಿಂದ ಗೊಂದಲ, ಅನುಮಾನ ಮೂಡುವುದು ಸಹಜ ಹಾಗೂ ದುರದೃಷ್ಟಕರ. ಟಿಎನ್ಟಿಜೆ ಯಾವುದೇ ಕಾರಣಕ್ಕೂ ಎಂದಿಗೂ ಉಗ್ರವಾದವನ್ನು ಒಪ್ಪುವುದಿಲ್ಲ ಹಾಗೂ ಬೆಂಬಲಿಸುವುದಿಲ್ಲ. ಅಮಾಯಕರ ಸಾವಿಗೆ ಕಾರಣವಾದ ಸಂಘಟನೆಗೆ ಧಿಕ್ಕಾರವಿರಲಿ ಎಂದು ಹೇಳಿದ್ದಾರೆ.

ತೌಹಿದ್ ಜಮಾತ್ ಸಂಘಟನೆ

ತೌಹಿದ್ ಜಮಾತ್ ಸಂಘಟನೆ

ಈ ವಿಧ್ವಂಸಕ ಸಂಬಂಧ 7 ಮಂದಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವರು ತಿಳಿಸಿದ್ದರು. ಇಸ್ಲಾಮಿಕ್ ಉಗ್ರ ಸಂಘಟನೆ ಐಎಸ್ಐಎಸ್ ಕೃತ್ಯದಂತೆ ತೋರುತ್ತಿದೆ. ತೌಹಿದ್ ಜಮಾತ್ ಸಂಘಟನೆ ಬಗ್ಗೆ ಹೆಚ್ಚಿನ ಸಂಶಯವಿದ್ದು, ತಮಿಳುನಾಡಿನಲ್ಲೂ ತನ್ನ ಅಸ್ತಿತ್ವವನ್ನು ಈ ಸಂಘಟನೆ ಹೊಂದಿದೆ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿದ್ದವು.

ಇಸ್ಲಾಮಿಕ್ ಸಂಘಟನೆ ಕೃತ್ಯ ಎಂಬ ಅನುಮಾನ

ಇಸ್ಲಾಮಿಕ್ ಸಂಘಟನೆ ಕೃತ್ಯ ಎಂಬ ಅನುಮಾನ

ಹತ್ತು ವರ್ಷಗಳ ಹಿಂದೆ ಲಿಬೆರೇಷನ್ ಟಗರ್ಸ್ ಆಫ್ ತಮಿಳ್ ಈಳಂ(ಎಲ್ ಟಿಟಿಇ) ದಾಳಿ ನಡೆದಿದ್ದು ಬಿಟ್ಟರೆ, ಈ ರೀತಿ ದಾಳಿಯನ್ನು ದ್ವೀಪರಾಷ್ಟ್ರ ಕಂಡಿರಲಿಲ್ಲ. ಆದರೆ, ಸರಣಿ ಸ್ಫೋಟದಲ್ಲಿ ಬಳಸಲಾಗಿರುವ ಸ್ಫೋಟಕವಸ್ತುಗಳು ಹಾಗೂ ಸ್ಫೋಟ ಸಂಭವಿಸಿದ ರೀತಿ, ಚರ್ಚ್ ಗುರಿಯನ್ನಾಗಿಸಿರುವುದನ್ನು ಗಮನಿಸಿದರೆ ಇದು ಇಸ್ಲಾಮಿಕ್ ಸಂಘಟನೆ ಕೃತ್ಯ ಎಂದು ಅನುಮಾನ ವ್ಯಕ್ತವಾಗಿದೆ.

ಶ್ರೀಲಂಕಾದ ತೌಹಿದ್ ಜಮಾತ್

ಶ್ರೀಲಂಕಾದ ತೌಹಿದ್ ಜಮಾತ್

ವಹಾಬಿ ಜತೆ ಸಖ್ಯ ಹೊಂದಿರುವ ಶ್ರೀಲಂಕಾ ತೌಹಿದ್ ಜಮಾತ್ (ಎಸ್ಎಲ್ ಟಿಜೆ) ಈಗ ಶ್ರೀಲಂಕಾದ ಪೂರ್ವ ಪ್ರಾಂತ್ಯದಲ್ಲಿ ಸಕ್ರಿಯಾಗಿದ್ದು, ಶರಿಯಾರ್ ಕಾನೂನು, ಮಹಿಳೆಯರಿಗೆ ಬುರ್ಖಾ ಕಡ್ಡಾಯ, ಮೂಲಭೂತವಾದ ಪ್ರಸಾರ ಮಾಡಲು ಹೆಚ್ಚು ಮಸೀದಿ ನಿರ್ಮಾಣ ಹೀಗೆ ಅನೇಕ ಕಾರ್ಯಗಳಲ್ಲಿ ತೊಡಗಿಕೊಂಡಿವೆ.

English summary
A Tamil Nadu based outfit, the Tamil Nadu Thowheed Jamath (TNTJ) has denied links with the National Thowheed Jamath (NTJ), which has been blamed for the ghastly suicide bombings in Colombo that claimed 290 lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X