ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಆರ್‌ ತೃತೀಯ ರಂಗಕ್ಕೆ ಕರುಣಾನಿಧಿ ಬಲ

By Manjunatha
|
Google Oneindia Kannada News

ಚೆನ್ನೈ, ಏಪ್ರಿಲ್ 29: ರಾಷ್ಟ್ರೀಯ ಪಕ್ಷಗಳ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಇಂದು ಡಿಎಂಕೆ ಪಕ್ಷದ ಮುಖಂಡ ಮಾಜಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿ ಆದರು.

ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದ ಕೆಸಿಆರ್‌ ಅವರು ಆ ನಂತರ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರೊಂದಿಗೆ ತೃತೀಯ ರಂಗದ ಬಗ್ಗೆ ಚರ್ಚೆ ನಡೆಸಿ ಬೆಂಬಲ ಪಡೆದುಕೊಂಡರು.

ಮೋದಿ ಅಲೆ ತಡೆಯಲು ಕೆಸಿಆರ್‌ಗೆ ದೇವೇಗೌಡ ಬೆಂಬಲಮೋದಿ ಅಲೆ ತಡೆಯಲು ಕೆಸಿಆರ್‌ಗೆ ದೇವೇಗೌಡ ಬೆಂಬಲ

ಕೆಸಿಆರ್‌ ಅವರು ಇತ್ತೀಚೆಗಷ್ಟೆ ಜಾತ್ಯಾತೀತ ಜನತಾದಳ ಪಕ್ಷದ ಅಧ್ಯಕ್ಷ ದೇವೇಗೌಡ ಅವರನ್ನು ಭೇಟಿ ಮಾಡಿ ತೃತೀಯ ರಂಗ ರಚನೆಗೆ ಬೆಂಬಲ ಪಡೆದುಕೊಂಡಿದ್ದರು.

Telangana CM K.Chandrashekhar Rao meets Karunanidhi

ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರದ ಆಡಳಿತದ ಮೇಲೆ ಹಿಡಿತ ಸಾಧಿಸಬೇಕೆಂಬ ದೃಷ್ಠಿಯಿಂದ ಕೆಸಿಆರ್ ಅವರು ಪ್ರಯತ್ನಿಸುತ್ತಿದ್ದು ಇದೇ ಭಾಗವಾಗಿ ಮಮತಾ ಬ್ಯಾನರ್ಜಿ, ಎನ್‌ಸಿಪಿಯ ಶರದ್ ಪವಾರ್‌, ದೇವೇಗೌಡ, ಆರ್‌ಜೆಡಿ ಇನ್ನೂ ಹಲವು ಪಕ್ಷಗಳ ಬೆಂಬಲವನ್ನು ಕೆಸಿಆರ್‌ ಪಡೆದಿದ್ದಾರೆ. ಈಗ ಈ ಪಟ್ಟಿಗೆ ಡಿಎಂಕೆ ಸಹ ಸೇರಿಕೊಂಡಂತಾಗಿದೆ.

English summary
Telangana CM K.Chandrashekhar Rao meets DMK party chief Karunanidhi and DMK party president M.K.Stalin. they talked about third front against national parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X