ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ 1562 ಕೊರೊನಾ ಕೇಸ್, ಪಂಜಾಬ್‌ನಲ್ಲಿ 8 ತಿಂಗಳು ಮಗು ಸಾವು

|
Google Oneindia Kannada News

ಚೆನ್ನೈ, ಜೂನ್ 9: ಮಹಾರಾಷ್ಟ್ರ ಬಿಟ್ಟರೆ ದೇಶದಲ್ಲಿ ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ತಮಿಳುನಾಡಿನಲ್ಲಿ ನಿನ್ನೆಯೂ ಕೊರೊನಾ ಕೇಸ್‌ಗಳು ಹೆಚ್ಚು ವರದಿಯಾಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 1562 ಜನರಿಗೆ ಕೊವಿಡ್ ಸೋಂಕು ತಗುಲಿದೆ.

ಈ ಮೂಲಕ ತಮಿಳುನಾಡಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33299 ದಾಟಿದೆ. ಭಾನುವಾರ 1515 ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯಕ್ಕೆ ದಿನವೊಂದರಲ್ಲಿ ದಾಖಲಾದ ಗರಿಷ್ಠ ಕೇಸ್ ಇದಾಗಿತ್ತು. ಸೋಮವಾರ 1562 ಕೇಸ್ ಪತ್ತೆಯಾಗಿದ್ದು, ಇದು ಈವರೆಗಿನ ದೊಡ್ಡ ಸಂಖ್ಯೆಯಾಗಿದೆ.

ಚೆನ್ನೈವೊಂದರಲ್ಲಿ 1149 ಕೇಸ್ ವರದಿಯಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಿನ್ನೆ 17 ಜನರು ಸಾವನ್ನಪ್ಪಿದ ಕಾರಣ, ರಾಜ್ಯದಲ್ಲಿ ಕೊವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 286ಕ್ಕೆ ಏರಿದೆ.

ಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ

tamilnadu-reports-1562-fresh-cases-state-s-tally-now-33228

ಜೂನ್ 8ರ ವರದಿಯಲ್ಲಿ ಹನ್ನೆರಡು ಜನ ವಿದೇಶಿಗರಿಗೆ ಸೋಂಕು ತಗುಲಿದೆ. ಕತಾರ್‌ನಿಂದ 9 ಹಾಗೂ ಕುವೈತ್‌ನಿಂದ ಮೂವರು ರಾಜ್ಯಕ್ಕೆ ಬಂದಿದ್ದವರು. ಪ್ರಸ್ತುತ ತಮಿಳುನಾಡಿನಲ್ಲಿ 15,413 ಕೇಸ್‌ಗಳು ಸಕ್ರಿಯವಾಗಿದೆ. 17,527 ಜನರು ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ.

ಪಂಜಾಬ್‌ನ ಅಮೃತಸರ್‌ದಲ್ಲಿ 8 ತಿಂಗಳ ಮಗು ಕೊರೊನಾ ವೈರಸ್‌ಗೆ ಬಲಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೃತಸರದ ಗೋಪಾಲ್ಪುರ ಮಂಜ್ವಿಂದ್ ಗ್ರಾಮದ ಮಗುವಿಗೆ ತೀವ್ರವಾದ ಜ್ವರ, ಕೆಮ್ಮು, ಅತಿಸಾರ ಕಾಣಿಸಿಕೊಂಡಿತ್ತು. ನಂತರ ಮಗುವನ್ನು ಅಮೃತಸರ್‌ದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ನಂತರ ಕೊಒರನಾ ತಗುಲಿರುವುದು ಖಚಿತವಾಗಿತ್ತು. ಕೂಡಲೇ ಮಗುವನ್ನು ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಮಗು ಸಾವನ್ನಪ್ಪಿದೆ.

English summary
Tamil Nadu has reported 1,562 fresh cases of coronavirus, after which the state's tally has mounted to 33,228. The state has also reported 17 Covid deaths in the same period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X