ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥೈ ಪೂಸಮ್‌ ಇನ್ಮುಂದೆ ಸಾರ್ವಜನಿಕ ರಜೆ ದಿನ: ಸಿಎಂ ಇಪಿಎಸ್

|
Google Oneindia Kannada News

ಚೆನ್ನೈ, ಜನವರಿ 05: ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಂಗಲ್ ಗಿಫ್ಟ್ ನೀಡಿದ್ದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರವು ಈಗ ಥೈ ಪೂಸಮ್‌ ಇನ್ಮುಂದೆ ಸಾರ್ವಜನಿಕ ರಜೆ ದಿನ ಎಂದು ಘೋಷಿಸಿದೆ. ತಮಿಳುನಾಡು ಸೇರಿದಂತೆ ವಿಶ್ವದ ಹಲವೆಡೆ ತಮಿಳರು ಭಯಭಕ್ತಿಯಿಂದ ಆಚರಿಸುವ ಮುರುಗನ ಪೂಜೆ ಪುನಸ್ಕಾರಕ್ಕೆ ಮಹತ್ವ ನೀಡಲಾಗಿದೆ.

ಜನವರಿ-ಫೆಬ್ರವರಿ ತಿಂಗಳಿನಲ್ಲಿ ಸೌರಮಾನ ಮಾಸದ ಪುಷ್ಯಾ ನಕ್ಷತ್ರ ಅಥವಾ ಪೂರ್ಣಿಮೆ ದಿನಗಳಲ್ಲಿ ಥೈ ಪೂಸಮ್‌ ಬರುತ್ತದೆ. ಥೈ ಪೂಸಮ್‌ ಎಂದು ಥೈ ತಿಂಗಳಲ್ಲಿ ಬರುವ ಪುಷ್ಯಾ ನಕ್ಷತ್ರ ಎಂದರ್ಥ. ಈ ದಿನದಂದು ಹುಣ್ಣಿಮೆ ಚಂದ್ರ ಅತ್ಯಂತ ಪ್ರಕಾಶಮಾನವಾಗಿರುತ್ತಾನೆ. ಈ ದಿನದಂದು ಮುರುಗನ ಕೈಗೆ ತಾಯಿ ಪಾರ್ವತಿಯು ವೇಲ್ (ಆಯುಧ) ನೀಡಿ ಆಶೀರ್ವದಿಸಿದಳು ಎಂಬ ನಂಬಿಕೆಯಿದೆ. ಮುರುಗನ ಕೃಪೆಗಾಗಿ ಹಲವು ರೀತಿಯಲ್ಲಿ ಹರಕೆ ಹೊರಲಾಗುತ್ತದೆ. ಕಾವಡಿಗಳನ್ನು ಹೊರುವುದು ಸಾಮಾನ್ಯವಾಗಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಕಾಣಬಹುದು.

ಥೈ ಪೂಸಮ್‌ : ಕನ್ನಡತಿ ಕಂಡಂತೆ ತಮಿಳರ ಹಬ್ಬ

ಈ ಕಾವಡಿಗಳನ್ನು ಹೊರುವವರು ಹಲವು ನಿಯಮಗಳನ್ನು ಪಾಲಿಸುತ್ತಾರೆ. ಬ್ರಹ್ಮಚರ್ಯ, ಸಾತ್ವಿಕ ಆಹಾರ. ಧೂಮಪಾನ ನಿಷೇಧ, ಕುಡಿತಕ್ಕೆ ರಜೆ, ಹಲವರು ಮೌನ ಆಚರಿಸುತ್ತಾರೆ. ಇವರಲ್ಲಿ ಹಲವರು ಕಾವಿ ಬಟ್ಟೆ, ಕೈಯಲ್ಲಿ ಜೋಳಿಗೆ ಹಿಡಿದು, ಅಕ್ಕಿ, ಹಾಲು, ಗಂಧ ಇವುಗಳನ್ನು ಭಿಕ್ಷಾರೂಪದಲ್ಲಿ ಸ್ವೀಕರಿಸುತ್ತಾರೆ.

