ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೀಗ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರ ಅಲ್ಲ, ತಮಿಳುನಾಡು

|
Google Oneindia Kannada News

ಚೆನ್ನೈ, ಮೇ 12: ತಮಿಳುನಾಡು ದೇಶದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯವಾಗಿ ಬದಲಾಗುತ್ತಿದೆ. ಕೊವಿಡ್ ಹರಡುವಿಕೆಯಲ್ಲಿ ಇಷ್ಟು ದಿನ ಒಂದು ಹಂತಕ್ಕೆ ನಿಯಂತ್ರಣದಲ್ಲಿದ್ದ ತಮಿಳುನಾಡು, ಈಗ ಹಳಿ ತಪ್ಪಿದೆ. ನಿನ್ನೆಯ ವರದಿ ಬಳಿಕ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 8 ಸಾವಿರಕ್ಕೆ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ 798 ಹೊಸ ಕೇಸ್‌ಗಳು ರಾಜ್ಯದಲ್ಲಿ ದಾಖಲಾಗಿದೆ. ಇದು ರಾಜ್ಯದಲ್ಲಿ ದಿನವೊಂದರಲ್ಲಿ ದಾಖಲಾದ ಹೆಚ್ಚು ಪ್ರಕರಣಗಳು ಎಂದು ಅಂಕಿ ಅಂಶಗಳು ಹೇಳುತ್ತಿದೆ.

ಕಳೆದ ಹತ್ತು ದಿನಗಳಿಂದ ತಮಿಳುನಾಡಿನ ಪರಿಸ್ಥಿತಿ ನೋಡುತ್ತಿದ್ದರೆ, ದೇಶದ ಮತ್ತೊಂದು ಹಾಟ್‌ಸ್ಪಾಟ್‌ ರಾಜ್ಯವೆನಿಸಿಕೊಳ್ಳುತ್ತಿದೆ. ಈವರೆಗೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗಿದೆ. ಠಾಕ್ರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 22 ಸಾವಿರ ದಾಟಿದೆ. ಈಗ ತಮಿಳುನಾಡು ಮಹಾರಾಷ್ಟ್ರವನ್ನು ಅನುಸರಿಸುತ್ತಿದೆ.

ತಮಿಳುನಾಡಿನಲ್ಲಿ ವೇಗ ಹೆಚ್ಚಿಸಿದ ಮಹಾಮಾರಿ ಕೊರೊನಾ, ಸಂಕಷ್ಟದಲ್ಲಿ ಚೆನ್ನೈತಮಿಳುನಾಡಿನಲ್ಲಿ ವೇಗ ಹೆಚ್ಚಿಸಿದ ಮಹಾಮಾರಿ ಕೊರೊನಾ, ಸಂಕಷ್ಟದಲ್ಲಿ ಚೆನ್ನೈ

tamilnadu-reports-the-maximum-cases-yesterday

ಪ್ರಸ್ತುತ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8002ಕ್ಕೆ ಏರಿದೆ. ಅದರಲ್ಲಿ 5898 ಪ್ರಕರಣಗಳು ಸಕ್ರಿಯವಾಗಿದೆ. 2051 ಜನರು ಚೇತರಿಕೆ ಕಂಡಿದ್ದಾರೆ. 53 ಜನರು ಈವರೆಗೂ ಸೋಂಕಿನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ಚೆನ್ನೈ ನಗರದಲ್ಲೇ ಈವರೆಗೂ 4371 ಕೇಸ್ ದಾಖಲಾಗಿದೆ.

ತಮಿಳುನಾಡಿನಲ್ಲಿ ಮೇ 3ರ ನಂತರದ ಅಂಕಿ ಅಂಶ ಆತಂಕ ಹೆಚ್ಚಿಸಿದೆ. ಮುಂದಿನ ದಿನಗಳ ಬಗ್ಗೆ ಭಯ ಹುಟ್ಟಿಸುತ್ತಿದೆ.
* ಮೇ 10 ರಂದು 669 ಕೇಸ್
* ಮೇ 9 ರಂದು 526 ಕೇಸ್
* ಮೇ 8 ರಂದು 600 ಕೇಸ್
* ಮೇ 7 ರಂದು 580 ಪ್ರಕರಣ
* ಮೇ 6 ರಂದು 771 ಕೇಸ್
* ಮೇ 5 ರಂದು 508 ಪ್ರಕರಣ
* ಮೇ 4 ರಂದು 527 ಕೇಸ್
* ಮೇ 3 ರಂದು 266 ಜನರಿಗೆ ಸೋಂಕು ದೃಢಪಟ್ಟಿದೆ.

ಈವರೆಗೂ ರಾಜ್ಯದಲ್ಲಿ 2,54,899 ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 2,45,562 ಜನರ ಫಲಿತಾಂಶ ನೆಗಿಟಿವ್ ಬಂದಿದೆ. ಇನ್ನು 1335 ಜನರ ಫಲಿತಾಂಶ ಬಂದಿಲ್ಲ. ತಮಿಳುನಾಡಿನಲ್ಲಿ 37 ಸರ್ಕಾರಿ ಹಾಗೂ 16 ಖಾಸಗಿ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

English summary
798 people in TN confirmed positive for Covid-19 infection Yesterday. The total infected figure crosses the eight thousand mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X