ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಡ್ಯಾಂ: ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು

By Kiran B Hegde
|
Google Oneindia Kannada News

ಚೆನ್ನೈ, ನ. 18: ಮೇಕೆದಾಟು ಪ್ರದೇಶದಲ್ಲಿ ಕಾವೇರಿ ನದಿಗೆ ಕರ್ನಾಟಕ ಸರ್ಕಾರದ ಡ್ಯಾಂ ನಿರ್ಮಾಣ ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. [ಮೇಕೆದಾಟುವಿನಲ್ಲಿ ಕುಡಿಯುವ ನೀರಿಗಾಗಿ ಡ್ಯಾಂ]

ಕರ್ನಾಟಕದ ಸರ್ಕಾರದ ಉದ್ದೇಶಿತ ಯೋಜನೆಯು ಕಾವೇರಿ ಐತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಉದ್ದೇಶಿತ ಯೋಜನೆ ಕೈಬಿಡಲು ಕರ್ನಾಟಕ ಸರ್ಕಾರಕ್ಕೆ ಆದೇಶಿಸಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.

paneer

ಡ್ಯಾಂ ವಿರೋಧಿ ಪ್ರತಿಭಟನೆಗೆ ಪಿಎಂಕೆ ಸಾಥ್
ಡ್ಯಾಂ ಯೋಜನೆಗೆ ತಮಿಳುನಾಡಿನಲ್ಲಿ ವಿರೋಧ ಹೆಚ್ಚುತ್ತಿದೆ. ಯೋಜನೆ ವಿರುದ್ಧ ನ. 22ರಂದು ತಮಿಳುನಾಡಿನ ಕಾವೇರಿ ನದಿ ತೀರದ ಜಿಲ್ಲೆಗಳ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಪಟ್ಟಳಿ ಮಕ್ಕಳ್ ಕಚ್ಚಿ (ಪಿಎಂಕೆ) ನಿರ್ಧರಿಸಿದೆ. [ಮೇಕೆದಾಟು ಡ್ಯಾಂಗೆ ತಮಿಳುನಾಡು ಅಡ್ಡಗಾಲು]

mekedatu

ಪಿಎಂಕೆ ಪಕ್ಷದ ನದಿ ತೀರದ ಜಿಲ್ಲೆಗಳಾದ ನಾಗಪಟ್ಟಿನಂ, ತಿರುವರುರ್ ಹಾಗೂ ತಂಜಾವೂರ್ ಜಿಲ್ಲೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ತಮಿಳುನಾಡು ರಾಜ್ಯದ ರಾಜಕೀಯ ಪಕ್ಷಗಳೆಲ್ಲವೂ ಒಂದಾದರೆ ಮಾತ್ರ ಯೋಜನೆಗೆ ತಡೆಯೊಡ್ಡಬಹುದು ಎಂದು ಪಿಎಂಕೆ ಸಂಸ್ಥಾಪಕ ರಾಮದೊಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು ಮೇಕೆದಾಟು ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ 50 ಟಿಎಂಸಿ ಸಾಮರ್ಥ್ಯದ ಎರಡು ಜಲಾಶಯಗಳಿಂದ ತಮಿಳುನಾಡಿನ ನದಿ ತೀರದ ಜಿಲ್ಲೆಗಳು ಮರುಭೂಮಿಯಾಗಿ ಮಾರ್ಪಡುತ್ತವೆ ಎಂದು ಆರೋಪಿಸಿದ್ದಾರೆ. [ಮೇಕೆದಾಟು ಜಲವಿದ್ಯುತ್ ಯೋಜನೆ ಸ್ಥಗಿತವಿಲ್ಲ]

ರಸ್ತೆ, ರೈಲು ತಡೆ: ನಾಗಪಟ್ಟಿನಂ, ತಿರುವರುರ್ ಹಾಗೂ ತಂಜಾವೂರ್ ಜಿಲ್ಲೆಗಳ ರೈತರು ನ. 22ರಂದು ರೈಲು ತಡೆ ಹಾಗೂ ರಸ್ತೆ ತಡೆ ನಡೆಸಲಿದ್ದು, ಸ್ಥಳೀಯ ಪ್ರದೇಶದಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದು ರಾಮದೊಸ್ ತಿಳಿಸಿದ್ದಾರೆ.

ರಾಜ್ಯದ ಮತ್ತೊಂದು ಪ್ರಮುಖ ಪಕ್ಷ ಎಂಡಿಎಂಕೆ ಈಗಾಗಲೇ ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧರಿಸಿದೆ. ಎಂಡಿಎಂಕೆ ಹಾಗೂ ಪಿಎಂಕೆ ಎರಡೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಅಂಗಪಕ್ಷಗಳು ಎಂಬುದು ಗಮನಾರ್ಹ ಸಂಗತಿ.

English summary
Tamilnadu government decided to go to supreme court against proposed Cauvery reservoir projects by Karnataka in Mekedatu. PMK has decided to join protest organised by Cauvery delta farmers of Tamilnadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X