ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿ ಶುಭಶ್ರೀ ಸಾವು, ಅಕ್ರಮ ಬ್ಯಾನರ್, ಕಮಲ್ ಹಾಸನ್ ಮತ್ತು ಮೋದಿ..!

|
Google Oneindia Kannada News

ಚೆನ್ನೈ, ಅಕ್ಟೋಬರ್ 03: ಚೆನ್ನೈಯಲ್ಲಿ ಅಕ್ರಮ ಬ್ಯಾನರ್ ನಿಂದಾಗಿ ಟೆಕ್ಕಿ ಶುಭಶ್ರೀ ದಾರುಣ ಸಾವು ಕಂಡು ತಿಂಗಳಾಗಿಲ್ಲ. ಆದರೆ ಅಕ್ರಮ ಬ್ಯಾನರ್ ಸಂಸ್ಕೃತಿಯನ್ನು ನಿಷೇಧಿಸಬೇಕೆಂಬ ಸ್ಪಷ್ಟ ಸಂದೇಶ ನೀಡಿದ್ದ ಈ ಘಟನೆಯನ್ನು ಧಿಕ್ಕರಿಸಿ, ತಮಿಳುನಾಡು ಸರ್ಕಾರವೇ ಬ್ಯಾನರ್ ಪರವಾಗಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

ಶುಭಶ್ರೀ ಸಾವು, ಅಕ್ರಮ ಬ್ಯಾನರ್ ಮತ್ತು ತಮಿಳುನಾಡು ಸರ್ಕಾರದ ನಡೆ ಎಲ್ಲವುಗಳ ಕುರಿತು ನಟ ಕಮಲ್ ಹಾಸ್ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೊದಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಶುಭಶ್ರೀ ಸಾವಿಗೂ, ಕಮಲ್ ಹಾಸನ್ ಅವರು ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೂ ಏನು ಸಂಬಂಧ...?

ಆಗಿದ್ದಿಷ್ಟೆ, ಪ್ರಧಾನಿ ನರೇಂದ್ರ ಮೋದಿಯವರ ಬ್ಯಾನರ್ ಗಳನ್ನೇ ಚೆನ್ನೈ ಮತ್ತು ಹೊರವಲಯಗಳ ರಸ್ತೆಗಳ ಇಕ್ಕೆಲಗಳಲ್ಲೆ ಹಾಕಲು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟಿನ ಅನುಮತಿ ಕೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

ಈ ಕುರಿತು ಟ್ವೀಟ್ ಮಾಡಿರುವ ನಟ ಕಮಲ್ ಹಾಸನ್, ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿಗೆ ಕಮಲ್ ಹಾಸನ್ ತರಾಟೆ

ಪ್ರಧಾನಿಗೆ ಕಮಲ್ ಹಾಸನ್ ತರಾಟೆ

"ಗೌರವಾನ್ವಿತ ಪ್ರಧಾನಿಯವರೇ, ತಮಿಳುನಾಡು ಮತ್ತು ತಮಿಳರು ಶುಭಶ್ರೀ ಸಾವಿನ ನಷ್ಟವನ್ನು ಬ್ಯಾನರ್ ಗಳನ್ನು ಬ್ಯಾನ್ ಮಾಡುವ ಮೂಲಕ ತುಂಬಲಯ ಯತ್ನಿಸುತ್ತಿದ್ದರೆ, ತಮಿಳುನಾಡು ಸರ್ಕಾರ ನಿಮ್ಮ(ನರೇಂದ್ರ ಮೋದಿ) ಬ್ಯಾನರ್ ಗಳನ್ನು ಹಾಕಲು ಮದ್ರಾಸ್ ಸರ್ಕಾರದ ಅನುಮತಿ ಕೇಳುತ್ತಿದೆ" ಎಂದು ವ್ಯಂಗ್ಯವಾಗಿ ಕಮಲ್ ಹಾಸ್ ಟ್ವೀಟ್ ಮಾಡಿದ್ದಾರೆ.

