ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ವಿಶೇಷ ಗಿಫ್ಟ್ ಕಳಿಸಿದ 90 ವರ್ಷ ವಯಸ್ಸಿನ ದರ್ಜಿ

|
Google Oneindia Kannada News

ಪೊಲ್ಲಾಚಿ(ತಮಿಳುನಾಡು), ಫೆಬ್ರವರಿ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಅಹಮದಾಬಾದಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಟ್ರಂಪ್ ದಂಪತಿಯನ್ನು ಸ್ವಾಗತಿಸಿದ್ದಾರೆ. ಈ ನಡುವೆ ಟ್ರಂಪ್‌ಗೆ ತಮಿಳುನಾಡಿನ ಪೊಲ್ಲಾಚಿಯ 90 ವರ್ಷ ವಯಸ್ಸಿನ ದರ್ಜಿಯೊಬ್ಬರು ವಿಶೇಷ ಉಡುಗೊರೆಯನ್ನು ಕಳಿಸಿದ್ದಾರೆ.

ಟ್ರಂಪ್‌ಗಾಗಿ ಬಿಳಿ ಬಣ್ಣದ ಅಂಗಿಯೊಂದನ್ನು ಕೈಯಾರೆ ಹೊಲಿದಿದ್ದಾರೆ. ವೃದ್ಧ ದರ್ಜಿ ವಿ.ಎಸ್ ವಿಶ್ವನಾಥನ್ ಅವರು ಈ ಖಾದಿ ಅಂಗಿಯನ್ನು ಟ್ರಂಪ್ ಅವರಿಗೆ ಕಳಿಸಿಕೊಟ್ಟಿದ್ದಾರೆ. ಪ್ರಧಾನಿ ಕಚೇರಿ ಹಾಗೂ ಯುಎಸ್ ರಾಯಭಾರ ಕಚೇರಿಗೆ ಖಾದಿ ಅಂಗಿ ತಲುಪಿಸಿದ್ದಾರೆ.

ಯುಎಸ್ ಅಧ್ಯಕ್ಷರ ಭೇಟಿ ಮಾಡಿಸಿ, ಸರ್ಕಾರಕ್ಕೆ ಮೊರೆಯಿಟ್ಟ ಟ್ರಂಪ್ ''ಭಕ್ತಯುಎಸ್ ಅಧ್ಯಕ್ಷರ ಭೇಟಿ ಮಾಡಿಸಿ, ಸರ್ಕಾರಕ್ಕೆ ಮೊರೆಯಿಟ್ಟ ಟ್ರಂಪ್ ''ಭಕ್ತ"

ಈ ಹಿಂದೆ ಕೂಡಾ ವಿಶ್ವನಾಥನ್ ಅವರು ಕೂಡಾ ಅನೇಕ ರಾಜಕೀಯ ಮುಖಂಡರಿಗೆ ಈ ರೀತಿ ಗಿಫ್ಟ್ ಕಳಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕೆ ಕಾಮರಾಜ್, ಸಿ.ಎನ್ ಅಣ್ಣಾದೊರೈ, ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ ಅವರಿಗೂ ಗಿಫ್ಟ್ ಕಳಿಸಿದ್ದರು. ತನ್ನದೇ ಟೈಲರಿಂಗ್ ಅಂಗಡಿ ಹೊಂದಿದ್ದ ವಿಶ್ವನಾಥನ್ ಈಗ ನಿವೃತ್ತರಾಗಿದ್ದು, ಯುವ ಟೈಲರ್ ಗಳಿಗೆ ಪಾಠ ಮಾಡುತ್ತಿದ್ದಾರೆ.

TN 90-year-old master tailor sends special gift to Donald Trump

ಡೊನಾಲ್ಡ್ ಟ್ರಂಪ್ ಕುಟುಂಬ ಪರಿವಾರ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಂಡಿದ್ದು, ಅಹಮದಾಬಾದ್‌ಗೆ ಭೇಟಿ ನೀಡಲಿದ್ದು ನಂತರ ದೆಹಲಿಗೆ ತೆರಳಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ, ಸಬರಮತಿ ಆಶ್ರಮಕ್ಕೆ ಭೇಟಿ, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು ನಂತರ ಆಗ್ರಾಕ್ಕೆ ತೆರಳಿ ತಾಜ್ ಮಹಲ್ ವೀಕ್ಷಿಸಿದ್ದಾರೆ.

English summary
A 90-year-old master tailor from Tamil Nadu’s Pollachi has sent a surprise gift for the US President — a white khadi shirt stitched by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X