ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: 15 ಲಕ್ಷ ಮೌಲ್ಯದ ಚಿನ್ನವನ್ನು ಎಟಿಎಂ ಡಸ್ಟ್‌ಬಿನ್‌ಗೆ ಎಸೆದ ಮಹಿಳೆ

|
Google Oneindia Kannada News

ಚೆನ್ನೈ ಜುಲೈ 6: ಖಿನ್ನತೆ ಮತ್ತು ನಿದ್ದೆಗೆಡುವ ಅಸ್ವಸ್ಥತೆಯಿಂದ ಬಳಲುತ್ತಿದ್ದ 35 ವರ್ಷದ ಮಹಿಳೆಯೊಬ್ಬರು ಸೋಮವಾರ ಕುಂದ್ರತ್ತೂರ್ ಮುರುಗನ್ ಕೊಯಿಲ್ ರಸ್ತೆಯಲ್ಲಿರುವ ಎಟಿಎಂನ ಡಸ್ಟ್‌ಬಿನ್‌ಗೆ 15 ಲಕ್ಷ ರೂಪಾಯಿ ಮೌಲ್ಯದ 43 ಚಿನ್ನಾಭರಣಗಳನ್ನು ಎಸೆದಿದ್ದಾರೆ. ಕುಂದ್ರತ್ತೂರು ಪೊಲೀಸರು ಎಟಿಎಂನ ಭದ್ರತಾ ಸಿಬ್ಬಂದಿಗೆ ಅಲರ್ಟ್ ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಭದ್ರತಾ ಸಿಬ್ಬಂದಿ ಡಸ್ಟ್‌ಬಿನ್‌ನೊಳಗೆ ಚೀಲವನ್ನು ಗಮನಿಸಿ ಅದನ್ನು ತೆರೆದರು. ಬ್ಯಾಗ್‌ನೊಳಗೆ ಚಿನ್ನಾಭರಣ ತುಂಬಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಸಿಬ್ಬಂದಿ ತಕ್ಷಣ ಎಟಿಎಂನ ಬ್ಯಾಂಕ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದು, ಬ್ಯಾಂಕ್ ಕುಂದ್ರತ್ತೂರು ಠಾಣೆಗೆ ದೂರು ನೀಡಿದ್ದಾರೆ.

 Tamil Nadu: Woman throws gold worth 15 lakhs into ATM dustbin

ದೂರಿನ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಚೀಲವನ್ನು ಎಸೆದಿರುವುದು ಕಂಡುಬಂದಿದೆ. ಸೋಮವಾರ ನಸುಕಿನ ವೇಳೆಯಲ್ಲಿ ತಮ್ಮ 35 ವರ್ಷದ ಮಗಳು ನಿದ್ರಾ ನಡಿಗೆಯ ಅಸ್ವಸ್ಥತೆಯಿಂದ ತಮ್ಮ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ದಂಪತಿಯಿಂದ ಪೊಲೀಸರು ದೂರನ್ನು ಸ್ವೀಕರಿಸಿದ್ದಾರೆ. ಆದರೆ, ಕೆಲವೇ ಗಂಟೆಗಳಲ್ಲಿ ಮಗಳು ಮನೆಗೆ ಮರಳಿದ್ದಾಳೆ ಎಂದು ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 Tamil Nadu: Woman throws gold worth 15 lakhs into ATM dustbin

ಆದರೂ, ಪೊಲೀಸರು ತಮ್ಮ ಮಗಳು ಮತ್ತು ಆಭರಣಗಳನ್ನು ಗುರುತಿಸಿದ ದಂಪತಿಗಳಿಗೆ ದೃಶ್ಯಾವಳಿಗಳನ್ನು ತೋರಿಸಿದರು. ಬಳಿಕ ಪೊಲೀಸರು ಚಿನ್ನಾಭರಣವನ್ನು ದಂಪತಿಗೆ ಹಸ್ತಾಂತರಿಸಿದ್ದಾರೆ. ಕುಂದ್ರತ್ತೂರು ಇನ್ಸ್‌ಪೆಕ್ಟರ್ ಚಂದ್ರು ಅವರು ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಸಕಾಲದಲ್ಲಿ ಎಚ್ಚರಿಕೆ ವಹಿಸದಿದ್ದರೆ ಸರಿಯಾದ ಸಮಯಕ್ಕೆ ಚಿನ್ನಾಭರಣ ವಶಪಡಿಸಿಕೊಳ್ಳುತ್ತಿರಲಿಲ್ಲ ಎಂದು ಅವರು ಶ್ಲಾಘಿಸಿದ್ದಾರೆ.

English summary
A 35-year-old woman suffering from depression and sleeping disorder threw 43 pieces of gold jewelery worth Rs 15 lakh into the dustbin of an ATM on Kundrathur Murugan Koil Road on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X