ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಏರಿಕೆಯೇ ಇಲ್ಲದ ಬಜೆಟ್ ಮಂಡಿಸಿದ ತಮಿಳುನಾಡು ಸರ್ಕಾರ!

|
Google Oneindia Kannada News

ಚೆನ್ನೈ, ಫೆಬ್ರವರಿ 08: ಕರ್ನಾಟಕದಂತೆ ತಮಿಳುನಾಡು ರಾಜ್ಯ ಸಹ ಇಂದು 2019-20ನೇ ಸಾಲಿನ ಬಜೆಟ್ ಅನ್ನು ಮಂಡಿಸಿತು. ಜನಪ್ರಿಯ ಬಜೆಟ್ ಮಂಡಿಸಿರುವ ತಮಿಳುನಾಡು ಎಐಎಡಿಎಂಕೆ ಸರ್ಕಾರ, ಯಾವುದೇ ಹೊಸ ತೆರಿಗೆ ಹಾಕದೆ. ಬೆಲೆ ಏರಿಕೆ ಮಾಡದೆ ಬಜೆಟ್ ಮಂಡಿಸಿದೆ.

ತಮಿಳುನಾಡಿನ ಬಜೆಟ್‌ನ ಒಟ್ಟು ಗಾತ್ರ 2,08,671 ಕೋಟಿ ರೂಪಾಯಿ ಆಗಿದೆ. ರಾಜ್ಯದ ಈ ಹಣಕಾಸು ವರ್ಷದ ನಿರೀಕ್ಷಿತ ಆದಾಯ 1,42,267 ಕೋಟಿ ರೂಪಾಯಿ ಆಗಿದೆ. ಈ ಜನಪ್ರಿಯ ಬಜೆಟ್ 44,176 ಕೋಟಿಯ ಖೋತಾ ಬಜೆಟ್ ಆಗಿದೆ.

ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ

ಬಜೆಟ್‌ನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ತಮಿಳುನಾಡಿನ ಹಣಕಾಸು ಮಂತ್ರಿ ಓ ಪನ್ನೀರ್ ಸೆಲ್ವಂ ಅವರು ನೀಡಿದ್ದಾರೆ. ದಿವಂಗತ ಜಯಲಲಿತಾ ಅವರ ಭಾವ ಚಿತ್ರ ಮುದ್ರಿತವಾಗಿದ್ದ ಸೂಟ್‌ಕೇಸ್‌ ಅನ್ನು ಸದನಕ್ಕೆ ತಂದಿದ್ದ ಅವರು, ಜಯಲಲಿತಾ ಅವರ ಮಾದರಿಯಲ್ಲಿಯೇ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದ್ದಾರೆ.

Tamilnadu government presents budget for 2019-20

ತಮಿಳುನಾಡು ಸರ್ಕಾರದ ಬಜೆಟ್‌ನ ಮುಖ್ಯಾಂಶಗಳು ಇಲ್ಲಿವೆ...

* ನಿವೃತ್ತ ನೌಕರರಿಗೆ ವಿಶೇಷ ಪಿಂಚಣಿ, ಇದಕ್ಕಾಗಿ 29,000 ಕೋಟಿ ಮೀಸಲು. ಸರ್ಕಾರಿ ನೌಕರರ ಸಂಬಳದಲ್ಲಿ ಹೆಚ್ಚಳ ಇದಕ್ಕಾಗಿ 55,399 ಕೋಟಿ ಮೀಸಲು.

* ಉಚಿತ ಸೀರೆ ಮತ್ತು ಪಂಚೆ ವಿತರಣೆಗೆ 491 ಕೋಟಿ ಅನುದಾನ. ಆಹಾರ ಸಬ್ಸಿಡಿಗೆ 6000 ಕೋಟಿ, ಪ್ರವಾಸೋದ್ಯಮ ಇಲಾಖೆಗೆ 788 ಕೋಟಿ.

ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ

* 9975 ಮಂದಿಯನ್ನು ಸರ್ಕಾರಿ ಉದ್ಯೋಗಕ್ಕೆ ಈ ವರ್ಷ ನೇಮಕ ಮಾಡಿಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ. 500 ವಿದ್ಯುತ್ ಚಾಲಿತ ಬಸ್ಸುಗಳ ಖರೀದಿ.

* 980 ಕೋಟಿ ವೆಚ್ಚದಲ್ಲಿ 1 ಲಕ್ಷ ಮನೆ ನಿರ್ಮಾಣ ಮತ್ತು ಅವನ್ನು ಗಾಜಾ ಚಂಡಮಾರುತ ಸಂತ್ರಸ್ಥರಿಗೆ ವಿತರಣೆ. 12,000 ಕೋಟಿ ಆರೋಗ್ಯಕ್ಕೆ, 10,500 ಕೋಟಿ ಕೃಷಿಗೆ ನೀಡಲಾಗಿದೆ.

* ಚೆನ್ನೈ ನಲ್ಲಿ ಅಂಡರ್‌ಗ್ರೌಂಡ್ ಪಾರ್ಕಿಂಗ್ ನಿರ್ಮಾಣ ಮಾಡಲು 2000 ಕೋಟಿ ಅನುದಾನ ನೀಡಲಾಗಿದೆ. ಇದನ್ನು ಖಾಸಗಿ-ಸರ್ಕಾರ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ.

ಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

* ಇನ್ನೂ ಹಲವು ಜನಪ್ರಿಯ ಘೋಷಣೆಗಳನ್ನು ತಮಿಳುನಾಡು ಸರ್ಕಾರ ಘೋಷಿಸಿದ್ದು, ಯಾವುದೇ ಹೊಸ ತೆರಿಗೆ ಹೇರಿಲ್ಲ, ಅಲ್ಲದೆ ಯಾವ ತೆರಿಗೆಯನ್ನೂ ಏರಿಕೆಯೂ ಮಾಡಿಲ್ಲ.

English summary
Tamilnadu government presents its budget for 2019-20. It is a 14,300 crore rupees revenue deficit budget. Budget has some popular schemes for the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X