ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಿಂದೂ' ಪದ ವಿದೇಶದಿಂದ ಬಂದಿದ್ದು! ಕಮಲ್ ಹಾಸನ್ ಮತ್ತೆ ವಿವಾದ

|
Google Oneindia Kannada News

ಚೆನ್ನೈ, ಮೇ 18: 'ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ' ಎನ್ನುವ ಮೂಲಕ ಬಹುಸಂಖ್ಯಾತ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ, ರಾಜಕಾರಣಿ ಕಮಲ್ ಹಾಸನ್, ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

"ಹಿಂದೂ ಎಂಬ ಪದ ವಿದೇಶದಿಂದ ಬಂದಿದ್ದು. ವಿದೇಶದವರ್ಯಾರೂ ಅಜ್ಞಾನದಿಂದ ಹೇಳಿದ ಪದವನ್ನು ಒಂದು ಮತಕ್ಕೆ, ಒಂದು ದೇಶಕ್ಕೆ ನೀಡುವುದು ಸರಿಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು: ಕಮಲ್ ಹಾಸನ್ ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು: ಕಮಲ್ ಹಾಸನ್

"ಮೊಘಲರೋ ಅಥವಾ ಭಾರತಕ್ಕೆ ಬಂದ ಇನ್ನ್ಯಾರೋ ಈ ಪದವನ್ನು ನೀಡಿದರು. ಅಲ್ಲಿಯವರೆಗೂ ಇಂಥದೊಂದು ಪದವೇ ಇರಲಿಲ್ಲ. ನಮಗೆ ಸಾಕಷ್ಟು ಗುರುತುಗಳಿರುವಾಗ, ಪದಗಳಿರುವಾಗ ನಾವ್ಯಾಕೆ ವಿದೇಶದಿಂದ ಎರವಲು ಪಡೆದ ಪದವನ್ನು ಒಂದು ಧರ್ಮಕ್ಕೆ ಬಳಸಬೇಕು" ಎಂದು ಅವರು ಪ್ರಶ್ನಿಸಿದ್ದಾರೆ.

ಹಿಂದೂ ಪದ ವಿದೇಶದ್ದು

ಹಿಂದೂ ಪದ ವಿದೇಶದ್ದು

"ಹಿಂದೂ ಎಂಬ ಪದವನ್ನು ಭಾರತದಲ್ಲಿ ಧರ್ಮಕ್ಕೆ, ದೇಶವನ್ನು ಗುರುತಿಸಲು ಬಳಸಲಾಗುತ್ತದೆ. ಆದರೆ ನಮಗೆ ಸಾಕಷ್ಟು ಗುರುತುಗಳಿದ್ದರೂ, ಪದಗಳಿದ್ದರೂ ವಿದೇಶದಿಂದ ಅಜ್ಞಾನದಿಂದ ಉಚ್ಚರಿಸಿದ ಒಂದು ಪದವನ್ನು ಬಳಸುವುದು ಸರಿಯೇ?"-ಕಮಲ್ ಹಾಸನ್

ಎಲ್ಲಾ ಧರ್ಮದಲ್ಲೂ ಉಗ್ರರಿದ್ದಾರೆ: ವರಸೆ ಬದಲಿಸಿದ ಕಮಲ್ ಹಾಸನ್ ಎಲ್ಲಾ ಧರ್ಮದಲ್ಲೂ ಉಗ್ರರಿದ್ದಾರೆ: ವರಸೆ ಬದಲಿಸಿದ ಕಮಲ್ ಹಾಸನ್

ಆಕ್ರೋಶ ಹುಟ್ಟಿಸಿದ್ದ ಗೋಡ್ಸೆ ಹೇಳಿಕೆ

ಆಕ್ರೋಶ ಹುಟ್ಟಿಸಿದ್ದ ಗೋಡ್ಸೆ ಹೇಳಿಕೆ

ಮೇ 13 ರಂದು ತಮಿಳುನಾಡಿನ ಅರವಕುರಿಚಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, "ನಾನೊಬ್ಬ ಹೆಮ್ಮೆಯ ಭಾರತೀಯ. ಆದರೆ ನಾನೊಂದು ಮಾತು ಹೇಳುತ್ತೇನೆ. ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದಿದ್ದರು.

ಎಫ್ ಐಆರ್ ದಾಖಲು

ಎಫ್ ಐಆರ್ ದಾಖಲು

ಸ್ವತಂತ್ರ ಭಾರತದ ಮೊದಲ ಉಗ್ರ ನಾಥೂರಾಂ ಗೋಡ್ಸೆ ಎಂದರೆ ಸಾಕಿತ್ತು. 'ಹಿಂದೂ' ಎಂಬ ಪದ ಬಳಸುವ ಅಗತ್ಯ ಏನಿತ್ತು ಎಂದು ಬಹುಸಂಖ್ಯಾತ ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ತಾವು ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ತಾನು ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ. ಅದರಲ್ಲಿ ಏನೂ ತಪ್ಪಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದರು. ಆದ್ದರಿಂದ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ, ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು.

ಚಪ್ಪಲಿ, ಮೊಟ್ಟೆ, ಕ್ಲಲೆಸೆತ!

ಚಪ್ಪಲಿ, ಮೊಟ್ಟೆ, ಕ್ಲಲೆಸೆತ!

ಈ ಘಟನೆಯ ನಂತರ ಕಮಲ್ ಹಾಸನ್ ಅವರು ಭಾಗವಹಿಸಿದ್ದ ಎರಡು ಸಭೆಗಳಲ್ಲಿ ಒಮ್ಮೆ ಪ್ರೇಕ್ಷಕರು ಚಪ್ಪಲಿ ಎಸೆದ ಮತ್ತು ಇನ್ನೊಂದು ಸಭೆಯಲ್ಲಿ ಕಲ್ಲು, ಮೊಟ್ಟೆ ಎಸೆದ ಘಟನೆ ವರದಿಯಾಗಿತ್ತು. ಈ ಎಲ್ಲಾ ಘಟನೆಗಳ ನಂತರ ತಮ್ಮ ವರಸೆಯನ್ನು ಕೊಂಚ ಬದಲಿಸಿದ್ದ ಕಮಲ್ ಹಾಸನ್, "ಎಲ್ಲ ಧರ್ಮದಲ್ಲೂ ಉಗ್ರರಿದ್ದಾರೆ. ಇತಿಹಾಸವನ್ನು ಒದಿದರೆ ಎಲ್ಲ ಧರ್ಮದಲ್ಲೂ ಉಗ್ರವಾದಿಗಳಿರುವ ಸತ್ಯ ಅರಿವಾಗುತ್ತದೆ" ಎಂದಿದ್ದರು.

English summary
The word Hindu comes from abroad. Mughals give the name 'Hindu', actor turned politician Kamal Haasan in said in his recent controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X