ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಜಿ ಗೇಮ್ ಆಡಲು ಸಾಧ್ಯವಾಗದೆ ನೊಂದ ಬಾಲಕ ಆತ್ಮಹತ್ಯೆ

|
Google Oneindia Kannada News

ಈರೋಡ್(ತಮಿಳುನಾಡು) ಅ, 27: ಪಬ್‌ಜಿ ಸೇರಿದಂತೆ ಅನೇಕ ಆಪ್‌ಗಳು ತಾತ್ಕಾಲಿಕವಾಗಿ ತಮ್ಮ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಪ್ಲೇಯರ್ ಅನ್‌ನೌನ್ ಬ್ಯಾಟ್ಲ್‌ಗ್ರೌಂಡ್ಸ್ (ಪಬ್‌ಜಿ) ಚಟ ಹತ್ತಿಸಿಕೊಂಡ ಯುವಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರದಂದು ನಡೆದಿದೆ.

ಈರೋಡ್ ಜಿಲ್ಲೆಯಲ್ಲಿ ಆನ್ ಲೈನ್ ಗೇಮ್ ಪಬ್ಜಿ ಆಡಲು ಪೋಷಕರು ಆಡಲು ಬಿಡದ ಕಾರಣ 9ನೇ ತರಗತಿಯ ಬಾಲಕನೊಬ್ಬ ತೀವ್ರವಾಗಿ ನೊಂದಿದ್ದ.

ಪಬ್ಜಿ ಚಟ ಬಿಡಿಸಲು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಕೊಯಮತ್ತೂರಿನ ನರ್ಸಿಂಗ್ ಹೋಂನಲ್ಲಿ ಪಬ್ಜಿ ವ್ಯಸನ ಮುಕ್ತ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಎರಡು ತಿಂಗಳಿನಿಂದ ಉತ್ತಮ ಪ್ರಗತಿ ತೋರುತ್ತಿದ್ದ.

TN boy addicted to PUBG game dies by suicide

ಆದರೆ, ಮಂಗಳವಾರದಂದು ಆತನ ತಂದೆ ತಾಯಿ ಬಂದು ನೋಡಿಕೊಂಡು ಹೋದ ಬಳಿಕ ತನ್ನ ರೂಮಿಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ನಡುವೆ ಪಬ್ಜಿ ಆಟ ಆಡಬೇಕು ಎಂದು ಪೀಡಿಸುತ್ತಿರಲಿಲ್ಲ. ಆದರೆ, ಈ ರೀತಿ ತಪ್ಪು ನಿರ್ಣಯ ಏಕೆ ತೆಗೆದುಕೊಂಡ ಎಂಬುದು ತಿಳಿಯುತ್ತಿಲ್ಲ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Recommended Video

ಕೊನೆಗೂ ಅಂದುಕೊಂಡಿದ್ದನ್ನ ಸಾಧಿಸಿದ ಮೋದಿ ಸರ್ಕಾರ | Oneindia Kannada

ಭಾರತದಲ್ಲಿ 175 ಮಿಲಿಯನ್ ಪಬ್‌ಜಿ ಅಪ್ಲಿಕೇಷನ್ ಬಳಸಲಾಗುತ್ತಿದೆ. ಇಡೀ ಜಗತ್ತಿನ ಪಬ್‌ಜಿ ಇನ್‌ಸ್ಟಾಲೇಷನ್‌ಗಳ ಪೈಕಿ ಭಾರತವೇ ಶೇ 24ರಷ್ಟು ಪಾಲು ಹೊಂದಿದೆ. ಇದು ಈ ಆಟಕ್ಕೆ ಭಾರತ ಭಾರಿ ದೊಡ್ಡ ಮಾರುಕಟ್ಟೆಯಾಗಿದೆ ಎಂಬುದಕ್ಕೆ ಸಾಕ್ಷಿ. ಆದರೂ ಪಬ್‌ಜಿ ಆದಾಯ ಸೃಷ್ಟಿಸುತ್ತಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಭಾರತ ಇಲ್ಲ ಎನ್ನುವುದು ವಿಶೇಷ.

English summary
A 14-year-old boy died by suicide in Erode district, allegedly upset over not being allowed to play the online game, PUBG by his parents, police said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X