ಶುಭಶ್ರೀ, ರಘು ಬಲಿಯಾಗಿದ್ದು ಒಂದೇ ರೀತಿ! ಮರುಕಳಿಸಿತು ಅದೇ ದೃಶ್ಯಶುಭಶ್ರೀ, ರಘು ಬಲಿಯಾಗಿದ್ದು ಒಂದೇ ರೀತಿ! ಮರುಕಳಿಸಿತು ಅದೇ ದೃಶ್ಯ

ನೀವೇ ಮೊದಲ ಹೆಜ್ಜೆ ಇಡಿ

ನೀವೇ ಮೊದಲ ಹೆಜ್ಜೆ ಇಡಿ

"ನೀವು(ನರೇಂದ್ರ ಮೋದಿ) ನಿಜಕ್ಕೂ ಈ ಅಕ್ರ ಬ್ಯಾನರ್ ಗಳನ್ನು ನಿಷೇಧಿಸುವಲ್ಲಿ ಮೊದಲ ಹೆಜ್ಜೆ ಇಟ್ಟರೆ ಅದು ನಿಮಗೆ ತಮಿಳರ ಭಾವನೆಗಳ ಮೇಲಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ನಿಮಗೆ ಅತೀ ಹೆಚ್ಚು ಜನಪ್ರಿಯತೆಯನ್ನೂ ಅದು ತಂದುಕೊಡುತ್ತದೆ. ಜೈ ಹಿಂದ್" - ಕಮಲ್ ಹಾಸ್

ಮೋದಿ ಬ್ಯಾನರ್ ಹಾಕುತ್ತಿರೋದ್ಯಾಕೆ?

ಮೋದಿ ಬ್ಯಾನರ್ ಹಾಕುತ್ತಿರೋದ್ಯಾಕೆ?

ಅಕ್ಟೋಬರ್ ಕೊನೆಯಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಗ್ಸೈ ಜಿನ್ಪಿಂಗ್ ಅವರು ಭೇಟಿಯಾಗಲಿದ್ದು, ಆದ್ದರಿಂದ ಮೋದಿ ಮತ್ತು ಜಿನ್ಪಿಂಗ್ ಅವರ ಬ್ಯಾನರ್ ಗಳನ್ನು ಚೆನ್ನೈ ಮತ್ತು ಮಹಾಬಲಿಪುರಂನಲ್ಲಿ ಹಾಕಲು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ನ ಅನುಮತಿ ಕೇಳಿದೆ.

ಶುಭಶ್ರೀ ಸಾವು: ಕೊನೆಗೂ ಸಿಕ್ಕಿಬಿದ್ದ ರಾಜಕಾರಣಿ ಜಯಗೋಪಾಲ್ಶುಭಶ್ರೀ ಸಾವು: ಕೊನೆಗೂ ಸಿಕ್ಕಿಬಿದ್ದ ರಾಜಕಾರಣಿ ಜಯಗೋಪಾಲ್

ಟೆಕ್ಕಿ ಶುಭಶ್ರೀ ಧಾರುಣ ಸಾವು

ಟೆಕ್ಕಿ ಶುಭಶ್ರೀ ಧಾರುಣ ಸಾವು

ಸೆಪ್ಟೆಂಬರ್ 12 ರಂದು ಸಂಜೆ ಶುಭಶ್ರೀ ಎಂಬ 23 ವರ್ಷ ವಯಸ್ಸಿನ ಸಾಫ್ಟ್ ವೇರ್ ಇಂಜಿನಿಯರ್ ಆಫೀಸಿನಿಂದ ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಹಾಕಿದ್ದ ಅಕ್ರಮ ಬ್ಯಾನರ್ ಆಕೆಯ ಮೇಲೆ ಬಿದ್ದು, ಅದೇ ಹೊತ್ತಿಗೆ ಟ್ರಕ್ ವೊಂದು ಆಕೆಯ ಮೇಲೆ ಹರಿದ ಪರಿಣಾಮ ದಾರುಣ ಸಾವು ಕಂಡಿದ್ದರು. ಈ ಘಟನೆಯ ನಂತರ ಮದ್ರಾಸ್ ಹೈಕೋರ್ಟ್ ಬ್ಯಾನರ್ ಸಂಸ್ಕೃತಿಗೆ ನಿರ್ಬಂಧ ಹೇರಿತ್ತು. ಆದರೆ ಈಗ ಸರ್ಕಾರವೇ ಬ್ಯಾನರ್ ಹಾಕಲು ಕೋರ್ಟಿನ ಅನುಮತಿ ಕೇಳುತ್ತಿದೆ.

English summary
Actor Kamal Haasan blames Tamil Nadu Government And PM Narendra Modi for Illegal Banner Culture, Aand Remembers Techie Subhasri death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X