ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್ ಮೆಟ್ಟಿಲೇರಿದ್ದ ಟಿಸಿಎಸ್ ಗರ್ಭಿಣಿ ಉದ್ಯೋಗಿ ವಜಾ ರದ್ದು

By Kiran B Hegde
|
Google Oneindia Kannada News

ಚೆನ್ನೈ, ಜ. 21: ದೇಶದ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಕಂಪನಿ ಎಂಬ ಹೆಗ್ಗಳಿಕೆ ಪಡೆದಿರುವ ಟಿಸಿಎಸ್ ತನ್ನ ಹಲವು ಸಾವಿರ ಉದ್ಯೋಗಿಗಳಿಗೆ ನೀಡಿದ್ದ ಪಿಂಕ್ ಸ್ಲಿಪ್ ಈಗಾಗಲೇ ವಾಪಸ್ ಪಡೆದಿದೆ. ಇದರ ಬೆನ್ನಲ್ಲೇ ವಜಾ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಗರ್ಭಿಣಿ ಉದ್ಯೋಗಿಯನ್ನೂ ವಾಪಸ್ ಪಡೆದಿದೆ.

ದೂರುದಾರ ಮಹಿಳೆಯ ವಜಾ ಆದೇಶ ಹಿಂಪಡೆದಿರುವುದಾಗಿ ಮದ್ರಾಸ್ ಹೈ ಕೋರ್ಟ್‌ಗೆ ಟಿಸಿಎಸ್ ಕಂಪನಿ ಹೇಳಿಕೆ ನೀಡಿದೆ. [ಕೆಲಸವನ್ನು ಪ್ರೀತಿಸಿ, ಕಂಪನಿಯನ್ನಲ್ಲ]

tcs

ಕಂಪನಿಯು ತನ್ನ ಉದ್ಯೋಗಿಯಾಗಿದ್ದ ಮಹಿಳೆಯೋರ್ವರನ್ನು ವಜಾಗೊಳಿಸಿ 2014ರ ಡಿಸೆಂಬರ್ 22ರಂದು ಆದೇಶ ನೀಡಿತ್ತು. ಇದನ್ನು ವಿರೋಧಿಸಿ ಮಹಿಳೆ ಚೆನ್ನೈ ಹೈ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ]

ಟಿಸಿಎಸ್ ಕಂಪನಿಯು ತನ್ನನ್ನು ವಜಾಗೊಳಿಸುವ ಮೂಲಕ 1947ರ ಕೈಗಾರಿಕಾ ವಿವಾದಗಳ ಕಾಯಿದೆಯನ್ನು ಉಲ್ಲಂಘಿಸಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈ ಕೋರ್ಟ್ 2015ರ ಜ. 13ರಂದು ಕಂಪನಿಯ ವಜಾ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. [ಉದ್ಯೋಗಿಗಳಿಗೆ ಶೇ. 100 ಬೋನಸ್ ಘೋಷಿಸಿದ ಟಿಸಿಎಸ್]

English summary
Tata Consultancy Services (TCS) has revoked the termination of the pregnant woman employee who had moved Madras high court against company decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X