ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೃತೀಯ ಲಿಂಗಿಗಳಿಗೆ ಮೊದಲ ಹಾಸ್ಟೆಲ್ ತೆರೆಯುತ್ತಿರುವ ತಮಿಳುನಾಡು ಶಾಲೆ

|
Google Oneindia Kannada News

ತಿರುಚಿ, ಜುಲೈ 25: ತೃತೀಯ ಲಿಂಗಿ ವಿದ್ಯಾರ್ಥಿಗಳಿಗಾಗಿ ತಮಿಳುನಾಡಿನ ಖಾಸಗಿ ಶಾಲೆಯೊಂದು ಮೊದಲ ಬಾರಿಗೆ ವಸತಿ ನಿಲಯವನ್ನು ತೆರೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದೋ ಅಥವಾ ಇನ್ಯಾವುದೋ ಅನಿವಾರ್ಯತೆಗಳಿಗೆ ಬಿದ್ದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದರು. ಆದರೆ ಮೊದಲ ಘಟ್ಟವಾಗಿ ಅಂತಹ ಮಕ್ಕಳಿಗೆ ಮೊದಲಿನಿಂದಲೇ ಪ್ರೋತ್ಸಾಹವನ್ನು ನೀಡುವುದು, ಉತ್ತಮ ಶಿಕ್ಷಣ ಕೊಡುವುದು, ಸಮಾಜದಲ್ಲಿ ಎಲ್ಲರಂತೆ ನೀವು ಕೂಡ ಎನ್ನುವ ಭಾವನೆಯನ್ನು ತರುವ ಕೆಲಸ ಮಾಡುತ್ತಿದೆ.

ಬರುವ ಶನಿವಾರ ವಸತಿ ನಿಲಯಕ್ಕೆ ಶಂಕು ಸ್ಥಾಪನೆ ನೆರವೇರಲಿದೆ. ರೋಟರಿ ಕ್ಲಬ್ ಸಹಾಯದೊಂದಿಗೆ ಶ್ರೀ ಶಿವಾನಂದ ಬಾಲಾಲಯ ಶಾಲೆಯು ಈ ಉತ್ತಮ ಕೆಲಸ ಮಾಡುತ್ತಿದೆ.

Tiruchis private school will built first hostel for trans childrens

ಮನೆಯಲ್ಲೇ ಉಳಿದಿರುವ 13-17 ವರ್ಷ ವಿದ್ಯಾರ್ಥಿಗಳನ್ನು ಪ್ರಮುಖ ನೆಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೇ ಶಿಕ್ಷಕರು ಈ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಮಕ್ಕಳ ಜೊತೆಯಲ್ಲೇ ಅವರಿಗೂ ಶಿಕ್ಷಣ ನೀಡುವಂತಾಗಬೇಕು.

ಸಂಬಂಧಿಕರು ಏನು ಹೇಳುತ್ತಾರೋ, ಸಮಾಜ ಏನು ಹೇಳುತ್ತದೋ ಎನ್ನುವುದನ್ನು ಬಿಟ್ಟು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಒಂದೊಮ್ಮೆ ಮೊದಲೇ ಉತ್ತಮ ನಿರ್ಧಾರ ತೆಗೆದುಕೊಳ್ಳಲಿದ್ದರೆ ಮಕ್ಕಳು ಬೀದಿಗೆ ಬೀಳುತ್ತಾರೆ.

ಶಾಲೆಯು ತೆಗೆದುಕೊಂಡಿರುವ ಈ ನಿರ್ಧಾರದಿಂದ ಪೋಷಕರು ಹೆದರುವುದು ಬೇಡ, ಅಲ್ಲಿ ಉತ್ತಮ ಶಿಕ್ಷಣವನ್ನು ನೀಡಲಾಗುತ್ತದೆ. ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದರಿಂದ ಶಿಕ್ಷಣ ಪ್ರಾರಂಭವಾಗುತ್ತದೆ ಎಂದು ಶಾಲೆಯ ಕರೆಸ್ಪಾಡೆಂಟ್ ಮೇಜರ್ ಎನ್‌ಕೆಆರ್ ಬಾಬು ತಿಳಿಸಿದ್ದಾರೆ.

ಹಾಸ್ಟೆಲ್ ಸುಮಾರು 32 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಒಟ್ಟು 40 ವಿದ್ಯಾರ್ಥಿಗಳು ಉಳಿದುಕೊಳ್ಳಬಹುದಾದ ಹಾಸ್ಟೆಲ್ ಇದಾಗಿದೆ. ಜನವರು 2020ಕ್ಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

English summary
Tiruchis private school will built first hostel for trans childrens, Sri Sivananda Balalaya school in Somarasampettai, with support from the Rotary Club of Tiruchy- Shakthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X