TN govt declares Thai Poosam a public holiday

ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಈ ಬಾರಿ ಜನವರಿ 28ರಂದು ಥೈ ಪೂಸಂ ಆಚರಿಸಲಾಗುತ್ತದೆ. ಭಾರತದ ಜೊತೆಗೆ ಶ್ರೀಲಂಕಾ, ಸಿಂಗಪುರ, ಮಲೇಶಿಯಾ, ಕೆನಡಾ, ಥೈಲ್ಯಾಂಡ್, ಗಯಾನಾ, ಜಮೈಕಾ ಸೇರಿದಂತೆ ತಮಿಳು ಇರುವ ಕಡೆಗಳಲ್ಲಿ ಶಕ್ತ್ಯಾನುಸಾರ ಹರಕೆ ಹೊತ್ತು ಮುರುಗನ ಕೃಪೆಗಾಗಿ ಪೂಜೆ ಸಲ್ಲಿಸುತ್ತಾರೆ.

ಪೊಂಗಲ್ ಗಿಫ್ಟ್, ಕ್ರಿಸ್ಮಸ್ ಕೊಡುಗೆ ಕೊಟ್ಟ ಸಿಎಂ ಇಪಿಎಸ್ಪೊಂಗಲ್ ಗಿಫ್ಟ್, ಕ್ರಿಸ್ಮಸ್ ಕೊಡುಗೆ ಕೊಟ್ಟ ಸಿಎಂ ಇಪಿಎಸ್

ವಿಶೇಷವೆಂದರೆ ತಮಿಳುನಾಡಿನಲ್ಲಿ ಈ ಬಾರಿ ಸಾರ್ವಜನಿಕ ರಜೆದಿನ ಎಂದು ಘೋಷಿಸಲಾಗಿದೆ. ಆದರೆ, ಮಲೇಶಿಯಾ, ಶ್ರೀಲಂಕಾ, ಮಾರಿಷಸ್ ದ್ವೀಪ ರಾಷ್ಟ್ರದಲ್ಲಿ ಈಗಾಗಲೇ ಥೈ ಪೂಸಮ್ ಸಾರ್ವಜನಿಕ ರಜೆದಿನ ಎಂದು ಘೋಷಣೆಯಾಗಿದೆ.

TN govt declares Thai Poosam a public holiday

ಸಿಎಂ ಇಪಿಎಸ್ ಆದೇಶವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರು ಸ್ವಾಗತಿಸಿದ್ದಾರೆ. ಎಲ್ ಮುರುಗನ್ ಅವರು ವೆಟ್ರಿ ವೇಲ್ ಯಾತ್ರೆ ನಡೆಸಿ, ಥೈ ಪೂಸಮ್ ದಿನವನ್ನು ಸಾರ್ವಜನಿಕ ರಜೆ ದಿನ ಎಂದು ಘೋಷಿಸುವಂತೆ ಆಗ್ರಹಿಸಿದ್ದನ್ನು ಇಲ್ಲಿಸ್ಮರಿಸಬಹುದು.

ಸೀಮನ್ ಅವರ ನಾಮ್ ತಮಿಳರ್ ಕಚ್ಚಿ , ಹಿಂದು ಸಂಘಟನೆ ಹಿಂದು ಮಕ್ಕಳ್ ಕಚ್ಚಿ ಕೂಡಾ ಸಿಎಂ ಇಪಿಎಸ್ ಆದೇಶವನ್ನು ಸ್ವಾಗತಿಸಿವೆ (ಪಿಟಿಐ)

English summary
Tamil Nadu Chief Minister K Palaniswami on Tuesday said he has ordered public holiday for 'Thai Poosam,' a festival dedicated to worship of Lord Muruga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X