ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಶಾ ವಿರುದ್ಧ ಭಾಷಣ ಮಾಡಿದ್ದಕ್ಕೆ ತಮಿಳು ಸಾಹಿತಿ ಬಂಧನ

|
Google Oneindia Kannada News

ಚೆನ್ನೈ, ಜನವರಿ 2: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ನೆಳ್ಳೈ ಕಣ್ಣನ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

'ಪೌರತ್ವ ತಿದ್ದುಪಡಿ ಕಾಯ್ದೆ ಎನ್‌ಆರ್‌ಸಿ ಜಾರಿ, ತ್ರಿವಳಿ ತಲಾಖ್ ಜಾರಿ ಇಂತಹ ವಿವಾದಾತ್ಮಕ ಹೆಜ್ಜೆಯನ್ನು ಇಟ್ಟರೂ ಮುಸ್ಲಿಮರು ಮೋದಿ ಮತ್ತು ಶಾರನ್ನು ಯಾಕೆ ಸಾಯಿಸಿಲ್ಲ' ಎಂದು ಕಣ್ಣನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಎಸ್‌ಟಿಪಿಐ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಸಾಹಿತಿ ಕಣ್ಣನ್ ಮಾತನಾಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪಗಳು ಎದುರಾಗಿದ್ದವು.

ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಹೀಗಾಗಿ ಕಣ್ಣನ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ತಮಿಳುನಾಡು ಬಿಜೆಪಿ ಘಟಕ ಪ್ರತಿಭಟನೆ ನಡೆಸಿತ್ತು.

Narendra modi

ರಾಜ್ಯ ಬಿಜೆಪಿ ಪ್ರತಿಭಟನೆ ಬಳಿಕ ಸ್ಥಳೀಯ ಮುಖಂಡರ ದೂರು ಆಧರಿಸಿ ಕಣ್ಣನ್ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿತ್ತು.

ಬೆಂಗಳೂರು, ತುಮಕೂರಿಗೆ ಮೋದಿ, ಹಲವೆಡೆ ಸಂಚಾರ ಮಾರ್ಗ ಬದಲಾವಣೆಬೆಂಗಳೂರು, ತುಮಕೂರಿಗೆ ಮೋದಿ, ಹಲವೆಡೆ ಸಂಚಾರ ಮಾರ್ಗ ಬದಲಾವಣೆ

ಆದರೆ ಆರೋಪಿ ಕಣ್ಣನ್ ಅವರನ್ನು ಬಂಧಿಸಿಲ್ಲ, ಸರ್ಕಾರ ಬಗ್ಗೆ ಸೂಕ್ತ ಗಮನವಹಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಮತ್ತೆ ಮರೀನಾ ಬೀಚಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಕೊನೆಗೂ ಬಿಜೆಪಿ ಒತ್ತಡಕ್ಕೆ ಮಣಿಸಿದಿರುವ ಎಐಎಡಿಎಂಕೆ ಸರ್ಕಾರ ಕೊನೆಗೂ ಒತ್ತಡಕ್ಕೆ ಮಣಿದು ಆರೋಪಿ ಸಾಹಿತಿಯನ್ನು ಬಂಧಿಸಿದೆ.

ಕಣ್ಣನ್ ಬಂಧನವನ್ನು ಬಿಜೆಪಿ ಸ್ವಾಗತಿಸಿದ್ದರೆ, ಕಾಂಗ್ರೆಸ್ ಹಾಗೂ ಎಐಎಡಿಎಂಕೆ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ವಾಧಿಕಾರ ಸರ್ಕಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

English summary
Tamil Write Nellai Kannan Arrested For Provocative Speech Against Prime minister Narendra Modi and Home minister Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X