ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ 'ಅಮ್ಮ' ದ್ವಿಚಕ್ರ ವಾಹನ ಯೋಜನೆ

By Manjunatha
|
Google Oneindia Kannada News

ಚೆನ್ನೈ, ಜನವರಿ 22: ಅಮ್ಮ ಜಯಲಲಿತ ನಿಧನರಾದ ಬಳಿಕವೂ ಅವರ ಖ್ಯಾತ ಅಮ್ಮ ಯೋಜನೆಗಳ ಸರಣಿಯನ್ನು ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ಮುಂದುವರೆಸಿದೆ.

ಅಮ್ಮ ಕ್ಯಾಂಟೀನ್, ಅಮ್ಮ ಟಿವಿ, ಅಮ್ಮ ಸಿಮೆಂಟ್, ಅಮ್ಮ ನೀರು, ಅಮ್ಮ ಲ್ಯಾಪ್‌ಟಾಪ್, ಅಮ್ಮ ಬೇಬಿ ಕೇರ್ ಕಿಟ್‌, ಅಮ್ಮ ಉಪ್ಪು, ಅಮ್ಮ ಮೊಬೈಲ್.... ಎಲ್ಲವುಗಳ ಬಳಿಕ ಈಗ ಅಮ್ಮ ದ್ವಿಚಕ್ರವಾಹನ ಯೋಜನೆಯನ್ನು ತಮಿಳುನಾಡು ಸರ್ಕಾರ ಜಾರಿಗೆ ತರಲಿದೆ.

ಅಮ್ಮ ದ್ವಿಚಕ್ರ ವಾಹನ ಯೋಜನೆಯಡಿ ಮಹಿಳೆಯರು ದ್ವಿಚಕ್ರ ವಾಹನ ಖರೀದಿಸಿದರೆ ಅದರ ಒಟ್ಟು ಹಣದ ಶೇ.50ರಷ್ಟನ್ನು ಸರ್ಕಾರ ಭರಿಸಲಿದೆ. ಈ ಯೋಜನೆಯು ಫೆಬ್ರುವರಿ 24ರಿಂದ ತಮಿಳುನಾಡಿನಾದ್ಯಂತ ಜಾರಿಗೆ ಬರಲಿದೆ. ಅಂದೇ ಜಯಲಲಿತಾ ಅವರ 70ನೇ ಹುಟ್ಟುಹಬ್ಬ ಕೂಡ ಇದೆ.

Tamilnadu government introducing 'Amma two wheeler scheme'

ಹೊಸ ಯೋಜನೆಯನ್ವಯ 125 ಸಿಸಿ ಸಾಮರ್ಥ್ಯದ ವಾಹನವನ್ನು ಮಹಿಳೆಯರು ಖರೀದಿಸಬಹುದಾಗಿದ್ದು ಅದರ ಒಟ್ಟು ಮೌಲ್ಯದ ಶೇ 50ರಷ್ಟನ್ನು ಸರ್ಕಾರ ಭರಿಸಲಿದೆ ಆದರೆ ಅವು ಮೊಪೆಡ್‌ಗಳೇ ಆಗಿರಬೇಕು, ಗೇರ್ ಹೊಂದಿರುವ ವಾಹನಗಳಾಗಿರಬಾರದು.

ವಾರ್ಷಿಕ ಆದಾಯ 2.50 ಲಕ್ಷಕ್ಕಿಂತಲೂ ಕಡಿಮೆ ಇರುವ 18-40 ವಯಸ್ಸಿನ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗಲಿದೆ ಮತ್ತು ಒಂದು ಕುಟುಂಬದಿಂದ ಒಬ್ಬ ವ್ಯಕ್ತಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಎಂದು ಸರ್ಕಾರ ಹೇಳಿದೆ.

English summary
Tamilnadu government introduced new 'Amma two wheeler scheme' for women. Government will give 50% subsidy to women on purchase of two wheeler.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X