ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಲಿತಾ ಜ್ಯುವೆಲ್ಲರಿ 30 ಕೇಜಿ ಚಿನ್ನ ಕಳುವು; ಮುಖ್ಯ ಆರೋಪಿ ಶರಣಾಗತಿ

|
Google Oneindia Kannada News

ತಿರುವಣ್ಣಾಮಲೈ (ತಮಿಳುನಾಡು), ಅಕ್ಟೋಬರ್ 10: ಈ ತಿಂಗಳ ಆರಂಭದಲ್ಲಿ ತಿರುಚ್ಚಿಯ ಲಲಿತಾ ಜ್ಯುವೆಲ್ಲರಿ ಶೋರೂಮ್ ನಲ್ಲಿ ನಡೆದಿದ್ದ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಪಿನ ಪ್ರಮುಖ ಸದಸ್ಯ ಪಿ. ಸುರೇಶ್ ಗುರುವಾರ ತಿರುವಣ್ಣಾಮಲೈ ಜಿಲ್ಲೆಯ ಕೋರ್ಟ್ ಗೆ ಶರಣಾಗಿದ್ದಾನೆ. ಇಪ್ಪತ್ತೆಂಟು ವರ್ಷದ ಸುರೇಶ್ ಚೆಂಗಂನ JM ಕೋರ್ಟ್- Iರಲ್ಲಿ ಶರಣಾಗಿದ್ದಾನೆ.

ಮುಖವಾಡ ತೊಟ್ಟ ಕಳ್ಳರಿಂದ ಲಲಿತಾ ಜ್ಯುವೆಲರ್ಸ್‌ನಿಂದ 50 ಕೋಟಿ ಮೌಲ್ಯದ ಆಭರಣ ಕಳವುಮುಖವಾಡ ತೊಟ್ಟ ಕಳ್ಳರಿಂದ ಲಲಿತಾ ಜ್ಯುವೆಲರ್ಸ್‌ನಿಂದ 50 ಕೋಟಿ ಮೌಲ್ಯದ ಆಭರಣ ಕಳವು

ಮ್ಯಾಜಿಸ್ಟ್ರೇಟ್ ಎಂ. ವಿಘ್ನೇಶ್ ಪ್ರಭು ಅವರು ಆರೋಪಿ ಸುರೇಶ್ ನನ್ನು ಅಕ್ಟೋಬರ್ ಹದಿನಾಲ್ಕನೇ ತಾರೀಕಿನ ತನಕ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಅಕ್ಟೋಬರ್ ಎರಡನೇ ತಾರೀಕಿನಂದು ನಡೆದ ಕಳುವು ಪ್ರಕರಣದಲ್ಲಿ ಭಾಗವಹಿಸಿದ್ದ ಗುಂಪಿನ ಇಬ್ಬರು ಪ್ರಮುಖ ಸದಸ್ಯರಲ್ಲಿ ಸುರೇಶ್ ಕೂಡ ಒಬ್ಬ ಎನ್ನಲಾಗಿದೆ.

Tiruchy Lalitha Jewellery Loot Case: Key Accused Surrenders Before Court

ಆರೋಪಿ ಸುರೇಶ್ ತಮಿಳುನಾಡಿನ ತಿರುವರೂರ್ ಜಿಲ್ಲೆಯ ಸಿರತೊಪ್ಪು ನಿವಾಸಿ ಎಂದು ಮೂಲಗಳು ತಿಳಿಸಿವೆ. ಲಲಿತಾ ಜ್ಯುವೆಲ್ಲರಿ ಶೋ ರೂಮ್ ನಲ್ಲಿ ಪ್ರವೇಶ ಮಾಡಿವರು, ಪ್ರಾಣಿಗಳ ಮುಖವಾಡ ಧರಿಸಿ, ಮೂವತ್ತು ಕೇಜಿಗೂ ಹೆಚ್ಚು ಚಿನ್ನಾಭರಣಗಳನ್ನು ದೋಚಿದ್ದರು. ಆ ದಿನ ಆರು ವಾಚ್ ಮನ್ ಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಈ ಕಳುವು ನಡೆದಿತ್ತು.

English summary
P Suresh, 28 years old, key accused in Tiruchy Lalitha jewellery loot case, surrendered in Tiruvannamalai court on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X