ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಇಂಡಿಯಾ, 'ಹಿಂದಿಯಾ' ಅಲ್ಲ: ಶಾ ಗೆ ಸ್ಟಾಲಿನ್ ಗುದ್ದು

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 14: ಹಿಂದಿ ಪ್ರತಿರೋಧ ಚಳವಳಿಯಲ್ಲಿ ಹಿಂದಿನಿಂದಲೂ ಮುನ್ನಲೆಯಲ್ಲಿರುವ ತಮಿಳುನಾಡಿಗರು ಇಂದಿನ ಅಮಿತ್ ಶಾ ಹೇಳಿಕಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಹಿಂದಿ ಭಾಷೆಯು ಭಾರತವನ್ನು ವಿಶ್ವದಲ್ಲಿ ಪ್ರತಿನಿಧಿಸುವಂತಾಗಬೇಕು' ಎಂದು ಗೃಹ ಮಂತ್ರಿ ಅಮಿತ್ ಶಾ ಅವರು ನೀಡಿರುವ ಹೇಳಿಕೆಗೆ ಪ್ರತಿಯಾಗಿ ಮಾತನಾಡಿರುವ ತಮಿಳುನಾಡು ವಿಪಕ್ಷ ನಾಯಕ, ಡಿಎಂಕೆ ಮುಖ್ಯಸ್ಥ ಸ್ಟ್ಯಾಲಿನ್ 'ಇದು ಇಂಡಿಯಾ, ಹಿಂದಿಯಾ ಅಲ್ಲ' ಎಂದಿದ್ದಾರೆ.

'ಹಿಂದಿ ದಿವಸ್' ಹಿಂದೆ ಎದ್ದ ಅಪಸ್ವರ, ಹೇರಿಕೆ ವಿರುದ್ಧದ ದನಿ'ಹಿಂದಿ ದಿವಸ್' ಹಿಂದೆ ಎದ್ದ ಅಪಸ್ವರ, ಹೇರಿಕೆ ವಿರುದ್ಧದ ದನಿ

ಪ್ರಧಾನಿ ಮೋದಿ ಅವರು ಈ ಬಗ್ಗೆ ಸ್ಪಷ್ಟನೆ ನೀಡದೇ ಇದ್ದಲ್ಲಿ, ಮತ್ತೊಂದು ಭಾಷಾ ಯುದ್ಧ ನಡೆಯುತ್ತದೆ ಎಂದು ಎಚ್ಚರಿಸಿರುವ ಸ್ಟ್ಯಾಲಿನ್, 'ಗೃಹ ಮಂತ್ರಿಯವರು ಮಾತುಗಳು ಭಾರತದ ಏಕತೆಗೆ ಧಕ್ಕೆ ತರುವಂತಹವು' ಎಂದು ಹೇಳಿದ್ದಾರೆ.

This is India not Hindia: MK Stalin said to Shah

ಈ ಬಗ್ಗೆ ಕೇಂದ್ರವು ತನ್ನ ಸ್ಪಷ್ಟ ನಿಲವನ್ನು ತಿಳಿಸದೇ ಹೋದರೆ ಡಿಎಂಕೆಯು ಹಿಂದಿ ರಾಷ್ಟ್ರಭಾಷೆಯ ಮಾಡುವ ಹುನ್ನಾರದ ವಿರುದ್ಧ ನಿಲ್ಲುವ ರಾಜ್ಯಗಳನ್ನು ಒಟ್ಟುಗೂಡಿಸಿ ಪ್ರತಿಭಟನೆ ಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕಟ್ಟರ್ ವಿರೋಧಿ ಬಿಜೆಪಿ ಬೆಂಬಲಕ್ಕೆ ನಿಂತರೇ ಮಮತಾ ಬ್ಯಾನರ್ಜಿ?ಕಟ್ಟರ್ ವಿರೋಧಿ ಬಿಜೆಪಿ ಬೆಂಬಲಕ್ಕೆ ನಿಂತರೇ ಮಮತಾ ಬ್ಯಾನರ್ಜಿ?

ತಮಿಳುನಾಡು ಸ್ವಾತಂತ್ರ್ಯಕ್ಕೆ ಮೊದಲಿನಿಂದಲೂ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಲೇ ಬಂದಿದೆ. 1937, 1940 ಮತ್ತು 1965 ರಲ್ಲಿ ತಮಿಳುನಾಡು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ಮಾಡಿತ್ತು.

English summary
DMK leader MK Stalin said to Amit Shah about his Hindi comment that , 'This is India not Hindia'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X