ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿ ಮೂರು ವರ್ಷದ ನಂತರ ಟಿಕ್ ಟಾಕ್ ನಲ್ಲಿ ಪತ್ತೆಯಾದ ಪತಿ!

|
Google Oneindia Kannada News

ಚೆನ್ನೈ, ಜುಲೈ 03: ಒಂದಿಲ್ಲೊಂದು ಪ್ರಮಾದಕ್ಕ ಕಾರಣವಾಗುತ್ತಿರುವ ಟಿಕ್ ಟಾಕ್ ಮೊಬೈಲ್ app ಅನ್ನು ನಿಷೇಧಿಸಲು ಹಲವು ರಾಜ್ಯಗಳು ಮುಂದಾಗಿರುವ ಹೊತ್ತಲ್ಲೇ ಈ ವಿಡಿಯೋದಿಂದ ಮಹಿಳೆಯೊಬ್ಬರು ನಾಪತ್ತೆಯಾದ ತಮ್ಮ ಪತಿಯನ್ನು ಕಂಡುಕೊಂಡಿದ್ದಾರೆ. ಈ ಮೂಲಕ ವಿರಳಾತಿವಿರಳ ಪ್ರಕರಣದಲ್ಲಿ ಟಿಕ್ ಟಾಕ್ ಉಪಕಾರಕ್ಕೂ ಬಂದಂತಾಗಿದೆ!

ತಮಿಳುನಾಡಿನ ವಿಲ್ಲುಪುರಂ ನ ಜಯಪ್ರಧಾ ಎಂಬ ಮಹಿಳೆ ಸುರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಆದರೆ 2017 ರ ಆರಂಭದಲ್ಲಿ ಸುರೇಶ್ ಅವರು ತಮ್ಮ ಊರಾದ ಕೃಷ್ಣಗಿರಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ನಂತರ ಅವರು ವಾಪಸ್ ಬಂದಿರಲಿಲ್ಲ. ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹಲವರನ್ನು ವಿಚಾರಿಸಿದರೂ ಸುರೇಶ್ ಅವರ ಸುಳಿವು ಸಿಕ್ಕಿರಲಿಲ್ಲ. ಕೂಡಲೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಸುರೇಶ್ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ.

ತುಮಕೂರು ಯುವಕನ ಜೀವನ ನರಕ ಮಾಡಿದ ಟಿಕ್‌ಟಾಕ್‌ತುಮಕೂರು ಯುವಕನ ಜೀವನ ನರಕ ಮಾಡಿದ ಟಿಕ್‌ಟಾಕ್‌

ಇದಾಗಿ ಮೂರು ವರ್ಷಗಳ ನಂತರ ಜಯಪ್ರಧಾ ಅವರ ಸಂಬಂಧಿಯೊಬ್ಬರು ಟಿಕ್ ಟಾಕ್ ವಿಡೀಯೋ ನೋಡುತ್ತಿದ್ದಾಗ, ಜಯಪ್ರಧಅ ಅವರ ಪತಿ ಸುರೇಶ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರನ್ನು ಅವರು ಕಂಡರು. ಕೂಡಲೇ ಈ ಬಗ್ಗೆ ಜಯಪ್ರಧಾ ಅವರಿಗೆ ತಿಳಿಸಿದಾಗ ಜಯಪ್ರಧಾ ವಿಡಿಯೋವನ್ನು ನೋಡಿ ಅವರು ಸುರೇಶ್ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಿಲ್ಲುಪುರಂ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದರು. ಈ ವಿಡಿಯೋ ಮುಲಕ ಪೊಲೀಸರು ಸುರೇಶ್ ನನ್ನು ಪಯ್ತೆ ಮಾಡಲು ಸಮರ್ಥರಾದರು.

Tamil Nadu woman finds her husband after three years on TikTok

ಟಿಕ್ ಟಾಕ್ ಬ್ಯಾನ್?: ಆಪ್‌ ತೆಗೆದು ಹಾಕಲು ಗೂಗಲ್‌, ಆಪಲ್‌ಗೆ ಸೂಚನೆಟಿಕ್ ಟಾಕ್ ಬ್ಯಾನ್?: ಆಪ್‌ ತೆಗೆದು ಹಾಕಲು ಗೂಗಲ್‌, ಆಪಲ್‌ಗೆ ಸೂಚನೆ

ಕೆಲವು ಕೌಟುಂಬಿಕ ಕಾರಣಗಳಿಂದ ಬೇಸರಗೊಂಡು ಹೊಸೂರಿನ ತಮ್ಮ ತಾಯಿಯ ಮನೆಯಲ್ಲಿ ಸುರೇಶ್ ವಾಸವಿದ್ದರು ಎಂಬುದು ಪೊಲೀಸರ ವಿಚಾರಣೆಯ ವೇಳೆ ತಿಳಿದುಬಂದಿತ್ತು. ನಂತರ ಪತ್ನಿ ಮತ್ತು ಮಕ್ಕಳ ಜೊತೆ ವಾಸವಿರಲು ಸುರೇಶ್ ಒಪ್ಪಿದ ಕಾರಣ ಅವರನ್ನು ವಿಲ್ಲುಪುರಂ ಗೆ ಕಳಿಸಲಾಗಿದೆ.

English summary
Tamil Nadu woman found her husband after three years through a video on TikTok. Here is a bizarre story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X